ಮುಂಗಾರಿನೊಳಗೆ ವಿದ್ಯುತ್ ಪರಿವರ್ತಕ ಮೇಲ್ದರ್ಜೇಗೇರಿಸಿ: ಅಕ್ಕಿ ತೋಟೇಶ

KannadaprabhaNewsNetwork |  
Published : Dec 10, 2024, 12:32 AM IST
ಸ | Kannada Prabha

ಸಾರಾಂಶ

ತಂಬ್ರಹಳ್ಳಿ ವಿದ್ಯುತ್ ಉಪಕೇಂದ್ರದಲ್ಲಿನ ೧೨.೫ ಎವಿಎ ಸಾಮರ್ಥ್ಯದ ವಿದ್ಯುತ್ ಪರಿವತರ್ಕಗಳಿಂದಾಗಿ ಕೇಂದ್ರ ವ್ಯಾಪ್ತಿಯ ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲಾಗುತ್ತಿಲ್ಲ.

ಹಗರಿಬೊಮ್ಮನಹಳ್ಳಿ: ತಂಬ್ರಹಳ್ಳಿ ವಿದ್ಯುತ್ ಉಪಕೇಂದ್ರದಲ್ಲಿನ ೧೨.೫ ಎವಿಎ ಸಾಮರ್ಥ್ಯದ ವಿದ್ಯುತ್ ಪರಿವತರ್ಕಗಳಿಂದಾಗಿ ಕೇಂದ್ರ ವ್ಯಾಪ್ತಿಯ ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲಾಗುತ್ತಿಲ್ಲ. ಕೂಡಲೇ ಇದನ್ನು ಮೇಲ್ದರ್ಜೇಗೇರಿಸಿ ರೈತರ ಬೆಳೆನಷ್ಟವನ್ನು ತಡೆಯಬೇಕು ಎಂದು ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಒತ್ತಾಯಿಸಿದರು.

ತಾಲೂಕಿನ ತಂಬ್ರಹಳ್ಳಿ ವಿದ್ಯುತ್ ಉಪ ಕೇಂದ್ರದಲ್ಲಿ ೧೨.೫ ಎಂವಿಎ ಸಾಮರ್ಥ್ಯದ ೨ ವಿದ್ಯುತ್ ಪರಿವರ್ತಕಗಳನ್ನು ಮುಂದಿನ ಮುಂಗಾರಿಯೊಳಗಾಗಿ ೨೦ಎಂವಿಎ ಗೆ ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಗ್ರಾಮದ ಮುಖಂಡರು ನಿಯೋಗ ತೆರಳಿ ಕೆಪಿಟಿಸಿಎಲ್ ಸೂಪರಿಡೆಂಟ್ ಎಂಜಿನಿಯರ್‌ಗೆ ಮನವಿ ಸಲ್ಲಿಸಿದ ವೇಳೆ ಅವರು ಮಾತನಾಡಿದರು.

ರೈತರ ಪಂಪ್‌ಸೆಟ್‌ಗಳಿಗೆ ವೋಲ್ಟೆಜ್ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ. ಮಳೆಗಾಲದಲ್ಲಿಯೇ ಈ ಸಮಸ್ಯೆ ಆಗುತ್ತಿರುವುದರಿಂದ ಈ ವ್ಯಾಪ್ತಿಯ ರೈತರು ಈ ವಿದ್ಯುತ್‌ನಿಂದ ಬೇಸಿಗೆಯ ಬೆಳೆಯನ್ನು ಹೇಗೆ ತೆಗೆದುಕೊಳ್ಳೋದು ಎಂದು ಚಿಂತೆಗೊಳಗಾಗಿದ್ದಾರೆ. ಈ ಸಾಲಿನಲ್ಲಿ ಮಳೆ ಪ್ರಮಾಣ ಅಧಿಕವಾಗಿರುವ ಹಿನ್ನೆಲೆಯಲ್ಲಿ ಬೇಸಿಗೆ ಬೆಳೆ ಹೆಚ್ಚಲಿದೆ. ಕಡಿಮೆ ಸಾಮರ್ಥ್ಯದ ಪರಿವರ್ತಕಗಳಿಂದಾಗಿ ಲೋ ವೋಲ್ಟೇಜ್ ಸಮಸ್ಯೆ ನಿರಂತರವಾಗಿದೆ. ಈಗಾಗಲೇ ಮೇಲ್ದೆರ್ಜೆಗೇರಿಸುವಂತೆ ವರ್ಷದ ಹಿಂದೆಯೇ ಅನುಮೋದನೆಯಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.

ಈ ಕುರಿತು ಸೂಪರಿಡೆಂಟ್ ಇಂಜಿನಿಯರ್ ಎಚ್.ಎಸ್.ಬಸವರಾಜ ಪ್ರತಿಕ್ರಿಯಿಸಿ, ರೈತರಿಗೆ ಸಹಕಾರಿಯಾಗಿ ಶೀಘ್ರದಲ್ಲೆ ಪೂರಕ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಿವೃತ್ತ ಇಒ ಟಿ.ವೆಂಕೋಬಪ್ಪ, ಗ್ರಾಪಂ ಸದಸ್ಯರಾದ ಬಸವಲಿಂಗನಗೌಡ, ಮೈಲಾರ ಶಿವಕುಮಾರ, ಹುಗ್ಗಿ ದೊಡ್ಡಬಸಪ್ಪ, ಸಂಡೂರು ಮೆಹಬೂಬ್‌ಬಾಷ, ಮುಖಂಡರಾದ ಗಂಗಾಧರಗೌಡ, ರೆಡ್ಡಿ ಮಂಜುನಾಥ ಪಾಟೀಲ್, ಜಾಕಿಸಾಬ್, ಖಾದರ್‌ಸಾಬ್, ಕಡ್ಡಿ ಚನ್ನಪ್ಪ, ವಸಂತಕುಮಾರ್, ಗಡ್ಡಿ ನಿಂಗಪ್ಪ, ಸಪ್ಪರದ ಪಂಪಾಪತಿ ಇತರರಿದ್ದರು.ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ವಿದ್ಯುತ್ ಉಪ ಕೇಂದ್ರದಲ್ಲಿನ ವಿದ್ಯುತ್ ಪರಿವರ್ತಕಗಳ ಸಾಮರ್ಥ್ಯ ಹೆಚ್ಚಿಸುವಂತೆ ಒತ್ತಾಯಿಸಿ ಗ್ರಾಮದ ಮುಖಂಡರು ಜೆಸ್ಕಾಂ ಎಸ್‌ಇ ಬಸವರಾಜಗೆ ಮನವಿ ಸಲ್ಲಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ