ಮುಂಡರಗಿ: ಕೇಂದ್ರ ಸರ್ಕಾರ ನಿಗದಿಪಡಿಸಿರುವ ಕಬ್ಬಿನ ಎಫ್‌ಆರ್‌ಪಿ ದರ ಪುನರ್ ಪರಿಶೀಲನೆ ಮಾಡಬೇಕು. ಕಬ್ಬಿನ ಬೀಜ, ಗೊಬ್ಬರ ಮತ್ತು ಕೂಲಿ ಬೆಲೆಗಳು ಹೆಚ್ಚಾಗಿರುವುದರಿಂದ ಪರಿಸ್ಕರಿಸಿದ ಎಫ್ಆರ್‌ಪಿಗಿಂತ ರೈತರಿಗೆ ಒಂದು ಟನ್ ಕಬ್ಬಿಗೆ ಹೆಚ್ಚುವರಿಯಾಗಿ ₹500 ಕೊಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ಒತ್ತಾಯಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಂಗಾಪುರ ವಿಜಯನಗರ ಸಕ್ಕರೆ ಕಾರ್ಖಾನೆಯ ಕಬ್ಬಿನ ಪ್ರತಿಶತ ಇಳುವರಿ 9.61ರಷ್ಟು ತೋರಿಸಲಾಗಿದ್ದು, ಪ್ರತಿಟನ್ ಕಬ್ಬಿಗೆ ಕಟಾವು, ಸಾಗಾಣಿಕ ವೆಚ್ಚ ಸೇರಿ ₹3,329 ದರ ನಿಗದಿಪಡಿಸಲಾಗಿದೆ. ಕಟಾವು ಮಾಡುವವರು ಖುಷಿಗೆ ಅಂತ ಹೆಚ್ಚುವರಿ ಹಣ ಪಡೆಯುತ್ತಾರೆ. ಇದರಿಂದ ರೈತರಿಗೆ ತುಂಬಾ ಅನ್ಯಾಯವಾಗುತ್ತದೆ. ಆದ್ದರಿಂದ ಕಬ್ಬು ಇಳುವರಿಯಲ್ಲಿ ಆಗುವ ಮೋಸ ಮತ್ತು ಕಟಾವು, ಸಾಗಾಣಿಕಯಲ್ಲಿ ಪಡೆಯುವ ಹೆಚ್ಚುವರಿ ಹಣದಿಂದಾಗುವ ತೊಂದರೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.ಸೆ. 30ರಂದು ಗದುಗಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಸಭೆ ಕರೆಯಲಾಗಿದೆ. ಅಲ್ಲಿ ತೆಗೆದುಕೊಳ್ಳುವ ನಿರ್ಧಾರ ಮೇಲೆ ಮುಂದಿನ ನಿರ್ಣಯ ಕೈಗೊಳ್ಳುತ್ತೇವೆ. ಪ್ರತಿಟನ್ ಕಬ್ಬಿಗೆ ಹೆಚ್ಚುವರಿ ₹500 ಕೊಡಬೇಕು. ಹಾಗೆ ರಾಜ್ಯ ಸರ್ಕಾರ ತಕ್ಷಣವೇ ಮುಸುಕಿನ ಜೋಳ ಖರೀದಿ ಕೇಂದ್ರವನ್ನು ಸ್ಥಾಪಿಸಬೇಕು ಎಂದರು.ಈ ವೇಳೆ ರವಿ ಕೊಳಲು, ರವಿನಾಯಕ ದೊಡ್ಡಮನಿ, ಹನುಮಂತಪ್ಪ ಬಂಗಿ, ಹನುಮಂತಪ್ಪ ಚೂರಿ, ಹಾಲೇಶ ಬೆನ್ನೂರ, ಹನುಮಂತ ಗೋಜನೂರ, ವಿಶ್ವನಾಥ ಶಿರಹಟ್ಟಿ, ಪ್ರಕಾಶ ಸಜ್ಜನರ, ಎಚ್.ಬಿ. ಕುರಿ, ಮಂಜುನಾಥ ನಾಗರಹಳ್ಳಿ, ಮಹಾಂತಯ್ಯ ಡಂಬಳಮಠ, ಈರಣ್ಣ ಕವಲೂರ, ಬಾಬಬುಸಾಬ ಬಳ್ಳಾರಿ, ಗಿರೀಶ ಪಾಟೀಲ, ವಿ.ಎಂ. ಪಾಟೀಲ, ಸುನೀಲ ತೋಟದ, ಮೈಲಾರಪ್ಪ ಕೊಪ್ಪಳ ಇತರರು ಇದ್ದರು.ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯನರಗುಂದ: 100/11 ಕೆವಿ ನರಗುಂದ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ಸೆ. 25ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರ ವರಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.ಈ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ನರಗುಂದ ಪಟ್ಟಣದ ಮತ್ತು ತಾಲೂಕಿನ ಹುಣಸಿಕಟ್ಟಿ, ಹಿರೇಕೊಪ್ಪ, ಚಿಕ್ಕನರಗುಂದ ಬನಹಟ್ಟಿ, ಸುರಕೋಡ, ಕಣಕಿಕೊಪ್ಪ, ಬೆನಕನಕೊಪ್ಪ ಗ್ರಾಪಂಗಳ ವ್ಯಾಪ್ತಿಯ ಹಳ್ಳಿಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.