ಉಪನಯನದಿಂದ ಜ್ಞಾನದ ಕಣ್ಣು ತೆರೆಯಲಿದೆ

KannadaprabhaNewsNetwork |  
Published : May 20, 2025, 01:44 AM IST
19ಕೆಪಿಎಲ್26 ಕೊಪ್ಪಳ ರಾಘವೇಂದ್ರಮಠದಲ್ಲಿ ಉಪನಯನ ಕಾರ್ಯಕ್ರಮ | Kannada Prabha

ಸಾರಾಂಶ

ಉಪನಯನ ಕಾರ್ಯಕ್ರಮದಿಂದ ಮಕ್ಕಳಲ್ಲಿ ಸಂಸ್ಕಾರ ಬೆಳೆಯುತ್ತದೆ. ದೇವರಲ್ಲಿ ನಂಬಿಕೆ ಮತ್ತು ಭಕ್ತಿ ಹೆಚ್ಚಳವಾಗುತ್ತದೆ.

ಕೊಪ್ಪಳ:

ಉಪನಯನ ಎಂದರೇ ಅದು ಜ್ಞಾನದ ಕಣ್ಣು ತೆರೆಯುವ ಆಚರಣೆಯಾಗಿದ್ದು, ಶ್ರದ್ಧೆ ಮತ್ತು ಭಕ್ತಿಯಿಂದ ಅನುಸರಿಸಬೇಕು ಎಂದು ಪಂ. ರಘುಪ್ರೇಮಾಚಾರ್ ಹೇಳಿದರು.

ನಗರದ ಶ್ರೀರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಸಾಮೂಹಿಕ ಉಪನಯನ ಬ್ರಹ್ಮೋಪದೇಶ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಪನಯನ ಕಾರ್ಯಕ್ರಮದಿಂದ ಮಕ್ಕಳಲ್ಲಿ ಸಂಸ್ಕಾರ ಬೆಳೆಯುತ್ತದೆ. ದೇವರಲ್ಲಿ ನಂಬಿಕೆ ಮತ್ತು ಭಕ್ತಿ ಹೆಚ್ಚಳವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂತಹ 38 ವಟುಗಳು ಸಾಮೂಹಿಕವಾಗಿ ಬ್ರಹ್ಮೋಪದೇಶ ಪಡೆದರು. ಹಲವರಿಗೆ ಸಮಯದ ಅಭಾವ, ಕೆಲವರಿಗೆ ಆರ್ಥಿಕ ತೊಂದರೆ ಹಾಗೂ ಕೆಲವರು ಸಾಕ್ಷಾತ್ ರಾಯರ ಸನ್ನಿಧಾನದಲ್ಲಿ ಉಪನಯನ ಮಾಡುವ ಅಪೇಕ್ಷೆ ಇರುತ್ತದೆ. ಆದ್ದರಿಂದ ರಾಯರ ಸನ್ನಿಧಾನದಲ್ಲಿ ಶ್ರೀಮಠವೂ ಸಾಮೂಹಿಕ ಉಪನಯನ ನಡೆಸಿತು.

ಧಾರ್ಮಿಕ ವಿಧಿ-ವಿಧಾನ ಕಾರ್ಯಕ್ರಮ ಬೆಳಗಿನ ಜಾವ 5.30ರಿಂದ ಪ್ರಾರಂಭವಾಯಿತು. ಸಾಮೂಹಿಕ ಅಕ್ಷತಾರೋಹಣ 10.15ಕ್ಕೆ, ಯಜ್ಞೋಪವೀತ ಧಾರಣೆ, ಗಾಯತ್ರಿ ಉಪದೇಶ ಮಾತೃ ಭಿಕ್ಷಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಮಧ್ಯಾಹ್ನ ತೀರ್ಥಪ್ರಸಾದದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಶ್ರೀಮಠದ ಅಧ್ಯಕ್ಷ ಅನಂತಾಚಾರ್ ಹುಲಗಿ, ಶ್ರೀಮಠದ ಪ್ರಧಾನ ಅರ್ಚಕ ಪಂ. ರಘುಪ್ರೇಮಾಚಾರ ಮುಳುಗುಂದ, ಶ್ರೀಮಠದ ವ್ಯವಸ್ಥಾಪಕ ಜಗನ್ನಾಥಾಚಾರ್ ಹುನುಗುಂದ, ನರಸಿಂಹಾಚಾರ್ ಅಗ್ನಿಹೋತ್ರಿ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಡಾ. ಡಿ.ಆರ್. ಬೆಳ್ಳಟ್ಟಿ, ಪಂ. ವೇದವ್ಯಾಸಾಚಾರ್ ಜೋಶಿ, ರವಿ ಆಚಾರ್ ಕರಣಂ, ವಸಂತ ಪೂಜಾರ್ ಮಾದಿನೂರು, ಕೃಷ್ಣಾಚಾರ್ ಐಕೂರ್, ನರಹರಿಆಚಾರ್ ಕೊಪ್ಪರ, ಗೋವಿಂದಾಚಾರ್ ಬಾದರ್ಲಿ, ಕಟ್ಟಿ ಶ್ರೀನಿವಾಸಾಚಾರ್, ಪ್ರಾಣೇಶಾಚಾರ್ ಅಗ್ನಿಹೋತ್ರಿ, ಅನಂತಭಟ್ಟ ಜೋಶಿ, ನಾರಾಯಣ ದಾಸ, ಶ್ರೀನಿವಾಸಾಚಾರ್ ವಡವಿ, ವೆಂಕಣ್ಣಾಚಾರ್ ಗುನ್ನಾಳ, ಕೃಷ್ಣಮೂರ್ತಿ ಕುಲಕರ್ಣಿ, ಮೋಹನ ಕಟ್ಟಿ, ನಾಗರಾಜಾಚಾರ್ ಆಶ್ರೀತ, ರಂಗನಾಥಾಚಾರ್ ಸೊರಟೂರ್, ರವೀಂದ್ರ ಆಚಾರ್ ಆಶ್ರೀತ, ಕೃಷ್ಣ ಸೊರಟೂರ, ನರಸಿಂಹ ಹುದ್ಧಾರ್ ಬದರಿ ಪುರೋಹಿತ್ ಸೇರಿದಂತೆ ಹಲವರು ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು