ರಾಜ್ಯದ 5 ಕಲಾವಿದರಿಗೆ ಉಸ್ತಾದ್‌ಬಿಸ್ಮಿಲ್ಲಾ ಖಾನ್‌ ಯುವ ಪುರಸ್ಕಾರ

KannadaprabhaNewsNetwork |  
Published : Jun 13, 2026, 03:45 AM IST
sivashri skanda prasad 1 | Kannada Prabha

ಸಾರಾಂಶ

ಕೇಂದ್ರ ಸಂಗೀತ ನಾಟಕ ಅಕಾಡೆಮಿಯು 2024 ಹಾಗೂ 2025ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದ್ದು ಟಿ.ಎಸ್.ನಾಗಾಭರಣ ಸೇರಿದಂತೆ ಹಲವರು ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ಸಂಗೀತ ನಾಟಕ ಅಕಾಡೆಮಿಯು 2024 ಹಾಗೂ 2025ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದ್ದು ಟಿ.ಎಸ್.ನಾಗಾಭರಣ ಸೇರಿದಂತೆ ಹಲವರು ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜೊತೆಗೆ ಸಂಗೀತ ನೃತ್ಯ ಸೇರಿದಂತೆ ವಿವಿಧ ಕಲೆಯಲ್ಲಿ ಸೇವೆ ಸಲ್ಲಿಸುವ ಯುವ ಕಲಾವಿದರಿಗೆ ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಸ್ಮರಣಾರ್ಥ ನೀಡುವ ಪುರಸ್ಕಾರಕ್ಕೆ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್‌ ಸೇರಿದಂತೆ ಕರ್ನಾಟಕ ಐವರು ಕಲಾವಿದರು ಆಯ್ಕೆಯಾಗಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಗಾಯನ ವಿಭಾಗದಲ್ಲಿ ರಂಜನಿ ವಾಸುಕಿ, ಸುಗಮ ಸಂಗೀತ ವಿಭಾಗದಲ್ಲಿ ಬೆಂಗಳೂರಿನ ಶಿವಶ್ರೀ ಸ್ಕಂದಾಪ್ರಸಾದ್‌, ಹಿಂದೂಸ್ತಾನಿ ಗಾಯನ ವಿಭಾಗದಲ್ಲಿ ಕಾರ್ಕಳದ ವಿದುಷಿ ಮಹಾಲಕ್ಷ್ಮಿ ಶೆಣೈ, ಮೃದಂಗ ವಾದನದಲ್ಲಿ ಬಿ.ಎಸ್‌.ಪ್ರಶಾಂತ್‌ ಮತ್ತು ನೃತ್ಯ ವಿಭಾಗದಲ್ಲಿ ಕೊಡಗಿನ ಮುಕ್ಕಾಟಿರ ಶಿಲ್ಪಾ ನಂಜಪ್ಪ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಹಿರಿಯ ಕಲಾವಿದರಿಗೆ ರಾಷ್ಟ್ರೀಯ ಗೌರವ:

ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್‌ಗೆ ಖ್ಯಾತ ಮೃದಂಗ ವಿದ್ವಾಂಸ ಎ.ವಿ.ಆನಂದ್‌ ಆಯ್ಕೆಯಾಗಿದ್ದಾರೆ. ಹಿರಿಯ ಕಲಾವಿದರ ವಿಭಾಗದಲ್ಲಿ ಕಲಾಕ್ಷೇತ್ರಕ್ಕೆ ನೀಡಿದ ಸಮಗ್ರ ಕೊಡುಗೆಗಾಗಿ ವಿದುಷಿ ಟಿ.ಎಸ್‌.ಸತ್ಯವತಿ, ಮೃದಂಗ ಕ್ಷೇತ್ರದಲ್ಲಿ ವಿದ್ವಾನ್‌ ಅನೂರ್‌ ಅನಂತಕೃಷ್ಣ ಶರ್ಮ, ರಂಗಭೂಮಿಯಲ್ಲಿ ಟಿ.ಎಸ್.ನಾಗಾಭರಣ, ನೃತ್ಯ ಕಲಾವಿದೆ ವೀಣಾಮೂರ್ತಿ, ವಿಜಯ್‌ ಸೇರಿದಂತೆ ಹಲವು ಗಣ್ಯರು ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

27 ಪಡಿತರ ಗೋದಾಮುಗಳ ಮೇಲೆ ಲೋಕಾಯುಕ್ತ ದಾಳಿ
ಮೋದಿ ನೇತೃತ್ವದಲ್ಲಿ ಉದ್ಯೊಗಾಧಾರಿತಕೈಗಾರಿಕೆಗಳಿಗೆ ಉತ್ತೇಜನ: ಎಚ್‌ಡಿಕೆ