ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ನೀರು ಅತೀ ಅಮೂಲ್ಯವಾದಂತ ಜಲ ಸಂಪನ್ಮೂಲವಾಗಿದ್ದು, ನಾವೆಲ್ಲರೂ ಸಂರಕ್ಷಣೆ ಮಾಡಲೇ ಬೇಕು ಎಂದು ಕ್ಷೇತ್ರಸಮನ್ವಯ ಅಧಿಕಾರಿ ಯು.ಬಿ.ಧರಿಕಾರ ಹೇಳಿದರು.ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಇಲಾಖೆ ವಿಜಯಪುರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ ಸಹಯೋಗತ್ವದಲ್ಲಿ ಮೆಹಬೂಬ ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಜಲಧೂತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂರಕ್ಷಣೆ ಮಾಡದಿದ್ದರೇ ಬರುವ ಪೀಳಿಗೆಗೆ ನೀರಿನ ಬರ ಹೆಚ್ಚಾಗಿ ಅತೀ ದೊಡ್ಡ ತೊಂದರೆ ಅನುಭವಿಸುವಂತಹ ಪರಿಸ್ಥಿತಿ ಬರಬಹುದು. ಪ್ರತಿಯೊಂದು ಮನೆಗೆ ಗಿಡಗಳನ್ನು ನೆಡುವುದು, ಮಿತವಾಗಿ ನೀರನ್ನು ಬಳಕೆ ಮಾಡುವುದು ಅತೀ ಮುಖ್ಯವಾಗಿದೆ ಎಂದು ವಿವರಿಸಿದರು.ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕ ಬಿ.ವೈ.ಕವಡಿ, ನೀರು ಎಲ್ಲ ಜೀವಿರಾಶಿಗಳಿಗೆ ಅತೀ ಅವಶ್ಯಕವೆಂದು ನೀರಿನ ಮೌಲ್ಯ ಬಗ್ಗೆ ತಿಳಿಸಿಕೊಟ್ಟರು.
ಎ.ಸಿ.ಕೆರೂರ ನೀರಿನ ಸ್ವಚ್ಛತೆ ಮತ್ತು ಸಂಗ್ರಹ ಬಗ್ಗೆ ತಿಳಿಸಿಕೊಟ್ಟರು. ಯು.ಜಿ.ಎಚ್.ಪಿ.ಎಸ್ ಮುಖ್ಯ ಗುರುಮಾತೆ ಎಫ್.ಎಸ್.ಭಾಗವಾನ ಮಾತನಾಡಿ, ಮಳೆ ನೀರು ಶುದ್ಧವಾಗಿರುತ್ತದೆ. ಆ ಮಳೆ ನೀರನ್ನು ಇಂಗುವಂತೆ ಮತ್ತು ಸಂಗ್ರಹಿಸಿ ಬಳಕೆ ಮಾಡಬಹುದು ಎಂದು ಮಕ್ಕಳಿಗೆ ಸಲಹೆ ನೀಡಿದರು.ಶಾಲೆಯ ಎಲ್ಲ ವಿದ್ಯಾರ್ಥಿಗಳು , ಶಿಕ್ಷಕ ಮತ್ತು ಸಿಬ್ಬಂದಿ ವರ್ಗದವರು ಮೆಹಬೂಬ್ ನಗರದ ಪ್ರಮುಖ ಬೀದಿಗಳಲ್ಲಿ ಮಕ್ಕಳು ನೀರು ಉಳಿಸಿ -ಜೀವ ಉಳಿಸಿ, ನೀರಿಲ್ಲ-ಜೀವವಿಲ್ಲ, ನೀರಿದ್ದರೇ ನಾವು, ನೀವು ಮನೆಗೊಂದು -ಇಂಗು ಗುಂಡಿ ಮಾಡಿ ಎಂದು ಕೂಗುತ್ತ ಜಾಥಾ ನಡೆಸಲಾಯಿತು.ಈ ಸಂದರ್ಭದಲ್ಲಿ ಸಿ.ಆರ್.ಪಿ.ಗುಂಡು ಚವ್ಹಾಣ, ಬಿ.ಎಸ್.ಬಿರಾದಾರ, ತಬಸುಮ್ ನಾಗರಬಾವಡಿ, ಯಾಸ್ಮಿನ್ ಮೊಗಲೈ, ತವಸಂ ಖಾಜಿ, ಟಿ.ಎ.ದಖನಿ, ರೇಣುಕವ್ವ.ಎಸ್.ಬಿ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ ಇದ್ದರು. ಎಸ್.ಎ.ಜಮಾದಾರ್ ವಂದಿಸಿದರು. ಎ.ಎಚ್.ತೆಗ್ಗಿ ನಿರೂಪಿಸಿದರು.