ರಸ್ತೆ ದುರಸ್ತಿ ಆಗದ್ದಿದ್ದರೆ ಏಕಾಂಗಿ ಹೋರಾಟ: ಪೂಂಜ

KannadaprabhaNewsNetwork |  
Published : Nov 13, 2026, 02:45 AM IST
ಉಪ್ಪಿನಂಗಡಿ-ಕಲ್ಲೇರಿ ರಸ್ತೆ ದುರಸ್ಥಿಗಾಗಿ ಬಿಜೆಪಿ. ವತಿಯಿಂದ ಪಾದಯಾತ್ರೆ, ಪ್ರತಿಭಟನೆ ಸಭೆ | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರ ಉಪ್ಪಿನಂಗಡಿ-ಕಲ್ಲೇರಿ ರಸ್ತೆ ದುರಸ್ತಿಗಾಗಿ ೯ ಬಾರಿ ಸಲ್ಲಿಸಲಾದ ಮನವಿಗೂ ಭರವಸೆ ನೀಡಿದೆ ವಿನಃ ಸ್ಪಂದಿಸಿಲ್ಲ. ನ.೩೦ ರ ಒಳಗಾಗಿ ರಾಜ್ಯ ಸರ್ಕಾರ ಅನುದಾನ ಒದಗಿಸದೇ ಹೋದರೆ ವಿರುದ್ದ ಏಕಾಂಗಿ ಹೋರಾಟ ನಡೆಸುವುದಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಎಚ್ಚರಿಸಿದ್ದಾರೆ.

ಉಪ್ಪಿನಂಗಡಿ: ರಾಜ್ಯ ಕಾಂಗ್ರೆಸ್ ಸರ್ಕಾರ ಉಪ್ಪಿನಂಗಡಿ-ಕಲ್ಲೇರಿ ರಸ್ತೆ ದುರಸ್ತಿಗಾಗಿ ೯ ಬಾರಿ ಸಲ್ಲಿಸಲಾದ ಮನವಿಗೂ ಭರವಸೆ ನೀಡಿದೆ ವಿನಃ ಸ್ಪಂದಿಸಿಲ್ಲ. ನ.೩೦ ರ ಒಳಗಾಗಿ ರಾಜ್ಯ ಸರ್ಕಾರ ಅನುದಾನ ಒದಗಿಸದೇ ಹೋದರೆ ವಿರುದ್ದ ಏಕಾಂಗಿ ಹೋರಾಟ ನಡೆಸುವುದಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಎಚ್ಚರಿಸಿದ್ದಾರೆ.

ಅವರು ಬುಧವಾರ ಕಲ್ಲೇರಿಯಲ್ಲಿ ನಡೆದ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಾಂದೋಲನದ ಭಾಗವಾಗಿ ಬೆಳ್ತಂಗಡಿ ತಾಲೂಕಿನ ಇಳಂತಿಲ, ತಣ್ಣೀರುಪಂಥ, ಬಾರ್ಯ, ತೆಕ್ಕಾರು, ಕಣಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಬಿಜೆಪಿ ಶಾಸಕನಾಗಿ ಅನುದಾನ ತರಲು ತಾನು ಅಸಮರ್ಥನಾಗಿದ್ದೇನೆಂದು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರು ರಾಜ್ಯದ ಹಲವು ಕಾಂಗ್ರೇಸ್ ಶಾಸಕರೇ ಅನುದಾನ ದೊರಕದೆ ಅಭಿವೃದ್ದಿ ಕಾರ್ಯ ಅಸಾಧ್ಯವಾಗಿದೆ ಎಂದು ಬಹಿರಂಗ ಹೇಳಿಕೆ ನೀಡುತ್ತಿರುವುದನ್ನು ಗಮನಿಸಬೇಕೆಂದರು.

ಬಿಜೆಪಿ ಮುಂದಾಳು ಯತೀಶ್ ಆರ್ವ ಮಾತನಾಡಿ , ರಾಜ್ಯ ಸರ್ಕಾರ ಹೇಗೆ ಕಾರ್ಯನಿರ್ವಹಿಸುತ್ತಿದೆ ಎನ್ನುವುದಕ್ಕೆ ಕನ್ನಡಿಯಾಗಿ ಕುಪ್ಪೆಟ್ಟಿ-ಉಪ್ಪಿನಂಗಡಿ ರಸ್ತೆ ಇದೆ ಎಂದರು.

ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್ ಧರ್ಮಸ್ಥಳ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಪಕ್ಷದ ಮುಂದಾಳುಗಳಾದ ಜಯಂತ ಕೋಟ್ಯಾನ್ , ಕವಿತಾ ಸಲಿಲ್, ಸೀತಾರಾಮ ಬೆಳಾಲ್, ಪ್ರಶಾಂತ್ ಬಾರೆಂಕಿ, ಜಯಾನಂದ ಗೌಡ, ವಸಂತಿ ಮಚ್ಚಿನ, ಸೇಸಪ್ಪ ಸಾಲಿಯಾನ್ , ಬಾಲಕೃಷ್ಣ ಗೌಡ ಮುಗೇರಡ್ಕ ಉಪಸ್ಥಿತರಿದ್ದರು.

ಪ್ರಮುಖರಾದ ಮನೋಹರ್ ರೈ ಬಾರ್ಯ, ಬೊಮ್ಮಯ್ಯ ಬಂಗೇರ, ಮಂಜುನಾಥ ಸಾಲಿಯಾನ್ ,ಜಯಾನಂದ ಕಲ್ಲಾಪು, ಸುನಿಲ್ ಅನಾವು , ತಿಮ್ಮಪ್ಪ ಗೌಡ ಇಳಂತಿಲ, ರವೀಂದ್ರ ಆಚಾರ್ಯ, ರಾಜೇಶ್ ರೈ ಹೆನ್ನಡ್ಕ, ಪ್ರಶಾಂತ್ ಪೈ, ಪ್ರಸನ್ನ ಗೌಡ , ಜಯಂತಿ ಪಾಲೇದು, ಸಾಮ್ರಾಟ್ ಕರ್ಕೇರ , ವಿಜಯಕುಮಾರ್ ಕಲ್ಲಳಿಕೆ ಮೊದಲಾದವರು ಭಾಗವಹಿಸಿದ್ದರು.

ಬಿಜೆಪಿ. ಸಮಿತಿ ಪದಾಧಿಕಾರಿಗಳಾದ ಪ್ರಭಾಕರ ಗೌಡ ಪೊಸಂಕೋಡಿ ಕಾರ್ಯಕ್ರಮ ನಿರೂಪಿಸಿ , ಮಹೇಶ್ ಜೇಂಕಿಮಾರು ಸ್ವಾಗತಿಸಿ , ಪ್ರವೀಣ್ ರೈ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌