ಅಕ್ರಮ-ಸಕ್ರಮ ಯೋಜನೆಯಡಿ ರೈತರ ನೀರಾವರಿ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಗೆ ಚಾಲನೆ
ಕನ್ನಡಪ್ರಭ ವಾರ್ತೆ ಹಾನಗಲ್ಲತಾಲೂಕಿನಲ್ಲಿ ವಿದ್ಯುತ್ ಬಳಕೆ ಪ್ರಮಾಣ ಮತ್ತು ಬೇಡಿಕೆಗೆ ಅನುಗುಣವಾಗಿ ಅಗತ್ಯ ಸೌಲಭ್ಯ, ಸಾಮರ್ಥ್ಯ ಇಲ್ಲದೇ ತೊಂದರೆ ಉಂಟಾಗುತ್ತಿದ್ದು, ವಿದ್ಯುತ್ ಗ್ರಿಡ್‌ಗಳನ್ನು ಮೇಲ್ದರ್ಜೆಗೇರಿಸಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಬೆಳಗಾಲಪೇಟೆ ಗ್ರಾಮದಲ್ಲಿ ₹೯ ಕೋಟಿ ೭೫ ಲಕ್ಷ ವೆಚ್ಚದಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ರೈತರ ನೀರಾವರಿ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಗೆ ಚಾಲನೆ ನೀಡಿದ ಅವರು, ತಾಲೂಕಿನಲ್ಲಿರುವ ೩೩ ಕೆವಿ ಸಾಮರ್ಥ್ಯದ ವಿದ್ಯುತ್ ಗ್ರಿಡ್‌ಗಳನ್ನು ೧೧೦ ಕೆವಿ ಸಾಮರ್ಥ್ಯಕ್ಕೆ ಹೆಚ್ಚಿಸಲು ಹಾಗೂ ಹೊಸದಾಗಿ ೧೧೦ ಕೆವಿ ಸಾಮರ್ಥ್ಯದ ಗ್ರಿಡ್ ಸ್ಥಾಪಿಸಲು ಒತ್ತು ನೀಡಲಾಗಿದೆ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದಾಗ ಮಾತ್ರ ಸಮಸ್ಯೆ ಶಾಶ್ವತವಾಗಿ ಪರಿಹಾರ ಕಾಣಲು ಸಾಧ್ಯವಿದೆ. ಅಕ್ರಮ-ಸಕ್ರಮ ಯೋಜನೆಯಡಿ ನೀರಾವರಿ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮೂಲಸೌಕರ್ಯ ಕಲ್ಪಿಸಲಾಗುವುದು. ಈ ಯೋಜನೆಯಡಿ ಒಟ್ಟು ೪೯೩ ರೈತ ಫಲಾನುಭವಿಗಳು ಸೌಲಭ್ಯ ಪಡೆಯಲಿದ್ದು, ೩೪೫ ಅಕ್ರಮ-ಸಕ್ರಮ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದ ಅವರು, ಸೌರಶಕ್ತಿಯ ಬಳಕೆಯ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಬೇಕಿದೆ. ಸೌರ ವಿದ್ಯುತ್ ಬಳಕೆಯ ಪ್ರಮಾಣ ಹೆಚ್ಚಿದಂತೆ ವಿದ್ಯುತ್ ಪೂರೈಕೆಯ ಒತ್ತಡವೂ ಕಡಿಮೆಯಾಗಲಿದೆ ಎಂದರು.ಗ್ರಾಪಂ ಅಧ್ಯಕ್ಷೆ ನೇತ್ರಾ ಕೋಬಳೆ, ಉಪಾಧ್ಯಕ್ಷೆ ಶಕೀಲಾಬಾನು ಎಲಿಗಾರ, ಮುಖಂಡರಾದ ಶಿವಶಂಕ್ರಯ್ಯ ಹಿರೇಮಠ, ಪ್ರಶಾಂತ ಕಾಡಪ್ಪನವರ, ಮಾಬೂಲಿ ಹುದ್ದಾರ, ರಿಯಾಜ್‌ಅಹ್ಮದ್ ತಹಶೀಲ್ದಾರ್, ಪುಟ್ಟಯ್ಯ ಹಿರೇಮಠ, ವೀರೇಶ ಚಿಕ್ಕಮಠ, ಸಿದ್ದಲಿಂಗಪ್ಪ ಕಮಡೊಳ್ಳಿ, ಪ್ರಕಾಶ ಈಳಿಗೇರ, ಕೃಷ್ಣ ಉರಣಕರ, ರಾಕೇಶ ಉರಣಕರ, ಹೆಸ್ಕಾಂ ಶಾಖಾಧಿಕಾರಿ ಗಿರೀಶ ಗುಮಗಂಡಿ ಈ ಸಂದರ್ಭದಲ್ಲಿದ್ದರು.