ವೃದ್ದರು, ವಿಧವೆಯರು, ಅಂಗವಿಕಲರು, ಪಿಂಚಣಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ಮಾಸಾಶಗಳಿಗೆ ಸಂಬಂದಿಸಿದ ದಾಖಲೆಗಳೊಂದಿಗೆ ಅಹವಾಲು ಸಲ್ಲಿಸಿದರು. ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಎರಡು ದಿನಗಳಲ್ಲೆ ಹಾಗೂ ಪೌತಿ ಖಾತೆಗೆ ಸಂಬಂಧಿಸಿದಂತೆ 15 ದಿನಗಳಲ್ಲಿ ಬಗೆಹರಿಸುವ ಭರವಸೆ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಸರ್ಕಾರಿ ಸವಲತ್ತುಗಳನ್ನು ಪಡೆಯಲು ರೈತರು ಹಾಗೂ ಸಾರ್ವಜನಿಕರು ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಪೌತಿ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಗ್ರೇಡ್ ೨ ತಹಸೀಲ್ದಾರ್ ವಿ.ಪೂರ್ಣಿಮಾ ತಿಳಿಸಿದರು. ಬಶೆಟ್ಟ ಹಳ್ಳಿ ಹೋಬಳಿ ವ್ಯಾಪ್ತಿಯ ಸಾರ್ವಜನಿಕರು ಸಭೆಯಲ್ಲಿ ಪೌತಿ ವಾರಸುದಾರ ಖಾತೆಗಳು, ಸ್ಮಶಾನ, ಸೇರಿದಂತೆ ಅನೇಕ ಸಮಸ್ಯೆಗಳ ಅಹವಾಲುಗಳನ್ನು ನೀಡಿದರು, ವೃದ್ದರು, ವಿಧವೆಯರು, ಅಂಗವಿಕಲರು, ಪಿಂಚಣಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ಮಾಸಾಶಗಳಿಗೆ ಸಂಬಂದಿಸಿದ ದಾಖಲೆಗಳೊಂದಿಗೆ ಅಹವಾಲು ಸಲ್ಲಿಸಿದರು. ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಎರಡು ದಿನಗಳಲ್ಲೆ ಹಾಗೂ ಪೌತಿ ಖಾತೆಗೆ ಸಂಬಂಧಿಸಿದಂತೆ 15 ದಿನಗಳಲ್ಲಿ ಬಗೆಹರಿಸಿಕೊಡುತ್ತೇವೆ ಎಂದರು. ಆಂದೋಲನ ಉದ್ಘಾಟನೆ
ಶಿಡ್ಲಘಟ್ಟ ತಾಲೂಕಿನ ಬಶೆಟ್ಟ ಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪಿಂಚಣಿ ಮತ್ತು ಫವತಿ ಖಾತೆ ಆಂದೋಲನ ಕಾರ್ಯಕ್ರಮವನ್ನು ತಹಶೀಲ್ದಾರ್ ಬಿ.ಎನ್ ಸ್ವಾಮಿ ಉದ್ಘಾಟಿಸಿದರು. ಕೆಲ ಕಾಲ ಸಾರ್ವಜನಿಕರ ಅಹವಾಲುಗಳನ್ನ ಸ್ವೀಕರಿಸಿ ಚುನಾವಣಾ ಕಾರ್ಯದ ನಿಮಿತ್ತ ತೆರಳಿದರು. ಈ ವೇಳೆ ಹೊಸದಾಗಿ ಹಾಗೂ ಸ್ಥಗಿತ ಗೊಂಡಿರುವ 70 ಅರ್ಜಿ ಸಲ್ಲಿಕೆ ಆಗಿದ್ದು , ಅರ್ಹ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪತ್ರ ವಿತಸಿರಿಸಲಾಗುವುದು . 11 ಪೌತಿ ಖಾತೆ ಅರ್ಜಿ ಸಲ್ಲಿಸಿದ್ದು ಅವುಗಳನ್ನು ವಿಲೇವಾರಿ ಮಾಡಲಾಗುವುದೆಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಡಿ ಬಿ ವೆಂಕಟೇಶ್, ಹೋಬಳಿ ಉಪ ತಹಶೀಲ್ದಾರ್ ಚೇತನ್, ಸಾಮಾಜಿಕ ಭದ್ರತಾ ಯೋಜನಾಧಿಕಾರಿ ನಾರಾಯಣಸ್ವಾಮಿ, ಬಶೆಟ್ಟಹಳ್ಳಿ ಹೋಬಳಿಯ ರಾಜಸ್ವ ನಿರೀಕ್ಷಕ ಅಮರೇಂದ್ರ, ನಾಡ ಕಛೇರಿ ಗ್ರಾಮ ಲೆಕ್ಕಾಧಿಕಾರಿಗಳಾದ ಲಾರೆನ್ಸ್, ರಾಕೇಶ್, ನಂದನ್, ಅಕ್ಷಯ್, ಗ್ರಾಮ ಸಹಾಯಕರು ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.