ಧಾರವಾಡದ ಎನ್‌ಸಿಸಿ ಬಟಾಲಿಯನ್‌ನಿಂದ ಏಕತಾ ಓಟ

KannadaprabhaNewsNetwork |  
Published : Aug 15, 2025, 01:00 AM IST
12ಡಿಡಬ್ಲೂಡಿ2ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಉತ್ತಮ ಎನ್‌ಸಿಸಿ ಕೆಡೆಟ್‌ಗಳಿಗೆ ಬಹುಮಾನ ವಿತರಿಸಲಾಯಿತು.  | Kannada Prabha

ಸಾರಾಂಶ

ಕೆಲಗೇರಿ ಕೆರೆ ಮತ್ತು ಕರ್ನಾಟಕ ಕಾಲೇಜು ವೃತ್ತದ ಸುತ್ತಮುತ್ತಲಿನ ಪ್ರದೇಶವನ್ನು ಎನ್‌ಸಿಸಿ ಕೆಡೆಟ್‌ಗಳ ಸ್ವಯಂಸೇವಕರು ಸ್ವಚ್ಛಗೊಳಿಸಿದರು. ಒಗ್ಗಟ್ಟು ಪ್ರದರ್ಶಿಸುವುದು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳಿಗೆ ಜಾಗೃತಿ ಮೂಡಿಸುವುದು. ಸ್ವಚ್ಛತೆ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಏಕತಾ ಓಟ ಜರುಗಿತು.

ಧಾರವಾಡ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 24 ಕರ್ನಾಟಕ ಬಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಅನೂಪ್ ರಾಷಲ್ ಗಾಂವಕರ, ಲೆಫ್ಟನೆಂಟ್ ಕರ್ನಲ್ ಸುಜನ ರಾಯ್, ಲೆಫ್ಟನೆಂಟ್ ಕರ್ನಲ್ ವೈ.ಎಸ್. ರನಾವತ್‌ ನೇತ್ವದಲ್ಲಿ ಏಕತಾ ಓಟ, ಸ್ವಚ್ಛತಾ ಅಭಿಯಾನ ಮತ್ತು ಪುನೀತ್ ಸಾಗರ್ ಅಭಿಯಾನ ಮಂಗಳವಾರ ಜರುಗಿತು.

ಕೆಲಗೇರಿ ಕೆರೆ ಮತ್ತು ಕರ್ನಾಟಕ ಕಾಲೇಜು ವೃತ್ತದ ಸುತ್ತಮುತ್ತಲಿನ ಪ್ರದೇಶವನ್ನು ಎನ್‌ಸಿಸಿ ಕೆಡೆಟ್‌ಗಳ ಸ್ವಯಂಸೇವಕರು ಸ್ವಚ್ಛಗೊಳಿಸಿದರು. ಒಗ್ಗಟ್ಟು ಪ್ರದರ್ಶಿಸುವುದು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳಿಗೆ ಜಾಗೃತಿ ಮೂಡಿಸುವುದು. ಸ್ವಚ್ಛತೆ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಏಕತಾ ಓಟ ಜರುಗಿತು.

ಈ ಓಟವು ಕೆಲಗೇರಿ ಕೆರೆಯಿಂದ ಸಾಯಿ ಮಂದಿರ, ದಾಸನಕೊಪ್ಪ ವೃತ್ತ, ಆಕಾಶವಾಣಿ ವೃತ್ತ, ಕರ್ನಾಟಕ ಕಾಲೇಜು ವೃತ್ತದ ಮೂಲಕ ಕಾಲೇಜು ಮೈದಾನ ತಲುಪಿತು. ಕರ್ನಾಟಕ ವಿಜ್ಞಾನ, ಕಲಾ ಮಹಾವಿದ್ಯಾಲಯ, ಕಿಟೆಲ್ ಕಾಲೇಜು, ಅಗ್ರಿ ಕಾಲೇಜು, ವಿದ್ಯಾರಣ್ಯ ಪಿಯು ಕಾಲೇಜು, ಸೆಂಟ್ ಜೋಸೆಪ್ ಹೈಸ್ಕೂಲ್, ಜೆಎಸ್‌ಎಸ್ ಸ್ಕೂಲ್, ಕೆಇ ಬೋರ್ಡ್ ಹೈಸ್ಕೂಲ್, ಯುಪಿಎಸ್, ಆರ್‌ಎಲ್‌ಎಸ್ , ಕರ್ನಾಟಕ ಹೈಸ್ಕೂಲ್, ವಿದ್ಯಾರಣ್ಯ, ಕೆಎಲ್‌ಇ , ರಾಷ್ಟ್ರೋತ್ಥಾನ, ಕೆಎನ್‌ಕೆ, ಪ್ರಜೆಂಟೇಶನ್‌, ಜೆಎಸ್ಸೆಸ್‌, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಎನ್‌ಸಿಸಿ ಕೆಡೆಟ್‌ಗಳು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು.

ನಂತರ ಕರ್ನಾಟಕ ಕಾಲೇಜಿನಲ್ಲಿ ಕ್ಯಾಪ್ಟನ್ ಎಂ.ಜಿ.ಹಿರೇಮಠ ಅವರಿಂದ ಅಭಿಯಾನದ ಮಹತ್ವದ ಬಗ್ಗೆ ಉಪನ್ಯಾಸ ಜರುಗಿತು. ಕವಿವಿ ಕುಲಪತಿ ಡಾ.ಎ.ಎಂ.ಖಾನ ಬಹುಮಾನ ವಿತರಿಸಿದರು. ಕ್ಯಾಪ್ಟನ್ ಡಾ.ಎಂ.ಎಚ್.ಮುಲ್ಲಾ, ಕ್ಯಾಪ್ಟನ್ ಮಹೇಶ ಕುರುಬರ, ಡಾ. ಸಮೀರ ಛಬ್ಬಿ, ಪ್ರಾಂಶುಪಾಲರಾದ ಡಾ.ಎಂ.ಎಸ್. ಸಾಳುಂಕೆ, ಡಾ.ಐ.ಸಿ. ಮುಳಗುಂದ, ಎಲ್ಲಾ ಕಾಲೇಜು ಹಾಗೂ ಹೈಸ್ಕೂಲಿನ ಎನ್‌ಸಿಸಿ ಕೆಡೆಟ್ ಹಾಗೂ ಅಧಿಕಾರಿಗಳು ಸೇರಿದಂತೆ ಸುಮಾರು ಏಳು ನೂರು ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್