ನಾಳೆ ರಾಜ್ಯಾದ್ಯಂತ ಯೂಸ್‌ಲೆಸ್ ಫೆಲೋ ಸಿನಿಮಾ ಬಿಡುಗಡೆ

KannadaprabhaNewsNetwork |  
Published : Dec 14, 2023, 01:30 AM IST
13ಎಚ್ಎಸ್ಎನ್18 : ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಹಾಗೂ ನಾಯಕ ಮನು. | Kannada Prabha

ಸಾರಾಂಶ

ಭಾರಿ ಕುತೂಹಲ ಕೆರಳಿಸಿರುವ ಕುಟುಂಬ ಸಮೇತ ಕುಳಿತು ನೋಡಬಹುದಾದ ರಾಜರತ್ನ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಯೂಸ್‌ಲೆಸ್ ಫೆಲೋ ಕನ್ನಡ ಚಲನಚಿತ್ರವು ಡಿಸೆಂಬರ್ ೧೫ಕ್ಕೆ ರಾಜ್ಯದ ೭೨ ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಗಲಿದೆ ಎಂದು ಚಲನಚಿತ್ರದ ನಾಯಕ ನಟ ಮತ್ತು ನಿರ್ದೇಶಕ ಯು.ಬಿ. ಮನು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ ಭಾರಿ ಕುತೂಹಲ ಕೆರಳಿಸಿರುವ ಕುಟುಂಬ ಸಮೇತ ಕುಳಿತು ನೋಡಬಹುದಾದ ರಾಜರತ್ನ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಯೂಸ್‌ಲೆಸ್ ಫೆಲೋ ಕನ್ನಡ ಚಲನಚಿತ್ರವು ಡಿಸೆಂಬರ್ ೧೫ಕ್ಕೆ ರಾಜ್ಯದ ೭೨ ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಗಲಿದೆ ಎಂದು ಚಲನಚಿತ್ರದ ನಾಯಕ ನಟ ಮತ್ತು ನಿರ್ದೇಶಕ ಯು.ಬಿ. ಮನು ತಿಳಿಸಿದರು. ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಯೂಸ್‌ಲೆಸ್ ಫೆಲೋ ಚಿತ್ರವು ನನ್ನ ನಾಲ್ಕನೇ ಸಿನಿಮಾವಾಗಿದ್ದು, ಇದಕ್ಕೂ ಮೊದಲು ಮೋಜೂ, ನಾನು ನನ್ ಜಾನು ಚಿತ್ರಗಳಲ್ಲಿ ನಾಯಕನಟನಾಗಿ ನಟಿಸಿರುತ್ತೇನೆ. ಯೂಸ್ಸೆನ್ ಫೆಲೋ ಚಿತ್ರಕ್ಕೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರುತ್ತೇನೆ. ಯೂಸ್‌ಲೆಸ್ ಫೆಲೋ ಚಿತ್ರವು ಪ್ರೀತಿ ಮತ್ತು ಸಾಹಸದ ಕಥಾ ಹಂದರದ ಜೊತೆ ಸ್ಫೂರ್ತಿದಾಯಕವೂ ಆಗಿದೆ. ನಾಯಕ ನಟ ತನ್ನ ಜೀವನದಲ್ಲಿ ಯೂಸ್‌ಲೆಸ್ ಫೆಲೋ ಹಂತವನ್ನು ಹೇಗೆ ಮೆಟ್ಟಿ ನಿಲ್ಲುತ್ತಾನೆ ಹಾಗು ಅದಕ್ಕೆ ಎದುರಾಗುವ ಕಷ್ಟ ಕಾರ್ಪಣ್ಯಗಳು ಇವುಗಳೆಲ್ಲವುದರ ಮಿಶ್ರಣವೇ ಯೂಸ್ಲೆಸ್ ಫೆಲೋ ಎಂದರು. ಈ ಚಲನಚಿತ್ರದಲ್ಲಿ ನಾನು ನಾಯಕ ನಟನಾಗಿ ಪಾತ್ರ ವಹಿಸಿದ್ದು, ಉಳಿದಂತೆ ಚಿತ್ರದಲ್ಲಿ ದಿವ್ಯ ಗೌಡ, ವಿಜಯ್ ಸೂರ್ಯ, ವಿನೋದ್ ಗೊಬ್ಬರಗಾಲ, ಜೆ ಕೆ ಮೈಸೂರು ಹಾಗೂ ಥ್ರಿಲ್ಲರ್ ಮಂಜು ಹಾಗು ಅಪ್ಪು ವೆಂಕಟೇಶ್ ಸಾಹಸ ಸಂಯೋಜನೆ ಮಾಡಿದ್ದಾರೆ. ರತ್ನ ಬಸವರಾಜು ನಿರ್ಮಾಣ ಮಾಡಿದ್ದು, ರಾಜರತ್ನ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಹೊರಬರುತ್ತಿದೆ. ಶ್ಯಾಮ್ ಸಿಂಧನೂರ್ ಛಾಯಾಗ್ರಹಣ, ಶಿವಪ್ರಸಾದ್ ಸಂಗೀತ, ವಿಜಯ್ ಸಿಂದಿಗಿ ಸಂಕಲನ ಚಿತ್ರಕ್ಕಿದೆ. ಇನ್ನು ಸಿನಿಮಾದಲ್ಲಿ ಒಟ್ಟು ೫ ಹಾಡುಗಳಿದ್ದು, ಹಾಸನ, ಹುಬ್ಬಳ್ಳಿ, ಬೆಂಗಳೂರು, ಸಕಲೇಶಪುರ, ಮಂಗಳೂರು ಹಾಗು ವಿವಿಧ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.

ಹಾಸನದ ಮಲೆನಾಡು ಶಿಕ್ಷಣ ಸಂಸ್ಥೆಯಲ್ಲಿ ಹಾಗೂ ತಾಲೂಕಿನ ಮಗ್ಗೆಯಲ್ಲಿ ಕೆಲ ಸನ್ನಿವೇಶವನ್ನು ಚಿತ್ರೀಕರಿಸಲಾಗಿದೆ. ಚಲನಚಿತ್ರವು ಇದೇ ಡಿಸೆಂಬರ್ ೧೫ಕ್ಕೆ ಬಿಡುಗಡೆಗೆ ಸಜ್ಜಾಗಿದೆ. ಹಾಸನ ನಗರದ ಪಿಕ್ಚರ್ ಪ್ಯಾಲೇಸ್‌ನಲ್ಲಿ ಚಲನಚಿತ್ರ ಬಿಡುಗಡೆಯಾಗಲಿದ್ದು, ಯಶಸ್ವಿಗೆ ಎಲ್ಲಾರೂ ಸಹಕರಿಸುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಬಸವಕೇಂದ್ರದ ಅಧ್ಯಕ್ಷರು ಹಾಗೂ ನಾಯಕ ನಟ ಮನು ತಂದೆ ಯುಎಸ್ ಬಸವರಾಜು, ಶ್ರೀ ಬಸವರಾಜೇಂದ್ರ ಶಾಲೆಯ ನಿವೃತ್ತ ಶಿಕ್ಷಕರಾದ ಯು.ಎಸ್, ಲೋಕೇಶ್, ವೀರಶೈವ ಸಮಾಜದ ಮುಖಂಡರಾದ ಟಿ.ಪಿ. ನಾಗರಾಜು, ಅಖಿಲ ಭಾರತ ವೀರಶೈವ ಲಿಂಗಾಯತ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಾರತೀಯರ ಕರೆತರಲು ವಿಶೇಷ ವಿಮಾನ ಮಾಡಿ: ಮೋದಿಗೆ ಸಿಎಂ ಸಿದ್ದು ಪತ್ರ
100ಕ್ಕೂ ಕನ್ನಡಿಗರ ಹೊತ್ತು ಬಂತು ಮೊದಲ ವಿಮಾನ