- ರಸ್ತೆಯಂಚಿನ ಬೃಹತ್ ಮರಗಳು ನೆಕ್ಕುರುಳುವ ಆತಂಕ । ತೆರವಿಗೆ ಆಗ್ರಹ
ಕನ್ನಡಪ್ರಭ ವಾರ್ತೆ ಶೃಂಗೇರಿಮಂಗಳೂರು ಶಿವಮೊಗ್ಗ ರಾ.ಹೆ 169ರ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಶೃಂಗೇರಿಯಿಂದ ನೆಮ್ಮಾರುವರೆಗೂ ಸುಮಾರು 10 ಕಿ.ಮಿ. ವ್ಯಾಪ್ತಿಯ ರಸ್ತೆಯಂಚಿನಲ್ಲಿ ಗುಡ್ಡ ಕೊರೆದು ರಸ್ತೆ ಅಗಲೀಕರಣ ಕೆಲಸದಲ್ಲಿ ಬಹೃತ್ ಮರಗಳ ಬುಡದವರೆಗೂ ಮಣ್ಣು ತೆಗೆದಿರುವುದರಿಂದ ಮರಗಳು ಗುಡ್ಡದ ತುದಿಯಲ್ಲಿ ನಿಂತಿವೆ.ಯಾವುದೇ ಆಧಾರ, ಬಲವಿಲ್ಲದೇ ನಿಂತಿರುವ ಈ ಮರಗಳು ಮಳೆ ಗಾಳಿ ಬಂದರೆ ಸಾಲುಗಟ್ಟಿ ರಸ್ತೆಗುರುಳಿ ಬಿದ್ದು ಸರಣಿ ಅನಾಹುತಗಳೇ ಸಂಭವಿಸುವುದರಲ್ಲಿ ಸಂಶಯವಿಲ್ಲ. ರಸ್ತೆಯುದ್ದಕ್ಕೂ ಗುಡ್ಡದ ಮೇಲೆ ಮರಗಳಿದ್ದು, ಮಣ್ಣು ಅಗೆಯುವಾಗ ಅವೈಜ್ಞಾನಿಕವಾಗಿ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಕೆಲ ದಿನಗಳಹಿಂದೆ ನೆಮ್ಮಾರು ತನಿಕೋಡು ಸಮೀಪ ಗುಡ್ಡ ಜರಿದು ಓರ್ವ ಕಾರ್ಮಿಕ ಮೃತಪಟ್ಟು ಹಾಗೂ ಮೂವರು ಗಾಯಗೊಂಡ ದಾರುಣ ಘಟನೆಯೂ ನಡೆದಿತ್ತು. ಆದರೂ ಕೂಡ ಹೆದ್ದಾರಿ ಇಲಾಖೆ ಎಚ್ಚೆತ್ತು ಕೊಂಡಿಲ್ಲ.ಕೇಳಿದರೆ ಅರಣ್ಯ ಇಲಾಖೆಯವರ ಮೇಲೆ ಹೊರಿಸುತ್ತಾರೆ. ಹೆದ್ದಾರಿ ಗುತ್ತಿಗೆದಾರರ ಹಾಗೂ ಅರಣ್ಯ ಇಲಾಖೆಯವರ ನಿರ್ಲಕ್ಷ್ಯದಿಂದ ಮಳೆ ಗಾಳಿ ಬಂದಲ್ಲಿ ಅನಾಹುತ ಮಾತ್ರ ಕಟ್ಟಿಟ್ಟ ಬುತ್ತಿಯಾಗಿದೆ. ಕೇವಲ ರಸ್ತೆ ಮೇಲೆ ಉರುಳುವುದಲ್ಲದೇ ವಿದ್ಯುತ್ ಲೈನ್ ಗಳ ಮೇಲೆಯೂ ಉರುಳಿ ಅನಾಹುತವಾಗುವ ಸಾಧ್ಯತೆಗಳಿವೆ.ದುರ್ಗಾದೇವಸ್ಥಾನ, ತ್ಯಾವಣ, ಗಡಿಕಲ್ ಬಳಿ ರಸ್ತೆಯಂಚಿನಲ್ಲಿಯೇ ಮರಗಳಿಗೆ ಕೆಲವೊಂದು ಬೃಹತ್ ಮರಗಳಿದ್ದು ಉರುಳಿದರೆ ದೊಡ್ಜ ಅನಾಹುತವಾಗಲಿವೆ. ಹೆದ್ದಾರಿ ಗುತ್ತಿಗೆದಾರರು ಇದನ್ನು ಗಂಭೀರವಾಗಿ ಪರಿಗಣಿಸದೇ ಕಾಮಗಾರಿ ಯಲ್ಲಿಯೇ ಮುಳುಗಿದಂತೆ ಕಾಣುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.. ಜನರ ಸುರಕ್ಷತೆ ದೃಷ್ಟಿಯಿಂದ ಅರಣ್ಯ ಇಲಾಖೆಯವರೂ, ಹೆದ್ದಾರಿ ಕಾಮಗಾರಿಗೆ ಅಡ್ಡಿಪಡಿಸದೇ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಮುಂದಾಬೇಕಿದೆ.23 ಶ್ರೀ ಚಿತ್ರ 2:
ಶೃಂಗೇರಿ ಸಮೀಪ ರಾ.ಹೆ ಅವೈಜ್ಞಾನಿಕ ಕಾಮಗಾರಿಯಿಂದ ಅಪಾಯದಂಚಿನಲ್ಲಿರುವ ರಸ್ತೆಯಂಚಿನ ಬೃಹತ್ ಮರಗಳು.