ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸಿದಾಗ ರಾಮರಾಜ್ಯ

KannadaprabhaNewsNetwork | Published : Aug 16, 2024 12:48 AM

ಸಾರಾಂಶ

ಜನಪ್ರತಿನಿಧಿಗಳು ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದರೆ ನಮ್ಮ ದೇಶ ರಾಮ ರಾಜ್ಯವಾಗುತ್ತದೆ ಎಂದು ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಎನ್ಎಸ್. ಲಕ್ಷ್ಮಣ್ ಗುರುವಾರ ತಿಳಿಸಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಜನಪ್ರತಿನಿಧಿಗಳು ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದರೆ ನಮ್ಮ ದೇಶ ರಾಮ ರಾಜ್ಯವಾಗುತ್ತದೆ ಎಂದು ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಎನ್ಎಸ್. ಲಕ್ಷ್ಮಣ್ ಗುರುವಾರ ತಿಳಿಸಿದರು.

ಹೋಬಳಿ ಕೇಂದ್ರದ ಗ್ರಾಮ ಪಂಚಾಯಿತಿ ಹಾಗೂ ನಾಡಕಚೇರಿ ಆವರಣದಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಕ್ಷಬೇಧ, ಜಾತಿಭೇದ ಮರೆತು ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಅಭಿವೃದ್ಧಿಗೆ ಮುಂದಾಗಬೇಕು ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದರು ಏಳಿ ಎಚ್ಚರಗೊಳ್ಳಿ, ಈ ದೇಶದ ಎಲ್ಲಾ ಸಮಸ್ತ ಜನರ ಒಳಿತಿಗೆ ಹೋರಾಡಿ ಎಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಕನ್ನಡಿಗೆಯಲ್ಲಿ ಪ್ರಚಾರ ನಡೆಸಿದರು. ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು. ಅಧಿಕಾರಿಗಳು ಜನಪ್ರತಿನಿಧಿಗಳು ಪ್ರಾಮಾಣಿಕತೆಯಿಂದ ಶ್ರಮಿಸಿದರೆ ದೇಶದ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಪ್ರಭಾರ ಉಪ ತಹಸೀಲ್ದಾರ್‌ ಲೋಕೇಶ್ ಮಾತನಾಡಿ, ನಡೆನುಡಿಯಲ್ಲೂ ಈ ದೇಶದ ಕಾನೂನುಗಳನ್ನು ಪಾಲನೆ ಮಾಡಬೇಕು. ಸಂಕುಚಿತ ಮನೋಭಾವ ಬಿಟ್ಟು ಬೇರೆಯವರಿಗೆ ತೊಂದರೆ ಆಗದಂತೆ ದೇಶದ ಅಭಿವೃದ್ಧಿಗೆ ಒಗ್ಗಟ್ಟಾಗಬೇಕು. ಸ್ತಂತ್ರಕ್ಕೋಸ್ಕರ ಹೋರಾಡಿದ ಝಾನ್ಸಿರಾಣಿ ಲಕ್ಷ್ಮಿಬಾಯಿ ಕುಟುಂಬ ಈಗಲೂ ಸಂಕಷ್ಟದಲ್ಲಿದೆ ಎಂದು ತಿಳಿಸಿದರು.

78ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಜಗದೀಶ್ ಅವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಸದಸ್ಯರು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಶಿವರಾಂ, ಗ್ರಾಮ ಲೆಕ್ಕಾಧಿಕಾರಿಗಳಾದ ಶಿವಕುಮಾರ್, ಶ್ರೀನಿವಾಸ್, ಉದ್ಯಮಿ ಜಗದೀಶ್, ಗ್ರಾಪಂ ಮಾಜಿ ಅಧ್ಯಕ್ಷ ಎನ್. ಎನ್. ಮಂಜಪ್ಪ, (ಗೌಡಕಿ) ರಮ್ಯಾ ಲೋಕೇಶ್, ಹೊನ್ನೇಗೌಡ, ಶಿವಕುಮಾರ್, ನಟರಾಜ್, ಮಂಜುನಾಥ್, ಜಬಿನ್ ತಾಜ್, ವಿಠಲ್ ಕುಮಾರ್, ಸವಿತಾ ಯೋಗೇಶ್, ಶಬಿನ್ ತಾಜ್ ಮಹಮ್ಮದ್ ಜಾವಿದ್, ಅಲ್ಲಾಭಕ್ಷಿ, ಯಲ್ಲಪ್ಪ, ನಂದಿನಿ ಪಾರ್ಲರ್ ಮಂಜುನಾಥ್, ಕಾರ್ಯದರ್ಶಿ ಭವಾನಿ, ಲೆಕ್ಕಪತ್ರದಾರ ರಾಜಕುಮಾರ್, ಕವಿತಾ, ಗ್ರಂಥಾಲಯ ದೇವರಾಜ್, ನಾಗರಾಜ್, ಸಿಬ್ಬಂದಿ ವರ್ಗ ಇತರರು ಹಾಜರಿದ್ದರು.

Share this article