ಆನೆಯ ರೂಪಕ ಒಂದು ಸೂಕ್ಷ್ಮ ಸಂವೇದನೆಯ ಪ್ರಯತ್ನ ಕೃಷ್ಣೇಗೌಡನ ಆನೆ

KannadaprabhaNewsNetwork |  
Published : Nov 22, 2024, 01:18 AM IST
47 | Kannada Prabha

ಸಾರಾಂಶ

ಆನೆಯ ರೂಪಕ ಒಂದು ಸೂಕ್ಷ್ಮ ಸಂವೇದನೆಯ ಪ್ರಯತ್ನ

ಕನ್ನಡಪ್ರಭ ವಾರ್ತೆ ಮೈಸೂರುಮನುಷ್ಯ ಪ್ರಧಾನವಾಗಿರುವ ಈ ಸಮಾಜದಲ್ಲಿ ಆನೆಯ ರೂಪಕ ಒಂದು ಸೂಕ್ಷ್ಮ ಸಂವೇದನೆಯ ಪ್ರಯತ್ನ ಕೃಷ್ಣೇಗೌಡನ ಆನೆ ಎಂದು ನಿರಂತರ ರಂಗ ನಿರ್ದೇಶಕ ಎಂ.ಎಂ. ಸುಗುಣ ಹೇಳಿದರು.ವಿ.ವಿ. ಮೊಹಲ್ಲಾ ಮಾತೃಮಂಡಳಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ನಿರಂತರ ಫೌಂಡೇಶನ್‌ನಿಂದ ನಡೆದ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ, ಜೀವನ್‌ಕುಮಾರ್ ಹೆಗ್ಗೋಡು ನಿರ್ದೇಶನದ ನಾಟಕ ಕೃಷ್ಣೇಗೌಡನ ಆನೆ ಪ್ರದರ್ಶನದಲ್ಲಿ ಅವರು ಮಾತನಾಡಿದರು.ರಂಗಭೂಮಿ ಸದಾ ಪ್ರಯೋಗಶೀಲತೆಯನ್ನು ಒಳಗೊಂಡಿರಿತ್ತದೆ, ಕಳೆದ ಮೂರು ದಶಕದಿಂದ ನಿರಂತರ ರಂಗಭೂಮಿಯನ್ನು ಒಂದು ಭಾಷೆಯಂತೆ ಬಳಸುತ್ತಾ ಸಮಾಜದೊಟ್ಟಿಗೆ ಸಂಧಿಸುತ್ತಿದೆ. ರಂಗಭೂಮಿಯ ವಿಸ್ತರಣೆಯಾಗಿ ನೂರಾರು ಸೃಜನಶೀಲ ಕಾರ್ಯಕ್ರಮಗಳನ್ನು ಈವರೆಗೂ ಹಮ್ಮಿಕೊಂಡು, ರಾಜ್ಯಾದ್ಯಂತ ಸಂಚರಿಸಿದೆ. ಇದರ ಭಾಗವಾಗಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕೃಷ್ಣೇಗೌಡನ ಆನೆ ಎಂಬ ನಾಟಕವನ್ನು ಪ್ರದರ್ಶನ ನೀಡುತ್ತ ಬಂದಿದೆ ಎಂದರು. ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ್ ಮಾತನಾಡಿ, ರಂಗಭೂಮಿ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶ. ಯುವಕರಿಗೆ ಸುಲಭ ಮಾರ್ಗದಲ್ಲಿ ತಮ್ಮ ಆಸಕ್ತಿಯನ್ನು ವಿಸ್ತ್ರತಗೊಳಿಸಿಕೊಳ್ಳಲು ಇರುವ ಆಯಾಮವೇ ಇಂತಹ ನಾಟಕಗಳು ಹೆಚ್ಚು ಹೆಚ್ಚು ಪ್ರದರ್ಶನ ಕಾಣಬೇಕು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ