ವಚನ ಸಾಹಿತ್ಯಕ್ಕೆ ತನ್ನದೆ ಆದ ಘನತೆ ಇದೆ: ಮಡಿವಾಳಪ್ಪಾ ಗಂಗಶೆಟ್ಟಿ

KannadaprabhaNewsNetwork |  
Published : Nov 14, 2024, 12:49 AM IST
ಚಿತ್ರ 12ಬಿಡಿಆರ್63 | Kannada Prabha

ಸಾರಾಂಶ

Vachan literature has its own dignity: Madivalappa Gangashetti

-ವಚನಾಮೃತ ಕನ್ನಡ ಸಂಘದಿಂದ ಅಷ್ಟಾವರಣ, ಪಂಚಾಚಾರ ಕುರಿತು ಉಪನ್ಯಾಸ ಕಾರ್ಯಕ್ರಮ

------

ಕನ್ನಡಪ್ರಭ ವಾರ್ತೆ ಬೀದರ್

ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ವಿಶೇಷ ಗೌರವದ ಸ್ಥಾನವಿದೆ. ಹಾಗೆಯೇ ಕನ್ನಡ ಭಾಷೆಯಲ್ಲಿ ರಚನೆಯಾದ ವಚನ ಸಾಹಿತ್ಯಕ್ಕೆ ತನ್ನದೆ ಆದ ಘನತೆ ಇದೆ ಎಂದು ಕೆಆರ್ ಇ ಸಂಸ್ಥೆಯ ಕಾರ್ಯದರ್ಶಿ ಮಡಿವಾಳಪ್ಪಾ ಗಂಗಶೆಟ್ಟಿ ಹೇಳಿದರು.

ವಚನಾಮೃತ ಕನ್ನಡ ಸಂಘದಿಂದ ಸೋಮವಾರ ಸಂಜೆ ಆಯೋಜಿಸಲಾದ ಅಷ್ಟಾವರಣ ಹಾಗೂ ಪಂಚಾಚಾರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಷ್ಟಾವರಣ ವಿಷಯವಾಗಿ ಡಾ. ಕಾವ್ಯಶ್ರೀ ಮಹಾಗಾಂವಕರ್ ಮಾತನಾಡಿ, ಶರಣರು, ಮನುಷ್ಯನ ವ್ಯಕ್ತಿತ್ವವನ್ನು ಜೋಪಾನವಾಗಿಟ್ಟುಕೊಳ್ಳಲು ಎಂಟು ಆವರಣಗಳನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು.

ಮಾನವ ಕುಲದ ಏಳ್ಗೆಗಾಗಿ ವಚನಕಾರರು ಬಹಳ ಶ್ರಮವಹಿಸಿ ಚಿಂಥನ ಮಂಥನ ನಡೆಸಿ ತಮ್ಮ ಅನುಭವನದ ಮಾತುಗಳನ್ನು ಹೇಳಿದರು.

ಕರ್ನಾಟಕ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಪಕಿ ಡಾ. ಸುನೀತಾ ಕೂಡ್ಲಿಕರ್ ಅವರು ಪಂಚಾವಾರದಲ್ಲಿರುವ ಸದಾಚಾರ, ಲಿಂಗಾಚಾರ, ಶಿವಾಚಾರ, ಗಣಾಚಾರ, ಭೃತ್ಯಾಚಾರ ಕುರಿತು ಉಪನ್ಯಾಸ ನೀಡಿ. ಸದಾಚಾರ ಎಂದರೆ ಸತ್ಯ ಶುದ್ಧ ಕಾಯಕ ಮಾಡುವುದು. ನಡೆ ನುಡಿ ಒಂದಾಗಿ ಬದುಕುವುದು ಹಾಗೂ ಯಾವತ್ತು ಯಾವುದೇ ಆಮಿಷಕ್ಕೊಳಗಾಗದೆ ಬದುಕುವುದು ಎಂದು ಹೇಳಿದರು.

ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪಾ ಮಾಸಿಮಾಡೆ ಅಧ್ಯಕ್ಷತೆ ವಹಿಸಿದರು ಪ್ರವೀಣಕುಮಾರ ಭಗಲೆ, ಪ್ರೊ. ಸ್ವರೂಪರಾಣಿ ನಾಗೂರೆ, ಬಸವರಾಜ ಬಿರಾದಾರ, ಜಯದೇವಿ ಯದಲಾಪೂರೆ, ರೇವಣಸಿದ್ದಪ್ಪಾ ಜಲಾದೆ, ರಾಮಕೃಷ್ಣ ಸಾಳೆ, ಪರಮೇಶ್ವರ ಬಿರಾದಾರ, ಶಂಬುಲಿಂಗ ವಾಲದೊಡ್ಡಿ, ಬಸವರಾಜ ರುದನೂರ, ಗಂಗಶೆಟ್ಟಿ ಖಾನಾಪೂರ, ಸಂತೋಷ ಮಂಗಳೂರೆ, ರಾಜಶೇಖರ ಮಂಗಲಗಿ, ರಾಮಚಂದ್ರ ಗಣಾಪೂರ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ಪ್ರಶಸ್ತಿ ವಿಜೇತರಾದ ಶ್ರೀಕಾಂತ ಬಿರಾದಾರ ದಂಪತಿಯನ್ನು ಗೌರವಿಸಲಾಯಿತು.

------

ಚಿತ್ರ 12ಬಿಡಿಆರ್63

ವಚನಾಮೃತ ಕನ್ನಡ ಸಂಘದಿಂದ ಆಯೋಜಿಸಲಾದ ಅಷ್ಟಾವರಣ ಹಾಗೂ ಪಂಚಾಚಾರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕೆಆರ್ ಇ ಸಂಸ್ಥೆಯ ಕಾರ್ಯದರ್ಶಿ ಮಡಿವಾಳಪ್ಪಾ ಗಂಗಶೆಟ್ಟಿ ಉದ್ಘಾಟಿಸಿದರು.

----

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ