ಕಲೆ, ಸಾಹಿತ್ಯ, ಸಂಗೀತದಿಂದ ಒಗ್ಗಟ್ಟು: ಚಿದ್ವಿಲಾಸ್‌

KannadaprabhaNewsNetwork |  
Published : Aug 15, 2026, 03:45 AM IST
 | Kannada Prabha

ಸಾರಾಂಶ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಶುಕ್ರವಾರ ವಿವಿಧ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ಕೊಡಗು ಪತ್ರಿಕಾ ಭವನದ ಟಾಟಾ ಕಾಫಿ ಸಭಾಂಗಣದಲ್ಲಿ ಗಾನ ಕೋಗಿಲೆ ದಿವಂಗತ ಎಸ್. ಜಾನಕಿ ಅಮ್ಮ ಅವರಿಗೆ ಗಾನ ನಮನ ನೆರವೇರಿತು.

ಮಡಿಕೇರಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಶುಕ್ರವಾರ ವಿವಿಧ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ಕೊಡಗು ಪತ್ರಿಕಾ ಭವನದ ಟಾಟಾ ಕಾಫಿ ಸಭಾಂಗಣದಲ್ಲಿ ಗಾನ ಕೋಗಿಲೆ ದಿವಂಗತ ಎಸ್. ಜಾನಕಿ ಅಮ್ಮ ಅವರಿಗೆ ಗಾನ ನಮನ ನೆರವೇರಿತು.

ಎಸ್. ಜಾನಕಿ ಅವರಿಗೆ ಪುಷ್ಪ ನಮನ-ನುಡಿ ನಮನ- ಗಾನ ನಮನದಲ್ಲಿ ಗಾಯಕರು ಎಸ್. ಜಾನಕಿ ಅವರು ಹಾಡಿರುವ ಹಾಡುಗಳನ್ನು ಸುಮಧುರವಾಗಿ ಹಾಡಿ ಸಂಗೀತ ಪ್ರಿಯರಿಗೆ ಸಂಗೀತದ ರಸದೌತಣ ಉಣಬಡಿಸಿದರು.

ಉದ್ಘಾಟಿಸಿ ದಿ. ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಗಾಯಕರೂ ಆದ ‘ಶಕ್ತಿ’ ದಿನಪತ್ರಿಕೆ ಸಂಪಾದಕ ಜಿ. ಚಿದ್ದಿಲಾಸ್ ಮಾತನಾಡಿ, ‘ದಕ್ಷಿಣ ಭಾರತದ ಕೋಗಿಲೆ’ ಎಂದೇ ಖ್ಯಾತಿ ಪಡೆದಿರುವ ಎಸ್. ಜಾನಕಿ ಅವರು ಆರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅಪರೂಪದ ಕಂಠಸಿರಿಯಿಂದ ಭಾರತೀಯ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ್ದ ಜಾನಕಿ ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ದಕ್ಷಿಣ ಭಾರತದ ಕೋಗಿಲೆ ಎಂದೇ ಖ್ಯಾತಿ ಪಡೆದಿರುವ ಜಾನಕಿ ಅವರು, ಆರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅಪರೂಪದ ಕಂಠಸಿರಿಯಿಂದ ಭಾರತೀಯ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ್ದರು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರು, ಜಾನಕಿ ಅವರಿಗೆ ನುಡಿ ನಮನ ಸಲ್ಲಿಸುವ ಉದ್ದೇಶದಿಂದ ಅವರ ಹೆಸರಿನಲ್ಲಿ ಆಯೋಜಿಸಿರುವ ಗೀತ ನಮನ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿರುವ ಗಾಯಕರು ಜಾನಕಿ ಅವರ ಹಾಡುಗಳನ್ನು ಹಾಡಿ ಸಂಗೀತಪ್ರಿಯರನ್ನು ರಂಜಿಸಿದ್ದಾರೆ ಎಂದರು.

ಕಡ್ಲೇರ ತುಳಸಿ ಮೋಹನ್ , ಎಸ್. ಜಾನಕಿ ಅವರಿಗೆ ಪುಷ್ಪ ನಮನ ಗೀತೆ ಹಾಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ , ಗಾಯಕರಿಗೆ ಪ್ರಶಂಸನಾ ಪತ್ರ ವಿತರಿಸಿದರು.

ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಪುದಿನೆರವನ ರೇವತಿ ರಮೇಶ್, ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಲೇಖಕರ ಬಳಗದ ಪ್ರಧಾನ ಕಾರ್ಯದರ್ಶಿ ಭಾರತಿ ರಮೇಶ್, ಸಹ ಕಾರ್ಯದರ್ಶಿ ಕೆ.ವಿ. ಉಮೇಶ್, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಮಾಜಿ ಅಧ್ಯಕ್ಷ ಅಂಬೇಕಲ್ ನವೀನ್, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ನಿವೃತ್ತ ಪ್ರಾಂಶುಪಾಲ ಕೆ.ಜೆ. ದಿವಾಕರ್, ಜಿಲ್ಲಾ ದಸಂಸ ಸಂಚಾಲಕ ಎಚ್.ಎಲ್. ದಿವಾಕರ್, ಸುಬ್ರಾಯ ಸಂಪಾಜೆ ಇದ್ದರು.

ರಂಜಿತ್ ಕವಲಪಾರ ನಿರ್ವಹಿಸಿದರು. ಕೆ. ತಿಮ್ಮಪ್ಪ ಸ್ವಾಗತಿಸಿದರು. ರೇವತಿ ರಮೇಶ್ ವಂದಿಸಿದರು.

ಪುಷ್ಪ ನಮನ: ಗೀತ ಗಾಯನ ಕಾರ್ಯಕ್ರಮಕ್ಕೆ ಸಹಯೋಗ ನೀಡಿದ್ದ ಸಹಮತ ವೇದಿಕೆ, ಮಡಿಕೇರಿ ಲಯನ್ಸ್ ಸಂಸ್ಥೆ, ಕೊಡಗು ಜಾನಪದ ಪರಿಷತ್ತು, ಮಡಿಕೇರಿ ತಾಲೂಕು ಕಸಾಪ, ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ, ನಗರ ಕ್ರೈಸ್ತ ಸಹಕಾರ ಸಂಘ, ಕೊಡಗು ಹಿತ ರಕ್ಷಣಾ ವೇದಿಕೆ ಹಾಗೂ ಚೌಡೇಶ್ವರಿ ದೇವಾಂಗ ಮಹಿಳಾ ಸಹಕಾರ ಬ್ಯಾಂಕ್ , ಕೊಡಗು ಪತ್ರಕರ್ತರ ಸಂಘ, ಸ್ಕೌಟ್ಸ್, ಗೈಡ್ಸ್ ನ ಜಿಲ್ಲಾ ಸಂಸ್ಥೆ, ಜಿಲ್ಲಾ ಅಹಿಂದ ಒಕ್ಕೂಟ ಸೇರಿದಂತೆ ಮತ್ತಿತರ ಸಂಸ್ಥೆಗಳ ಪದಾಧಿಕಾರಿಗಳು ಜತೆಗೂಡಿ ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಗಮನ ಸೆಳೆದ ಗಾನಸುಧೆ: ಡಾ. ಕಾವೇರಿ ಪ್ರಕಾಶ್, ಅಂಬೇಕಲ್ ನವೀನ್, ಕಡ್ಲೇರ ತುಳಸಿ ಮೋಹನ್, ಭಾರತಿ ರಮೇಶ್, ಸುಜಾತ ಗುರುಪ್ರಸಾದ್, ತನುಶ್ರೀ, ಗೀತಾ ಸಂಪತ್, ಡಿಂಪಲ್ ಹೊನ್ನಪ್ಪ ಸಿದ್ದಾಪುರ, ಶ್ವೇತಾ ರವೀಂದ್ರ, ಕುಶಾಲನಗರದ ಸೂದನ ಗೋಪಾಲ, ಅಂಬಿಕಾ ರಾವ್, ಕೆ.ವಿ. ಉಮೇಶ್, ಬಿ.ಎಸ್. ಪರಮೇಶ್, ಸಪ್ನ ಮಧುಕರ್ ಶೇಟ್, ಮಂದ್ರಿರ ಸುಗೀತ ಹೊಸಕೇರಿ, ಬಿ.ಜಿ. ಅನಂತ ಶಯನ, ಎಚ್. ಎಸ್. ರಶ್ಮಿ ಹೊದವಾಡ, ಹೇಮಾ ಅಜಿತ್, ಪಂಚಮಿ ಬಿ.ಬಿ., ಡಿ.ಎಂ. ಶಿವರಂಜಿನಿ ಮತ್ತು ಪಿ.ಎಂ. ಮೇಘನಾ , ಮೇಘಾ ಸುಜಯ್, ಟಿ.ಎಸ್. ಗಾಯತ್ರಿ, ಮೇಘಾ ಸುಜಯ್ ಎಚ್. ಎಸ್. ಲೋಕೇಶ್ ಮತ್ತು ಚಂಗಪ್ಪ, ಪ್ರೇಮ ರಾಘವಯ್ಯ ಚೊಕ್ಕಾಡಿ, ಕೇಕಡ ಇಂದುಮತಿ ರವೀಂದ್ರ, ಇನ್ಸ್‌ಪೆಕ್ಟರ್ ಚಂದ್ರಶೇಖರ್,

ಪಿಎಸ್ಐ ವೈರ್‌ಲೆಸ್ ಧನಂಜಯ್ ಕೆ.ಎಸ್, ಎಎಸ್ಐ ರಾಜೇಶ್, ಹೆಡ್ ಕಾನ್‌ಸ್ಪೆಬಲ್‌ಗಳಾದ ಸುಧೀರ್ ಎಚ್.ಎಸ್, ಬಸವರಾಜು, ಶಶಿಧರ್ ಸೇರಿದಂತೆ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ, ಕೊಡಗು ಜಿಲ್ಲಾ, ಮಹಿಳಾ ಬರಹಗಾರರ ಸಂಘ, ಶೃತಿಲಯ ತಂಡ ಮಡಿಕೇರಿ ಸೇರಿದಂತ ವಿವಿಧ ತಂಡದ ಗಾಯಕರು ಜಾನಕಿ ಅವರ ಹಾಡನ್ನು ಹೇಳಿ ಸಂಗೀತಪ್ರಿಯರ ಗಮನ ಸೆಳೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಚಿವ ನಾಗೇಂದ್ರ ರಾಜೀನಾಮೆಗೆ ಉಡುಪಿ ಬಿಜೆಪಿ ಆಗ್ರಹ
ಕರಾವಳಿಗೆ ಪ್ರತ್ಯೇಕ ನಿಯಮ ರೂಪಿಸಿ: ಗಂಟಿಹೊಳೆ