ಜಾಂಜ್, ಡೊಳ್ಳು, ಸೇರಿದಂತೆ ಜಾನಪದ ಕಲೆ ಸಾರುವ ನಾಡಿನ ಹಲವಾರು ಕಲಾತಂಡಗಳು ಮೆರವಣಿಗೆಯ ರಂಗು ಹೆಚ್ಚಿಸಿದ್ದವು
ಅಕ್ಕಿಆಲೂರು: ಪಟ್ಟಣದ ಜೈಭೀಮ ಜನಪದ ಕಲಾ ಸಂಘದ ಆಶ್ರಯದಲ್ಲಿ ಫೆ. ೨೫ರ ವರೆಗೆ ನಡೆಯಲಿರುವ ಭೀಮೋತ್ಸವ-೨೦೨೪ರ ಪ್ರಯುಕ್ತ ಶುಕ್ರವಾರ ಬೆಳಗ್ಗೆ ೮ ಗಂಟೆಗೆ ಭೀಮ ಧ್ವಜಾರೋಹಣವನ್ನು ವಿರಕ್ತಮಠದ ಶಿವಬಸವ ಶ್ರೀಗಳು ನೆರವೇರಿಸಿದರು.
ಬೆಳಗ್ಗೆ ೧೦.೩೦ಕ್ಕೆ ಸ್ಥಳೀಯ ಸಿಂಧೂರ ಸಿದ್ಧಪ್ಪ ವೃತ್ತದ ಬಳಿ ಸಂವಿಧಾನ ಜಾಗೃತಿ ಜಾಥಾಕ್ಕೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ರೇಷ್ಮಾ ಕೌಸರ್ ಚಾಲನೆ ನೀಡಿದರು. ಜಾಥಾದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಲವಾರು ಯುವಕ ಸಂಘಟನೆಗಳು, ಅಂಬೇಡ್ಕರ್, ಬುದ್ಧ, ಬಸವ ವೇಷಧಾರಿಗಳು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಜಾಂಜ್, ಡೊಳ್ಳು, ಸೇರಿದಂತೆ ಜಾನಪದ ಕಲೆ ಸಾರುವ ನಾಡಿನ ಹಲವಾರು ಕಲಾತಂಡಗಳು ಮೆರವಣಿಗೆಯ ರಂಗು ಹೆಚ್ಚಿಸಿದ್ದವು. ತೆರೆದ ವಾಹನದಲ್ಲಿ ಅಂಬೇಡ್ಕರ್ ಭಾವಚಿತ್ರವಿರಿಸಿ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಮೆರವಣಿಗೆ ಸಾಗಿ ಬಂತು. ಮೆರವಣಿಗೆಯುದ್ದಕ್ಕೂ ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಚಿಂತನೆಗಳ ಕುರಿತು ಘೋಷಣೆ ಕೂಗುತ್ತ ಸಾಗಿದರು. ಆನಂತರ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ತಲುಪಿ ಜಾಥಾ ಸಂಪನ್ನಗೊಂಡಿತು.
ವಿವಿಧ ಕ್ಷೇತ್ರಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಸನ್ಮಾನಿಸಲಾಯಿತು. ಜೈ ಭೀಮ ಜನಪದ ಕಲಾ ಸಂಘದ ಸದಸ್ಯ ಗಂಗಾಧರ ಸಾತಪತಿ, ನಸರುಲ್ಲಾ ಉಪ್ಪಣಸಿ, ಈರಪ್ಪ ಗಾಳೆಮ್ಮನವರ, ರಾಜು ಹರಿಜನ, ವೀರೇಶ ಲಮಾಣಿ, ನೀಲಪ್ಪ ಕಟ್ಟಿಮನಿ, ಉಮೇಶ ತಳವಾರ, ಹನುಮಂತಪ್ಪ ಯಳ್ಳೂರ, ಬಸವರಾಜ ಚಲವಾದಿ, ಮಹಾದೇವಪ್ಪ ಬಂಡಿವಡ್ಡರ, ನಿಂಗಪ್ಪ ಹಾನಗಲ್ಲ, ಹನುಮಂತಪ್ಪ ಕೋಣನಕೊಪ್ಪ, ಬಸವರಾಜ ಡುಮಣ್ಣನವರ, ಕೃಷ್ಣ ಹರಿಜನ, ಜಯರಾಂ ಮಲ್ಲಾಪುರ, ದುರಗಪ್ಪ ಈರಮ್ಮನವರ, ರವಿ ಜಾಲಗೇರಿ, ನಾಗರಾಜ ಓಲೇಕಾರ, ಚೇತನ ಪಾಟೀಲ, ಮಂಜುನಾಥ ಬಾರ್ಕಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.