ದಾಬಸ್‍ಪೇಟೆ: ಪೌರಾಣಿಕ ನಾಟಕಗಳಿಂದ ಜನಸಾಮಾನ್ಯರ ಬದುಕು ಸುಸ್ತಿರವಾಗುತ್ತದೆ. ಆಧುನಿಕ ಯುಗದಲ್ಲಿ ಧಾರಾವಾಹಿ, ಸಿನಿಮಾಗಳ ಹಾವಳಿಯಲ್ಲೂ ಗ್ರಾಮಗಳಲ್ಲಿ ಯುವಕರೆಲ್ಲರೂ ಸೇರಿ ಪೌರಾಣಿಕ ನಾಟಕಗಳ ಮೂಲಕ ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು
ದಾಬಸ್‍ಪೇಟೆ: ಪೌರಾಣಿಕ ನಾಟಕಗಳಿಂದ ಜನಸಾಮಾನ್ಯರ ಬದುಕು ಸುಸ್ತಿರವಾಗುತ್ತದೆ. ಆಧುನಿಕ ಯುಗದಲ್ಲಿ ಧಾರಾವಾಹಿ, ಸಿನಿಮಾಗಳ ಹಾವಳಿಯಲ್ಲೂ ಗ್ರಾಮಗಳಲ್ಲಿ ಯುವಕರೆಲ್ಲರೂ ಸೇರಿ ಪೌರಾಣಿಕ ನಾಟಕಗಳ ಮೂಲಕ ಒಗ್ಗಟ್ಟು ಪ್ರದರ್ಶಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.
ಶಿವಗಂಗೆಯಲ್ಲಿ ಗಂಗಾಧರೇಶ್ವರ ಕಲಾ ಬಳಗ ಹಮ್ಮಿಕೊಂಡಿದ್ದ ಗಿರಿಜಾ ಕಲ್ಯಾಣ ಅಥವಾ ದಕ್ಷಬ್ರಹ್ಮ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರು ಈ ನಾಟಕಗಳನ್ನು ನೋಡುವುದರಿಂದ ಅದರಲ್ಲಿ ಬರುವ ಧೈರ್ಯ, ಕುತಂತ್ರ ಹಾಗೂ ರಾಜನೀತಿಗಳಿಂದ ಇಂದಿನ ಜನ ಅವುಗಳನ್ನು ಕಲಿತುಕೊಂಡು ಉತ್ತಮವಾದವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನ ಸಾರ್ಥಕ ಎಂದರು.
ಮುಖಂಡ ಅಗಳಕುಪ್ಪೆ ಗೋವಿಂದರಾಜು, ಎನ್‌ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಮಾಜಿ ಅಧ್ಯಕ್ಷ ಸಂತೋಷ್, ಹನುಮಂತರಾಜು, ಸದಸ್ಯರಾದ ದಿನೇಶ್ ನಾಯಕ್, ಮನುಪ್ರಸಾದ್, ಟಿಎಪಿಸಿಎಂಎಸ್ ನಿರ್ದೇಶಕ ಮರಿಯಪ್ಪ, ಬರಗೇನಹಳ್ಳಿ ನಾರಾಯಣ್, ಲಂಕೇಶ್ ಗೌಡ, ಅಂಜನಮೂರ್ತಿ, ಹನುಮಂತರಾಜು ಕಲಾವಿದರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.