ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕ್ರಾಂತಿ ವೇಳೆ ವಚನಗಳ ಸಂರಕ್ಷಣೆ
ಬಸವಣ್ಣನವರು ನಿರ್ಲಕ್ಷಿತ ಸಮುದಾಯಗಳನ್ನು ಅಪ್ಪಿಕೊಂಡರು ಮತ್ತು ಒಪ್ಪಿಕೊಂಡರು. ಈ ಸಮುದಾಯಗಳನ್ನು ಒಳಗೊಳ್ಳದೇ ಹೋಗಿದ್ದರೆ, ಅನುಭವ ಮಂಟಪಕ್ಕೆ ಬಿಟ್ಟುಕೊಳ್ಳದೇ ಇದ್ದಿದ್ದರೆ ಕಲ್ಯಾಣದ ಕ್ರಾಂತಿ ನಡೆಯುತ್ತಲೇ ಇರಲಿಲ್ಲ. ಕಲ್ಯಾಣದ ಕ್ರಾಂತಿಗೆ ಹರಳಯ್ಯ ಮತ್ತು ಮಧುವರಸರ ಮಕ್ಕಳ ಅಂತರ್ಜಾತಿ ವಿವಾಹ ಕಾರಣವಾಯಿತು. ಕಲ್ಯಾಣದ ಕ್ರಾಂತಿಯ ನಂತರ ಶಿವಶರಣರು ನಾನಾ ಕಡೆಗಳಿಗೆ ವಚನಗಳ ಕಟ್ಟುಗಳ ಗಂಟುಗಳೊಂದಿಗೆ ಹೊರಟು ಹೋದರು.ಅಂದು ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಉರಿಲಿಂಗಪೆದ್ದಿ ಮತ್ತು ಸಮಗಾರ ಹರಳಯ್ಯನವರಾದಿಯಾಗಿ ಅನೇಕ ಶಿವಶರಣರು ವಚನಗಳನ್ನು ಸಂರಕ್ಷಿಸದೇ ಹೋಗಿದ್ದರೆ ಸಮಾಜಕ್ಕೆ ಮತ್ತು ಕನ್ನಡ ಸಾಹಿತ್ಯಕ್ಕೆ ಬಹು ದೊಡ್ಡ ನಷ್ಟವಾಗುತ್ತಿತ್ತು. ಕಾಯಕ ಶರಣರು ನೀಡಿದ ಕೊಡುಗೆಗಳನ್ನು ಇಂದಿನ ಯುವಪೀಳಿಗೆ, ವಿದ್ಯಾರ್ಥಿಗಳು ಅರಿಯಬೇಕು ಮತ್ತು ಸ್ಮರಿಸಬೇಕು ಎಂದರು.ಕನ್ನಡ ಸಾಹಿತ್ಯಕ್ಕೆ ವಚನಗಳ ಕೊಡುಗೆ
ಉಪನ್ಯಾಸಕ ಎನ್.ಚಂದ್ರಶೇಖರ್ ಕಾಯಕ ಶರಣರ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ, ಎರಡು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಮಹತ್ವದ್ದಾಗಿದೆ. ಸಾಮಾಜಿಕ ಮತ್ತು ಧಾರ್ಮಿಕ ದೃಷ್ಟಿಯಿಂದ 12 ನೇ ಶತಮಾನ ಪರಿವರ್ತನೆಯ ಕಾಲ. ಜಾತಿಗಳನ್ನು ನಿರಾಕರಿಸಿದ ಸಂದರ್ಭವೂ ಹೌದು ಎಂದರು.ಕಾರ್ಯಕ್ರಮದಲ್ಲಿ ಕಾಯಕ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಯಕ ಶರಣರ ಜಯಂತಿ ಅಂಗವಾಗಿ ನಗರಸಭೆಯ ಪೌರಕಾರ್ಮಿಕ ನರಸಿಂಹಪ್ಪ ಮತ್ತು ದಲಿತ ಹೋರಾಟಗಾರ್ತಿ ಭಾಗ್ಯಮ್ಮ ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮನಿಷಾ, ಜಿಲ್ಲಾಡಳಿತ ಭವನದ ಸಿಬ್ಬಂದಿ ಹಾಗೂ ದಲಿತ ಸಂಘಟನೆಗಳ ಮುಖಂಡರಾದ ಸು.ದಾ. ವೆಂಕಟೇಶ್, ಜೆ.ಸಿ. ವೆಂಕಟ್ರೋಣಪ್ಪ, ಬಿ.ಎಚ್.ನರಸಿಂಹಯ್ಯ, ವೆಂಕಟರಮಣಪ್ಪ, ವೆಂಕಟ್ ಮತ್ತಿತರರು ಇದ್ದರು.