ಸಮಾಜದ ಅಭಿವೃದ್ಧಿಗೆ ಒಗ್ಗಟ್ಟು ಅತೀ ಮುಖ್ಯ

KannadaprabhaNewsNetwork |  
Published : Feb 05, 2025, 12:30 AM IST
4 ರೋಣ 3.  ಶ್ರೀ ಕಾಳಿಕಾದೇವಿ ಲಕ್ಷ ದೀಪೋತ್ಸವ ಅಂಗವಾಗಿ ಜರುಗಿದ  ಕಾರ್ಯಕ್ರಮವನ್ನು ಶಾಸಕ ಜಿ.ಎಸ್.ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ನಮ್ಮಿಂದ ಏನಾದರೂ ಸಾಧಿಸಬೇಕು ಎಂದಾದಲ್ಲಿ ಅದು ಕಷ್ಟಕರವಾಗುವದು ಎಂದು ಅಂದುಕೊಳ್ಳದೇ ಸಾಧನೆ ಅಸಾಧ್ಯವಲ್ಲ ಎಂಬ ದೃಢ ಸಂಕಲ್ಪದೊಂದಿಗೆ ಸಮಾಜ ಬಾಂಧವರು ಒಗ್ಗಟ್ಟಾಗಿ ಶ್ರಮಿಸಬೇಕು.

ರೋಣ: ರಾಜಕೀಯ,ಆರ್ಥಿಕ, ಸಾಮಾಜಿಕವಾಗಿ ಸಮಾಜ ಅಭಿವೃದ್ಧಿ ಹೊಂದಲು ಒಗ್ಗಟ್ಟು ಅತೀ ಮುಖ್ಯವಾಗಿದ್ದು, ಈ ದಿಶೆಯಲ್ಲಿ ವಿಶ್ವಕರ್ಮ ಸಮಾಜ ಒಗ್ಗಟ್ಟಾಗಬೇಕು ಎಂದು ಖನಿಜ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಅವರು ಪಟ್ಟಣದ ಶ್ರೀಕಾಳಿಕಾದೇವಿ ದೇವಸ್ಥಾನ ಆವರಣದಲ್ಲಿ ರೋಣ ಹಾಗೂ ಗಜೇಂದ್ರಗಡ ತಾಲೂಕಿನ ವಿಶ್ವಕರ್ಮ ಸಮಾಜ, ಶ್ರೀ ಕಾಳಿಕಾದೇವಿ ದೇವಸ್ಥಾನ ಸುಧಾರಣಾ ಸೇವಾ ಸಮಿತಿ ರೋಣ,ವಿಶ್ವಕರ್ಮ ಯುವಕ ಮಂಡಳ ಹಾಗೂ ವಿವಿಧ ಮಹಿಳಾ ಮಂಡಳ, ಸರ್ವ ಧರ್ಮ ಸಮಾಜ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಮುಗಳಿ ರಸ್ತೆಯಲ್ಲಿರುವ ಜಗನ್ಮಾತೆ ಶ್ರೀ ಕಾಳಿಕಾದೇವಿಯ ಲಕ್ಷ ದೀಪೋತ್ಸವವು ಅಂಗವಾಗಿ ಜರುಗಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮದು ಸಣ್ಣ ಸಮಾಜ, ನಮ್ಮಿಂದ ಏನಾದರೂ ಸಾಧಿಸಬೇಕು ಎಂದಾದಲ್ಲಿ ಅದು ಕಷ್ಟಕರವಾಗುವದು ಎಂದು ಅಂದುಕೊಳ್ಳದೇ ಸಾಧನೆ ಅಸಾಧ್ಯವಲ್ಲ ಎಂಬ ದೃಢ ಸಂಕಲ್ಪದೊಂದಿಗೆ ಸಮಾಜ ಬಾಂಧವರು ಒಗ್ಗಟ್ಟಾಗಿ ಶ್ರಮಿಸಬೇಕು. ವಿಶ್ವಕರ್ಮ ಸಮಾಜ ನಾಡಿಗೆ ಅಪಾರ ಕೊಡುಗೆ ನೀಡಿದೆ. ಸಮಾಜದ ಏಳ್ಗೆಗಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆ, ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಂಡು ಸಮಾಜ ಬೆಳೆಸಬೇಕು. ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಕಲ್ಪಿಸಬೇಕು. ರೋಣ ಮತ್ತು ಗಜೇಂದ್ರಗಡ ತಾಲೂಕಿನಲ್ಲಿ ವಿಶ್ವಕರ್ಮ ಸಮಾಜ ಒಗ್ಗಟ್ಟಿನಿಂದ ಸಮಾಜಮುಖಿ ಸೇವೆ ಗೈಯುತ್ತಿರುವದು ಗುರುತರವಾಗಿದೆ.ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ಲಕ್ಷ ದೀಪೋತ್ಸವ ನಡೆಯುತ್ತಿರುವದು ಸಂತಸ ತಂದಿದೆ ಎಂದರು.

ದಾನಿಗಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಸಾನ್ನಿಧ್ಯವನ್ನು ಗುಲಗಂಜಿಮಠದ ಗುರುಪಾದ ಸ್ವಾಮೀಜಿ, ನರಗುಂದ ಸಿದ್ದವೀರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ನಾಗಲಿಂಗ ಸ್ವಾಮೀಜಿ, ತೀರ್ಥೇಂದ್ರ ಸ್ವಾಮೀಜಿ, ಗುರಿ ನಾಗಾಮೂರ್ತೇಂದ್ರ ಸ್ವಾಮೀಜಿ, ಮುತ್ತಜ್ಜ ಸ್ವಾಮೀಜಿ, ಅಭಿನವ ಯಚ್ಚರ ಸ್ವಾಮೀಜಿ ವೈಭವ ಸ್ವಾಮೀಜಿ ಮೇಗರಾಜ ಸ್ವಾಮೀಜಿ, ಹಜರತ್ ಸೈಯದ ಸುಲೇಮಾನ ಶಾವಲಿ ಅಜ್ಜನವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಅಧ್ಯಕ್ಷತೆಯನ್ನು ಕಾಳಿಕಾದೇವಿ ದೇವಸ್ಥಾನ ಸುಧಾರಣಾ ಸೇವಾ ಸಮಿತಿ ಅಧ್ಯಕ್ಷ ಯೋಗೇಶ ಕಮ್ಮಾರ, ವಿಶ್ವಕರ್ಮ ಸಮಾಜ ರೋಣ ತಾಲೂಕಾಧ್ಯಕ್ಷ ಕಾಳೇಶ ಪೋತದಾರ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವೀರುಪಾಕ್ಷಪ್ಪ ಪೋತದಾರ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಡಾ. ವಸಂತ ಮುರಳಿ ಆಚಾರ್ಯ, ವಿಶ್ವಕರ್ಮ ಜನಸಂಘ ರಾಜ್ಯಾಧ್ಯಕ್ಷೆ ಲಕ್ಷ್ಮೀ ಬಡಿಗೇರ, ಅಕ್ಕಮಹಾದೇವಿ ಮಹಿಳಾ ಮಂಡಳ ಅಧ್ಯಕ್ಷೆ ಅನ್ನಪೂರ್ಣ ಪಾಟೀಲ, ನಿರಂಜನ ಬಡಿಗೇರ, ಅಮರಪ್ಪ ಬಡಿಗೇರ, ರಾಜಗೋಪಾಲ ಕಡ್ಲಿಕೊಪ್ಪ, ಕೊತ್ಲಪ್ಪ ಪತ್ತಾರ, ಭಾಸ್ಕರ ಬಡಿಗೇರ, ನಾರಾಯಣ ವಡ್ಡಟ್ಟಿ, ಅಕ್ಕಮಹಾದೇವಿ ಮಹಿಳಾ ಮಂಡಳ ಅಧ್ಯಕ್ಷೆ ಅನ್ನಪೂರ್ಣ.ಜಿ.ಪಾಟೀಲ, ಸಣ್ಣಮಾನಪ್ಪ ಬಡಿಗೇರ, ಮಿಥುನ ಪಾಟೀಲ, ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಮೌನೇಶ ಅಕ್ಕಸಾಲಿಗರ, ಪಾಂಡುರಂಗ ಪತ್ತಾರ, ಪ್ರಭುಗೌಡ ಪಾಟೀಲ, ಮೌನೇಶ ಬಡಿಗೇರ, ಸಂತೋಷ ಬಡಿಗೇರ, ಸಂಜಯ ರಡ್ಡೇರ, ಮಾನಪ್ಪ ಬಡಿಗೇರ, ವಿಶ್ವನಾಥ ಜಿಡ್ಡಿಬಾಗೀಲ, ಶ್ರೀಧರ ಬಿದರಳ್ಳಿ ಮುಂತಾದವರು ಉಪಸ್ಥಿತರಿರುವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಘರ್ಷದ ಸಮಾಜಕ್ಕೆ ಧ್ಯಾನವೇ ಪರಿಹಾರ : ಶ್ರೀ ಶ್ರೀ
ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ