ಪಿಎಂ ಸೂರ್ಯಘರ್ ಯೋಜನೆಯಡಿ ಸಹಾಯಧನ ಬಳಸಿಕೊಳ್ಳಿ: ಸಂಸದ ಕೋಟ ಕರೆ

KannadaprabhaNewsNetwork |  
Published : Jul 20, 2025, 01:15 AM IST
19ಸೂರ್ಯ | Kannada Prabha

ಸಾರಾಂಶ

ವಿದ್ಯುತ್ ಬಳಕೆಯ ಪ್ರತಿ ಕುಟುಂಬಗಳು ಸ್ವಾವಲಂಬನೆ ಸಾಧಿಸಲು ಈ ಸೂರ್ಯ ಘರ್ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕ್‌ಗಳು 2.50 ಲಕ್ಷ ರು. ಸಾಲ ನೀಡುತ್ತಿದ್ದು, ಅದಕ್ಕೆ 78,000 ರೂ. ಸಬ್ಸಿಡಿ ಸಹ ನೀಡಲಾಗುತ್ತಿದೆ. ಆಸಕ್ತ ಫಲಾನುಭವಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ನಿಗದಿತ ವೆಂಡರ್‌ಗಳ ಮೂಲಕ ಸೌರ ವಿದ್ಯುತ್ ಸಂಪರ್ಕ ಪಡೆಯಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಸಾಲ ಪಡೆದರೆ, ಕೇಂದ್ರ ಸರ್ಕಾರದಿಂದ 78 ಸಾವಿರ ರು. ಸಹಾಯಧನದ ಅವಕಾಶವನ್ನು ಬ‍ಳಸಿಕೊಂಡು ಲಾಭ ಪಡೆಯುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದ್ದಾರೆ.ಅವರು ತಮ್ಮ ಜಿಲ್ಲಾ ಕಚೇರಿಯಲ್ಲಿ ಸೂರ್ಯ ಘರ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯುತ್ ಬಳಕೆಯ ಪ್ರತಿ ಕುಟುಂಬಗಳು ಸ್ವಾವಲಂಬನೆ ಸಾಧಿಸಲು ಈ ಸೂರ್ಯ ಘರ್ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕ್‌ಗಳು 2.50 ಲಕ್ಷ ರು. ಸಾಲ ನೀಡುತ್ತಿದ್ದು, ಅದಕ್ಕೆ 78,000 ರೂ. ಸಬ್ಸಿಡಿ ಸಹ ನೀಡಲಾಗುತ್ತಿದೆ. ಆಸಕ್ತ ಫಲಾನುಭವಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ನಿಗದಿತ ವೆಂಡರ್‌ಗಳ ಮೂಲಕ ಸೌರ ವಿದ್ಯುತ್ ಸಂಪರ್ಕ ಪಡೆಯಬೇಕು ಎಂದವರು ವಿವರಿಸಿದರು.ಕುಂದಾಪುರ ಪುರಸಭಾ ಸದಸ್ಯರಾದ ಶೇಖರ ಪೂಜಾರಿ, ಕಾಪು ಪುರಸಭಾ ಸದಸ್ಯ ಅನಿಲ್, ನಿಟ್ಟೆ ಗ್ರಾ.ಪಂ. ಸದಸ್ಯ ನಿತಿನ್ ಅವರು ಕೇಂದ್ರ ಸರ್ಕಾರದ ಸೂರ್ಯ ಘರ್ ಯೋಜನೆಯ ಅನುಷ್ಠಾನ ಸಮಿತಿಯ ಸದಸ್ಯರಾಗಿ ಜಿಲ್ಲೆಗೆ ನಾಮ ನಿರ್ದೇಶಿತರಾಗಿದ್ದು, ಯೋಜನೆಯ ಅನುಷ್ಠಾನಕ್ಕೆ ದುಡಿಯುತ್ತಿದ್ದಾರೆ ಎಂದು ಹೇಳಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಯಾರೇ ಸೂರ್ಯ ಘರ್ ಯೋಜನೆ ಅಳವಡಿಸಿಕೊಂಡರೆ ಸ್ಥಳೀಯ ಪಂಚಾಯಿತಿಗೆ 1 ಸಾವಿರ ರು. ಪ್ರೋತ್ಸಾಹ ಧನ ಸಿಗಲಿದೆ. ಆದ್ದರಿಂದ ಪ್ರತಿ ಗ್ರಾ.ಪಂ.ಗಳು ಯೋಜನೆಯ ಅನುಷ್ಠಾನಕ್ಕೆ ಶ್ರಮವಹಿಸಬೇಕು ಎಂದವರು ಸಲಹೆ ನೀಡಿದರು.ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್, ಯೋಜನಾ ನಿರ್ದೇಶಕ ಉದಯ್ ಕುಮಾರ್ ಶೆಟ್ಟಿ, ಮೆಸ್ಕಾಂ ಅಧೀಕ್ಷಕ ದಿನೇಶ್ ಉಪಾಧ್ಯಾಯ, ನಿಟ್ಟೆ, ಮಿಜಾರು, ಕೋಟತಟ್ಟು, ಉಪ್ಪೂರು, ಕಿರಿಮಂಜೇಶ್ವರ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ