ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿ ಕೋಲಾರದ ವಿ.ವಿ.ರಾಮಕೃಷ್ಣಪ್ಪ ಆಯ್ಕೆ

KannadaprabhaNewsNetwork |  
Published : Nov 18, 2026, 01:15 AM IST
೧೭ಕೆಎಲ್‌ಆರ್-೩ಕರ್ನಾಟಕರಾಜ್ಯ ಹಿಂದಿ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದು, ರಾಜ್ಯಾಧ್ಯಕ್ಷರಾಗಿ ಕೋಲಾರದ ವಿ.ವಿ.ರಾಮಕೃಷ್ಣಪ್ಪ ಆಯ್ಕೆಯಾಗಿದ್ದಾರೆ. | Kannada Prabha

ಸಾರಾಂಶ

ರಾಜ್ಯ ಕಾರ್ಯಕಾರಿಣಿಯ ನೂತನ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ರಾಜ್ಯಾಧ್ಯಕ್ಷರಾಗಿ ಕೋಲಾರದ ರಾಮಕೃಷ್ಣಪ್ಪ ವಿ.ವಿ., ಉಪಾಧ್ಯಕ್ಷರಾಗಿ ಬೆಂಗಳೂರಿನ ಮಮತಾ ಡಿ., ಕಾರ್ಯದರ್ಶಿಯಾಗಿ ಹಾವೇರಿಯ ಡಾ. ಮಾಲತೇಶ್ ಎಂ. ಛಲವಾದಿ, ಖಜಾಂಚಿಯಾಗಿ ಬಳ್ಳಾರಿಯ ಮೆಹಬೂಬ್ ಬಾಷಾ, ಗೌರವಾಧ್ಯಕ್ಷರಾಗಿ ಚಿತ್ರದುರ್ಗದ ಮಂಜುನಾಥ್ ಡಿ., ಕಾರ್ಯಾಧ್ಯಕ್ಷರಾಗಿ ಬಾಗಲಕೋಟೆಯ ಅವಿನಾಶ್ ಹಿರೇಮಠ, ಮಾಧ್ಯಮ ಕಾರ್ಯದರ್ಶಿಯಾಗಿ ಮೈಸೂರಿನ ಡಾ. ವಿಜಿ, ಸಹ ಕಾರ್ಯದರ್ಶಿಯಾಗಿ ಕಲ್ಬುರ್ಗಿಯ ರವಿ ಚೌಹ್ವಾಣ್, ಸಂಘಟನಾ ಕಾರ್ಯದರ್ಶಿಯಾಗಿ ಚಿಕ್ಕಬಳ್ಳಾಪುರದ ಶ್ರೀನಿವಾಸ್ ಕೆ. ವಿ., ಮಹಿಳಾ ಕಾರ್ಯದರ್ಶಿಯಾಗಿ ತುಮಕೂರಿನ ಡಾ. ಲೀಲಾ, ಆಂತರಿಕ ಲೆಕ್ಕ ಪರಿಶೋಧಕರಾಗಿ ಕೊಡಗಿನ ಮಹೇಂದ್ರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಬೆಳಗಾವಿಯ ಡಾ. ಸುನೀಲ್ ಪರೀಟ್ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಕೋಲಾರ

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಹಿಂದಿ ಮಹಿಳಾ ಸೇವಾ ಸಮಿತಿಯಲ್ಲಿ ನಡೆದ ಪ್ರೌಢಶಾಲಾ ಹಿಂದಿ ಶಿಕ್ಷಕರ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರ ಮಹಾಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದು, ರಾಜ್ಯಾಧ್ಯಕ್ಷರಾಗಿ ಜಿಲ್ಲೆಯ ವಿ.ವಿ.ರಾಮಕೃಷ್ಣಪ್ಪ ಅವಿರೋಧವಾಗಿ ಆಯ್ಕೆಯಾದರು.

ರಾಜ್ಯ ಕಾರ್ಯಕಾರಿಣಿಯ ನೂತನ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ರಾಜ್ಯಾಧ್ಯಕ್ಷರಾಗಿ ಕೋಲಾರದ ರಾಮಕೃಷ್ಣಪ್ಪ ವಿ.ವಿ., ಉಪಾಧ್ಯಕ್ಷರಾಗಿ ಬೆಂಗಳೂರಿನ ಮಮತಾ ಡಿ., ಕಾರ್ಯದರ್ಶಿಯಾಗಿ ಹಾವೇರಿಯ ಡಾ. ಮಾಲತೇಶ್ ಎಂ. ಛಲವಾದಿ, ಖಜಾಂಚಿಯಾಗಿ ಬಳ್ಳಾರಿಯ ಮೆಹಬೂಬ್ ಬಾಷಾ, ಗೌರವಾಧ್ಯಕ್ಷರಾಗಿ ಚಿತ್ರದುರ್ಗದ ಮಂಜುನಾಥ್ ಡಿ., ಕಾರ್ಯಾಧ್ಯಕ್ಷರಾಗಿ ಬಾಗಲಕೋಟೆಯ ಅವಿನಾಶ್ ಹಿರೇಮಠ, ಮಾಧ್ಯಮ ಕಾರ್ಯದರ್ಶಿಯಾಗಿ ಮೈಸೂರಿನ ಡಾ. ವಿಜಿ, ಸಹ ಕಾರ್ಯದರ್ಶಿಯಾಗಿ ಕಲ್ಬುರ್ಗಿಯ ರವಿ ಚೌಹ್ವಾಣ್, ಸಂಘಟನಾ ಕಾರ್ಯದರ್ಶಿಯಾಗಿ ಚಿಕ್ಕಬಳ್ಳಾಪುರದ ಶ್ರೀನಿವಾಸ್ ಕೆ. ವಿ., ಮಹಿಳಾ ಕಾರ್ಯದರ್ಶಿಯಾಗಿ ತುಮಕೂರಿನ ಡಾ. ಲೀಲಾ, ಆಂತರಿಕ ಲೆಕ್ಕ ಪರಿಶೋಧಕರಾಗಿ ಕೊಡಗಿನ ಮಹೇಂದ್ರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಬೆಳಗಾವಿಯ ಡಾ. ಸುನೀಲ್ ಪರೀಟ್ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಗಂಗಾಧರ್ ಕಾರ್ಯನಿರ್ವಹಿಸಿದ್ದು, ಈ ಸರ್ವಾನುಮತದ ಆಯ್ಕೆಯನ್ನು ಘೋಷಿಸಿದರು. ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಹಾಜರಿದ್ದು, ಸಹಮತ ಸೂಚಿಸಿದರು.

ಮೂಲತಃ ಮುಳಬಾಗಿಲಿನ ಸರ್ಕಾರಿ ಅನುದಾನಿತ ಪ್ರೌಢಶಾಲೆ ಎಚ್.ಗೊಲ್ಲಹಳ್ಳಿಯಲ್ಲಿ ವಿ.ವಿ.ರಾಮಕೃಷ್ಣಪ್ಪ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಅವರು ಈವರೆಗೂ ಕೋಲಾರ ಜಿಲ್ಲಾ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇನ್ನರ್ ವ್ಹೀಲ್ ಕ್ಲಬ್ ಹೆಣ್ಣುಮಕ್ಕಳ ಆರೋಗ್ಯ ಅರಿವು ಕಾರ್ಯಕ್ರಮ
ಸಿದ್ದಾಪುರ: ಗುಂಡಿ ಮುಚ್ಚದಿದ್ದರೆ ಉಗ್ರ ಹೋರಾಟ ಎಚ್ಚರಿಕೆ