ಡಿಜಿಟಲ್ ಸಾಧನಗಳನ್ನು ಎಚ್ಚರಿಕೆಯಿಂದ ಬಳಸಿ: ಶ್ರೀಧರ ಶೇಟ್‌

KannadaprabhaNewsNetwork |  
Published : Dec 06, 2025, 02:45 AM IST
ಪೊಟೋ ಪೈಲ್ : 5ಬಿಕೆಲ್3 | Kannada Prabha

ಸಾರಾಂಶ

ಡಿಜಿಟಲ್ ಸಾಧನಗಳನ್ನು ಸೂಕ್ತ ಭದ್ರತೆಯನ್ನು ಕಾಪಾಡಿಕೊಂಡು, ಯಾವುದೇ ಅಪರಿಚಿತ ಕರೆಗೆ ಬಲಿಯಾಗದೆ ವಿವೇಕ ಮತ್ತು ಪ್ರಜ್ಞೆಯಿಂದ ಬಳಸಬೇಕು ಎಂದು ಡಿಜಿಟಲ್ ಭದ್ರತೆ, ಶ್ರೀಧರ ಶೇಟ್‌ , ಎನ್ಎಸ್ಎಸ್ ವಿಶೇಷ, ಸೂಕ್ತ ಭದ್ರತೆ ಹೇಳಿದರು.

ಭಟ್ಕಳ: ಇಂದಿನ ಜಗತ್ತು ಡಿಜಿಟಲ್ ಆಗಿದ್ದು, ಒಂದು ಕಡೆ ತಂತ್ರಜ್ಞಾನ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದರೆ, ಅಷ್ಟೇ ವೇಗದಲ್ಲಿ ವಂಚಕರು ಮೋಸ ಮಾಡುವ ವಿಧಾನಗಳನ್ನು ಕರಗತ ಮಾಡಿಕೊಂಡಿದ್ದಾರೆ. ಬಹಳ ಎಚ್ಚರಿಕೆಯಿಂದ ಡಿಜಿಟಲ್ ಸಾಧನಗಳನ್ನು ಬಳಸಬೇಕಾಗಿದೆ ಎಂದು ಸಾಹಿತಿ ಮತ್ತು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀಧರ ಶೇಟ್ ಶಿರಾಲಿ ಹೇಳಿದರು.

ಶಿರಾಲಿ ಗ್ರಾಮದ ಚಿತ್ರಾಪುರದಲ್ಲಿ ಮುರ್ಡೇಶ್ವರದ ಆರ್‌ಎನ್‌ಎಸ್‌ ಪ್ರಥಮ ದರ್ಜೆ ಕಾಲೇಜಿನವರು ಸಂಘಟಿಸಿದ್ದ ಎನ್ಎಸ್ಎಸ್ ವಿಶೇಷ ಶಿಬಿರದಲ್ಲಿ ಡಿಜಿಟಲ್ ಭದ್ರತೆ ಮತ್ತು ಜಾಗೃತಿ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಈಗ ಜಗತ್ತು ಮೊಬೈಲ್‌ಮಯವಾಗಿದೆ. ಕಂಪ್ಯೂಟರ್, ಟ್ಯಾಬ್ ಇತ್ಯಾದಿ ಇಂಟರ್ನೆಟ್‌ಗೆ ಸಂಪರ್ಕ ಹೊಂದಿರುವ ಸಾಧನೆಗಳು ಎಷ್ಟು ಉಪಕಾರಿಯೋ, ಅಷ್ಟೇ ಅಪಾಯಕಾರಿಯೂ ಆಗಿವೆ. ಪ್ರತಿದಿನ ಲಕ್ಷಾಂತರ ಜನರ ಕೋಟ್ಯಂತರ ರುಪಾಯಿಗಳನ್ನು ವಂಚಕರು ಕೊಳ್ಳೆ ಹೊಡೆಯುತ್ತಿದ್ದಾರೆ. ಸೂಕ್ತ ಭದ್ರತೆಯನ್ನು ಕಾಪಾಡಿಕೊಂಡು, ಯಾವುದೇ ಅಪರಿಚಿತ ಕರೆಗೆ ಬಲಿಯಾಗದೆ ವಿವೇಕ ಮತ್ತು ಪ್ರಜ್ಞೆಯಿಂದ ಬಳಸಬೇಕು. ಯಾರಿಗೂ ಊಹಿಸಲು ಸಾಧ್ಯವಾಗದ ಪಾಸ್‌ವರ್ಡ್‌ ಮತ್ತು ದ್ವಿ ಘಟಕ ದೃಢೀಕರಣ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾಲೇಜಿನ ಉಪನ್ಯಾಸಕ ಅಶ್ವತ್ಥ ಉಪ್ಪೂರು ಮಾತನಾಡಿ, ಯುವಕರಲ್ಲಿ ಏಕಾಗ್ರತೆ ಮತ್ತು ತಾಳ್ಮೆ ಇದ್ದರೆ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು.

ಕಾಲೇಜಿನ ಪ್ರಾಚಾರ್ಯೆ ಡಾ. ಶಾಂತಶ್ರೀ ಹರಿದಾಸ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿರುವ ಶ್ರೀಧರ್ ಶೇಟ್ ಶಿರಾಲಿ ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು. ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಗಣಪತಿ ಕಾಯ್ಕಿಣಿ, ಮಮತಾ ಮರಾಠಿ, ಕಾಲೇಜಿನ ಉಪನ್ಯಾಸಕರು ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎತ್ತಿನಹೊಳೆ ಗುತ್ತಿಗೇಲಿ ಹಲವು ಲೋಪ : ಸಿಎಜಿ
40 ವರ್ಷ ವಯಸ್ಸಾದರೂ ಸಿಗುತ್ತದೆ ಸರ್ಕಾರಿ ಕೆಲಸ