ಔರಾದ್: ತಾಲೂಕಿನ ವಡಗಾಂವ ಗ್ರಾಮದ ಸಂತಪೂರ-ಜಂಬಗಿ ರಸ್ತೆಯಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸದೆ ಕಾಂಕ್ರೀಟ್ ರಸ್ತೆ ನಿರ್ಮಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಂತರರಾಜ್ಯ ಕಲ್ಪಿಸುವ ಈ ರಸ್ತೆ ತೆಲಂಗಾಣದ ನಾರಾಯಣಖೇಡ ನಗರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಪ್ರತಿ ದಿನ ನೂರಾರು ವಾಹನಗಳ ಓಡಾಟ ಇದ್ದು, ಕಂಬಗಳು ರಸ್ತೆ ಮಧ್ಯದಲ್ಲೇ ಇರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಅಪಘಾತದ ಭೀತಿಯೂ ಕೂಡ ಎದುರಾಗಿದೆ. ಕೂಡಲೇ ಸಂಬಂಧಪಟ್ಟವರು ಯಾವುದೇ ದೊಡ್ಡ ದುರ್ಘಟನೆ ನಡೆಯುವುದಕ್ಕೂ ಮುನ್ನ ಎಚ್ಚರಿಕ ವಹಿಸಿ ರಸ್ತೆ ಮಧ್ಯದಲ್ಲಿರುವ ಕಂಬಗಳನ್ನು ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.