ವಚನ ಸಾಹಿತ್ಯ ಮಾನವತೆ, ಪ್ರೀತಿ, ಅಂತಃಕರಣಗಳ ಪ್ರತೀಕ: ಡಾ.ಸಂಗಮೇಶ ಮಾಟೊಳ್ಳಿ

KannadaprabhaNewsNetwork |  
Published : Jan 19, 2026, 04:15 AM IST
ಪೊಟೋ ಜ.18ಎಂಡಿಎಲ್ 2ಎ, 2ಬಿ, 2ಸಿ, 2ಡಿ. ಮುಧೋಳ ತಾಲೂಕು ಮಟ್ಟದ 4ನೇ ವಚನ ಸಾಹಿತ್ಯ ಸಮ್ಮೇಳನ ಜರುಗಿತು. | Kannada Prabha

ಸಾರಾಂಶ

ಬಸವಾದಿ ಪ್ರಮಥರಿಂದ ಹಿಡಿದು ಸಾಮಾನ್ಯ ಶರಣವರೆಗಿನ ಅನುಭಾವಿಕ ನುಡಿಯೇ ವಚನ ಸಾಹಿತ್ಯ ಹನ್ನೆರಡನೇ ಶತಮಾನದಲ್ಲಾದ ವಚನ ಸಾಹಿತ್ಯ ಕ್ರಾಂತಿಯಲ್ಲಿ ಅವರಾಡಿದ ಪ್ರತಿಯೊಂದು ಮಾತುಗಳೂ ಇಂದಿನ ಕಾಲಕ್ಕೆ ಪ್ರಸ್ತುತವಾಗಿವೆ ಎಂದು ಹಿರಿಯ ಸಾಹಿತಿ, ನಿವೃತ್ತ ಪ್ರಾಚಾರ್ಯ ಡಾ.ಸಂಗಮೇಶ ಮಾಟೊಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಬಸವಾದಿ ಪ್ರಮಥರಿಂದ ಹಿಡಿದು ಸಾಮಾನ್ಯ ಶರಣವರೆಗಿನ ಅನುಭಾವಿಕ ನುಡಿಯೇ ವಚನ ಸಾಹಿತ್ಯ ಹನ್ನೆರಡನೇ ಶತಮಾನದಲ್ಲಾದ ವಚನ ಸಾಹಿತ್ಯ ಕ್ರಾಂತಿಯಲ್ಲಿ ಅವರಾಡಿದ ಪ್ರತಿಯೊಂದು ಮಾತುಗಳೂ ಇಂದಿನ ಕಾಲಕ್ಕೆ ಪ್ರಸ್ತುತವಾಗಿವೆ ಎಂದು ಹಿರಿಯ ಸಾಹಿತಿ, ನಿವೃತ್ತ ಪ್ರಾಚಾರ್ಯ ಡಾ.ಸಂಗಮೇಶ ಮಾಟೊಳ್ಳಿ ಹೇಳಿದರು.

ಮುಧೋಳ ರನ್ನ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮುಧೋಳ ತಾಲೂಕು ಮಟ್ಟದ 4ನೇ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಶರಣರ ಒಂದೊಂದು ಮಾತುಗಳು ಕೂಡ ಸಾಧಾರಣ ಮನುಷ್ಯನಲ್ಲಿ ಬೆಳಕು ತಂದು ಕೊಡುವಂಥವು. ಅವರ ವಚನಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ತಮ್ಮ ಜೀವನ ಹಾಲು-ಜೇನಿನಂತೆ ಮಧುರವಾಗುವುದು. ವಚನ ಸಾಹಿತ್ಯವೆಂದರೆ ಮಾನವತೆ, ಪ್ರೀತಿ, ಅಂತಃಕರಣ ಮನೋಭಾವಗಳ ಪ್ರತೀಕ. ಶರಣ ಸಾಹಿತ್ಯ, ವಿಶ್ವದ ಸಾಹಿತ್ಯ. ಶರಣರ ವಚನ ಬದುಕಿನ ಸಂವಿಧಾನ ಅದನ್ನು ತಿದ್ದುಪಡಿ ಮಾಡುವುದು ಯಾರಿಂದಲೂ ಸಾಧ್ಯವಿಲ್ಲವೆಂದರು.

ವಚನ ಸಾಹಿತ್ಯ ಇದೊಂದು ಅಪರೂಪದ ಜನಸಾಮಾನ್ಯರ ಸಾಹಿತ್ಯ, ಜನರಾಡುವ ಭಾಷೆಯಲ್ಲಿ ಎಲ್ಲರಿಗೂ ತಿಳಿಯುವಂತೆ ತಮ್ಮ ಅನುಭವಗಳನ್ನು ವಚನಕಾರರು ವಚನಗಳಲ್ಲಿ ಅಭಿವ್ಯಕ್ತಪಡಿಸಿದ್ದಾರೆ. ವಚನ ಸಾಹಿತ್ಯ, ರಾಜಾಶ್ರಯವಿಲ್ಲದ ಸಾಹಿತ್ಯ, ಶರಣ ತತ್ವ ಎಂದರೆ ಅದು ಕಾಯಕ ಮತ್ತು ದಾಸೋಹ, ನುಡಿದಂತೆ ನಡಿಯುವುದೇ ಕಾಯಕ, ಪ್ರತಿಯೊಬ್ಬ ವ್ಯಕ್ತಿ ಶರಣಕ ವಚನಗಳನ್ನು ಓದಿ, ಅರ್ಥೈಸಿಕೊಂಡು, ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.

ಸಾಹಿತಿ ಪ್ರಕಾಶ ಖಾಡೆ ಅವರು ವಿಭೂತಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ವಿಭೂತಿ ಸ್ಮರಣ ಸಂಚಿಕೆಯ ಕುರಿತು ಮಾತನಾಡಿದರು ವಿಮರ್ಶಕ ಕಿರಣ ಬಾಳಗೋಳ ಅವರು ಇಷ್ಟಲಿಂಗ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ, ಇಷ್ಟಲಿಂಗ ಸ್ಮರಣ ಸಂಚಿಕೆ ಕುರಿತು ಮಾತನಾಡಿದರು.

ಕ.ನ.ಸಾ.ಪ. ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ ಅಧ್ಯಕ್ಷತೆವಹಿಸಿ ಸಾಂದರ್ಭಿಕವಾಗಿ ಮಾತನಾಡಿದರು

ಲೋಕಾಪುರ ಹಿರೇಮಠದ ಡಾ.ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು, ಸಮ್ಮೇಳನದ ಸರ್ವಾಧ್ಯಕ್ಷ ಕಲ್ಲಪ್ಪ ಸಬರದ ಹಾಗೂ ಅವರ ಪತ್ನಿ ಮಹಾದೇವಿ ಸಬರದ, ನಿಕಟಪೂರ್ವ ಅಧ್ಯಕ್ಷ ಎಂ.ಜಿ. ದಾಸರ, ಕ.ವ.ಸಾ.ಪ. ವಿಭಾಗೀಯ ಸಂಚಾಲಕ ಮಹಾಂತೇಶ ಗಜೇಂದ್ರಗಡ, ಎಸ್.ಬಿ. ಕೃಷ್ಣಗೌಡರ, ಡಾ.ಕೆ.ಎಲ್.ಉದಪುಡಿ, ವಿ.ಎಚ್. ಮೂಲಿಮನಿ, ಚಂದ್ರಶೇಖರ ಪಮ್ಮಾರ, ವೀರೇಶ ಆಸಂಗಿ ಇತರರು ವೇದಿಕೆ ಮೇಲಿದ್ದರು.

ಚಂದ್ರಶೇಖರ ದೇಸಾಯಿ ಆಶಯ ನುಡಿ ಹೇಳಿದರು, ಕ.ವ.ಸಾ.ಪ. ತಾಲೂಕು ಅಧ್ಯಕ್ಷ ಡಾ.ಸಿದ್ದಣ್ಣ ಬಾಡಗಿ ಸ್ವಾಗತಿಸಿದರು, ಚಂದ್ರಶೇಖರ ರೂಗಿ ಮತ್ತು ರಾಣಿ ಬರಗಿ ನಿರೂಪಿಸಿದರು. ಪಿ.ಡಿ. ಬಂಡಿ ಮತ್ತು ಸಿ.ಎಂ. ಮಠಪತಿ ನಿರೂಪಿಸಿದರು. ಹಣಮಂತ ಸೋರಗಾಂವಿ ತಂಡದವರು ವಚನ ಗಾಯನ ಮಾಡಿದರು, ಕೆ.ಎಸ್. ಅರಕೇರಿ ವಂದಿಸಿದರು.

ಭಾನುವಾರ ಬೆಳಗ್ಗೆ ಬಸವೇಶ್ವರ ಸರ್ಕಲ್ ದಿಂದ ರನ್ನ ಭವನದ ವರೆಗೆ ವಚನ ಕಟ್ಟುಗಳೊಂದಿಗೆ ವಿವಿಧ ವಾಧ್ಯಮೇಳದೊಂದಿಗೆ ಶಿವಶರಣರ ಭಾವಚಿತ್ರ ಹಾಗೂ ಸಮ್ಮೆಳನ ಸರ್ವಾಧ್ಯಕ್ಷರ ಮೆರವಣಿಗೆ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದು ಧರ್ಮ ಒಗ್ಗೂಡಿಸಿ ಗಟ್ಟಿಯಾಗಿಸಬೇಕು
ಚಾಲುಕ್ಯ ಉತ್ಸವಕ್ಕೆ ಇಂದು ಸಿಎಂ ಚಾಲನೆ