ಸ್ವೀಪರ್ ಪುತ್ರಿಗೆ ಮಂಗಳೂರು ವಿವಿಯಲ್ಲಿ ಕನ್ನಡ ಎಂ.ಎ. ವಿಭಾಗದಲ್ಲಿ ಮೊದಲ ರ್‍ಯಾಂಕ್

KannadaprabhaNewsNetwork |  
Published : Mar 30, 2025, 03:05 AM ISTUpdated : Mar 30, 2025, 10:25 AM IST
ರವಿ ಎನ್ | Kannada Prabha

ಸಾರಾಂಶ

ಉಳ್ಳಾಲ ತಾಲೂಕಿನ ಕುತ್ತಾರು ನಿವಾಸಿ ವಿವೇಕಾನಂದ-ಸ್ವೀಪರ್‌ ಸುಜಾತಾ ಪುತ್ರಿ ವೀಕ್ಷಿತಾ ಮಂಗಳೂರು ವಿವಿಯಲ್ಲಿ ಕನ್ನಡ ಎಂ.ಎ. ವ್ಯಾಸಂಗ ಮಾಡಿ ಮೊದಲ ರ್‍ಯಾಂಕ್ ಪಡೆದಿದ್ದಾರೆ.

 ಉಳ್ಳಾಲ :  ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸ್ವೀಪರ್ ಆಗಿ ಕಾರ್ಯನಿರ್ವಹಿಸುತ್ತಿರುವವರ ಪುತ್ರಿ ಎಂಎಯಲ್ಲಿ ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.

ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯ ಆವರಣದ ಮಂಗಳ ಸಭಾಂಗಣದಲ್ಲಿ ಶನಿವಾರ ನಡೆದ 43ನೇ ಘಟಿಕೋತ್ಸವದಲ್ಲಿ ವೀಕ್ಷಿತಾಗೆ ಪ್ರಮಾಣಪತ್ರ ವಿತರಿಸಲಾಯಿತು.

ಉಳ್ಳಾಲ ತಾಲೂಕಿನ ಕುತ್ತಾರು ನಿವಾಸಿ ವಿವೇಕಾನಂದ-ಸ್ವೀಪರ್‌ ಸುಜಾತಾ ಪುತ್ರಿ ವೀಕ್ಷಿತಾ ಮಂಗಳೂರು ವಿವಿಯಲ್ಲಿ ಕನ್ನಡ ಎಂ.ಎ. ವ್ಯಾಸಂಗ ಮಾಡಿ ಮೊದಲ ರ್‍ಯಾಂಕ್ ಪಡೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವೀಕ್ಷಿತಾ, ನನಗೆ ಮೊದಲಿನಿಂದಲೂ ಉಪನ್ಯಾಸಕಿಯಾಗಬೇಕೆಂಬ ಕನಸು ಇದೆ. ಅದಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಸ್‌ವಿಪಿ ಕನ್ನಡ ವಿಭಾಗವನ್ನು ಸೇರಿ ಶ್ರಮಪಟ್ಟು ಅಧ್ಯಯನ ಮಾಡಿದ್ದೆ. ತಂದೆ, ತಾಯಿ ಹಾಗೂ ಪ್ರಾಧ್ಯಾಪಕರು ಸಹಕಾರ ನೀಡಿದ್ದರು. ಪ್ರಸ್ತುತ ಬಿ.ಇಡಿ. ಮಾಡುತ್ತಿದ್ದೇನೆ ಎಂದರು.

ತೇಜಸ್ವಿನಿಗೆ 4 ನಗದು ಪುರಸ್ಕಾರ, 2 ಚಿನ್ನದ ಪದಕ:

ಎಂಸಿಜೆ ವಿಭಾಗದಲ್ಲಿ ಅಧ್ಯಯನ ನಡೆಸಿದ್ದ ಕಾಸರಗೋಡು ಬಾಯಾರ್‌ನ ನಾಗೇಶ್ ಭಟ್-ಉಮಾದೇವಿ ದಂಪತಿ ಪುತ್ರಿ ತೇಜಸ್ವಿನಿ ಎನ್.ವಿ., ಎರಡು ಚಿನ್ನದ‌ ಪದಕ ಹಾಗೂ ನಾಲ್ಕು ನಗದು ಪುರಸ್ಕಾರ ಪಡೆದರು.ಎಂಜಿನಿಯರಿಂಗ್ ಕಲಿತು ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ನಾನು, ಎಂಸಿಜೆ ಮಾಡಿ ಪತ್ರಕರ್ತೆ ಆಗಬೇಕೆನ್ನುವ ಕನಸು ಹುಟ್ಟಿಕೊಂಡಿತ್ತು. ಅದಕ್ಕಾಗಿ ಉದ್ಯೋಗ ತ್ಯಜಿಸಿ ಮಂಗಳೂರು ವಿ.ವಿ.ಯ ಎಂಸಿಜೆ ವಿಭಾಗಕ್ಕೆ ಸೇರಿಕೊಂಡು ಸಾಧಿಸಿದ್ದು ಸಂತಸ ತಂದಿದೆ ಎಂದರು 

ವಿನಿತಾ ಪಿ. ಶೆಣೈ, ಆರಾಧನಾ ಶೆಣೈಗೆ ತಲಾ 3 ಚಿನ್ನದ ಪದಕಮ್ಯಾಪ್ಸ್‌ ಸಂಧ್ಯಾ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು 650 ಅಂಕಗಳೊಂದಿಗೆ ಪ್ರಥಮ ರ್‍ಯಾಂಕ್‌ ಪೂರೈಸಿರುವ ವಿನಿತಾ ಪಿ. ಶೆಣೈ ಮೂರು ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ. ಮಂಗಳೂರಿನ ರುಕ್ಮಿಣಿ ಶೆಣೈ ಮತ್ತು ಸುಧಾಕರ ಶೆಣೈ ದಂಪತಿ ಪುತ್ರಿಯಾಗಿರುವ ಬಿಕಾಂ ಪದವಿ ಜತೆ ಸಿಎ ಶಿಕ್ಷಣ ಮುಂದುವರಿಸಿದ್ದಾರೆ.

ಮ್ಯಾಪ್ಸ್‌ ಸಂಧ್ಯಾ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು 650 ಅಂಕಗಳೊಂದಿಗೆ ಪ್ರಥಮ ರ್‍ಯಾಂಕ್‌ನಲ್ಲಿ ಪೂರೈಸಿರುವ ಆರಾಧನಾ ವಿ. ಶೆಣೈ ಮೂರು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಮಂಗಳೂರಿನ ವಿನಿತಾ ವಿ. ಶೆಣೈ ಮತ್ತು ಸುಧಾಕರ ಶೆಣೈ ದಂಪತಿ ಪುತ್ರಿ ಬಿಕಾಂ ಪದವಿ ಜತೆ ಸಿಎ ಶಿಕ್ಷಣವನ್ನೂ ಮುಂದುವರಿಸಿದ್ದಾರೆ.

ಬ್ಯಾಂಕ್ಬ್ಯಾಂಕ್‌ ಉದ್ಯೋಗ ತೊರೆದು ಅಧ್ಯಯನ ನಡೆಸಿದ ರವಿಗೆ ಪಿಎಚ್‌ಡಿ ಪದವಿರೌದ್ರನಾಥೇಶ್ವರ ಕ್ಷೇತ್ರ ನಡುಬೊಟ್ಟು ಧಮದರ್ಶಿ ರವಿ ಎನ್. ಮಂಡಿಸಿದ ‘ಪಂಜುರ್ಲಿ ದೈವದ ಪ್ರಾಧಿನ್ಯತೆ, ಪ್ರದರ್ಶನಾತ್ಮಕತೆ: ಮಾನವ ಸಂಪನ್ಮೂಲ ಅಭಿವೃದ್ಧಿ ಆಧಾರಿತ ಅಧ್ಯಯನ’ ಪ್ರಬಂಧಕ್ಕೆ ಮಂಗಳೂರು ವಿವಿ ಪಿಎಚ್‌ಇ ಪದವಿ ಪ್ರದಾನ ಮಾಡಿದೆ.ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದ ಇವರು ದೈವ ಹಾಗೂ ಕ್ಷೇತ್ರದ ಅಭಿವೃದ್ಧಿ ಚಿಂತನೆಯಿಂದ ಬ್ಯಾಂಕ್ ಉದ್ಯೋಗವನ್ನು ತೊರೆದರು. ಬಿಕಾಂ, ಎಂಎಚ್‌ಆರ್‌ಡಿ ಹಾಗೂ ಎಂಬಿಎ ಮಾಡಿದ ಇವರು, ದೈವದ ಸೇವೆ ಮಾಡುವ ಸಂದರ್ಭದಲ್ಲಿ ಪಂಜುರ್ಲಿ ದೈವರಾಧನೆಯ ಬಗ್ಗೆ ಅಧ್ಯಯನ ಮಾಡಬೇಕು ಎಂಬ ಚಿಂತನೆ ಬಂದಿತ್ತು. ಇದೀಗ ದೈವದ ಬಗ್ಗೆ ಅಧ್ಯಯನ ಮಾಡಿ ಡಾಕ್ಟರೇಟ್ ಪದವಿ ಪಡೆದಿದ್ದೇನೆ. ಮುಂದೆ ದೈವರಾಧನೆ ಹಾಗೂ ದೈವಗಳ ವಿಚಾರವಾಗಿ ಪುಸ್ತಕ ಬರೆಯಬೇಕೆಂಬ ಗುರಿ ಇದೆ. ತುಳುನಾಡಿನಲ್ಲಿ ಪ್ರಖ್ಯಾತವಾಗಿರುವ ‘ಅಳಿಯ ಕಟ್ಟು ಮತ್ತು ಮಕ್ಕಳ ಕಟ್ಟು ವಿನಲ್ಲಿ ಪಂಜುರ್ಲಿ ದೈವದ ಪ್ರಾಮುಖ್ಯತೆ’ ಎಂಬ ವಿಷಯದ ಬಗ್ಗೆ ಡಾಕ್ಟರ್ ಆಫ್ ಲಿಟರೇಚರ್ (ಡಿ. ಲಿಟ್) ಪದವಿಗಾಗಿ ಹೆಚ್ಚಿನ ವಿಮರ್ಶಾತ್ಮಕ, ಸಾಂಸ್ಕೃತಿಕ ಅಧ್ಯಯನ ನಡೆಸುವ ಉದ್ದೇಶ ಹೊಂದಿದ್ದೇನೆ ಎಂದು ರವಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಮಾತೃಭಾಷಾ ಪ್ರೇಮದಿಂದ ಕೊಂಕಣಿ ಎಂಎ

‘ನಾನು ಶಾರದಾ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನಮ್ಮ ಮಾತೃಭಾಷೆಯ ಬಗ್ಗೆ ಅಪಾರ ಪ್ರೇಮ ಇರುವ ಕಾರಣ ಸಂಜೆ ಹೊತ್ತು ಸಂಧ್ಯಾ ಕಾಲೇಜಿನಲ್ಲಿ ಕೊಂಕಣಿ ತರಗತಿಯಲ್ಲಿ ಕಲಿತು ಕೊಂಕಣಿ ಎಂಎ ಪದವಿ ಪಡೆದಿದ್ದೇನೆ’ ಎಂದು ಕೊಂಕಣಿ ಎಂಎ ಪ್ರಥಮ ರ್‍ಯಾಂಕ್‌ ವಿಜೇತೆ ಅನಿತಾ ಶೆಣೈ ಹೇಳಿದರು 

PREV

Recommended Stories

ಧರ್ಮಸ್ಥಳ ಪ್ರಕರಣ ಮುಚ್ಚಿ ಹಾಕುವ ಯತ್ನ
ತಾಲೂಕು ಆಡಳಿತದ ಬೇಜವಾಬ್ದಾರಿಯಿಂದ ನೀರು ಕಲುಷಿತ