ಎಬಿವಿಪಿಗೆ ಒಲಿದ ವೈಕುಂಠ ಬಾಳಿಗ ಕಾಲೇಜ್ ವಿದ್ಯಾರ್ಥಿ ಕೌನ್ಸಿಲ್‌

KannadaprabhaNewsNetwork |  
Published : Sep 18, 2025, 01:11 AM IST
16ಬಾಳಿಗ | Kannada Prabha

ಸಾರಾಂಶ

ವೈಕುಂಠ ಬಾಳಿಗಾ ಕಾನೂನು ಕಾಲೇಜಿನ 5 ವರ್ಷಗಳ ಕಾನೂನು ಪದವಿ ವಿಭಾಗದ ವಿದ್ಯಾರ್ಥಿ ಮಂಡಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 14 ಸ್ಥಾನಗಳ ಪೈಕಿ 13 ರಲ್ಲಿ ಎಬಿವಿಪಿ ಬೆಂಬಲಿತ ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ.

ಉಡುಪಿ: ಇಲ್ಲಿನ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ 5 ವರ್ಷಗಳ ಕಾನೂನು ಪದವಿ ವಿಭಾಗದ ವಿದ್ಯಾರ್ಥಿ ಮಂಡಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 14 ಸ್ಥಾನಗಳ ಪೈಕಿ 13 ರಲ್ಲಿ ಎಬಿವಿಪಿ ಬೆಂಬಲಿತ ಅಭ್ಯರ್ಥಿಗಳು ಜಯಶೀಲರಾಗಿದ್ದು, ಅಧ್ಯಕ್ಷರಾಗಿ ಶ್ರೀವತ್ಸ ಗಾಂವ್ಸಕರ್ 8 ಮತಗಳ ಅಂತರಗಳಿಂದ ಗೆಲವು ಸಾಧಿಸಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನ್, ಕ್ರೀಡಾ ಕಾರ್ಯದರ್ಶಿ ಕಾರ್ತಿಕ್ ಹೆಬ್ರಿ (ಅವಿರೋಧ), ಕಾರ್ಯದರ್ಶಿ ಸ್ವಸ್ತಿಕ್, ನೇಚರ್ಸ್ ಕ್ಲಬ್ ಕಾರ್ಯದರ್ಶಿ ಸಂಹಿತಾ ಕೆ. ಶೃಂಗೇರಿ, ರೆಡ್‌ಕ್ರಾಸ್ ಕಾರ್ಯದರ್ಶಿ ನವೀನ್ ಭಟ್ಕಳ್, ಡಿಬೇಟ್ ಮತ್ತು ಕ್ವಿಝ್ ಕಾರ್ಯದರ್ಶಿ ಪೂಜಿತ ಹೆಗ್ಗಡೆ, ಚುನಾವಣಾ ಸಾಕ್ಷರತಾ ಕ್ಲಬ್‌ನ ಕಾರ್ಯದರ್ಶಿ ಆ್ಯನ್ಸಿಟ್, ಪ್ಲೇಸ್‌ಮೆಂಟ್ ಸೆಲ್‌‌ಗೆ ವಿನಯಾ, ಮಾನವಹಕ್ಕುಗಳ ಕ್ಲಬ್‌ಗೆ ನಂದನ್, ಎನ್‌ಎಸ್‌ಎಸ್‌ ಕಾರ್ಯದರ್ಶಿ ಸಂದೇಶ್ ಹಾಗು ರಕ್ಷಿತಾ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದೇವಗಂಗಾ, ಮೂಟ್ ಕೋರ್ಟ್ ಸೊಸೈಟಿ ಕಾರ್ಯದರ್ಶಿಯಾಗಿ ಅಪರ್ಣಾ ಲಕ್ಷ್ಮೀ ಶ್ಯಾನುಭಾಗ್ ಆಯ್ಕೆಗೊಂಡಿದ್ದಾರೆ. ಇದೇ ಕಾಲೇಜಿನ 3 ವರ್ಷದ ಪದವಿ ವಿಭಾಗದ ವಿದ್ಯಾರ್ಥಿ ಮಂಡಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 14 ಸ್ಥಾನಗಳನ್ನು ಸಮಾನ ಮನಸ್ಕ ವಿದ್ಯಾರ್ಥಿಗಳು ಜಯಗಳಿಸಿದ್ದು, ಶಮಂತ್ ಹೆಬ್ರಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ಪ್ರಧಾನ ಕಾರ್ಯದರ್ಶಿ ಶ್ರೀಲಕ್ಷ್ಮಿ, ಎನ್‌ಎಸ್‌ಎಸ್‌ ಕಾರ್ಯದರ್ಶಿಗಳು ಸಮೀರ್ ತೀರ್ಥಹಳ್ಳಿ ಹಾಗೂ ಅಂಕಿತಾ, ಕ್ರೀಡಾ ಕಾರ್ಯದರ್ಶಿ ನಿಶ್ಚಿತ, ನೇಚರ್ಸ್ ಕ್ಲಬ್ ಕಾರ್ಯದರ್ಶಿ ಧ್ವಣಿ ಶೆಟ್ಟಿ, ರೆಡ್‌ಕ್ರಾಸ್ ಕಾರ್ಯದರ್ಶ ಶ್ರನ್ಯಾ, ಡಿಬೇಟ್ ಮತ್ತು ಕ್ವಿಝ್ ಕಾರ್ಯದರ್ಶಿ ಮೇಘನಾ, ಚುನಾವಣಾ ಸಾಕ್ಷರತಾ ಕ್ಲಬ್ ಕಾರ್ಯದರ್ಶಿ ಅಕ್ಷತಾ, ಪ್ಲೇಸ್‌ಮೆಂಟ್ ಸೆಲ್‌ಗೆ ಡಿಯೋನ್, ಮಾನವ ಹಕ್ಕುಗಳ ಕ್ಲಬ್‌ಗೆ ಕಾವ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮೇದಾ, ಮೂಟ್ ಕೋರ್ಟ್ ಸೊಸೈಟಿ ಗೆ ಸಾಯಿರಮ್ಯ, ಲೀಗಲ್ ಸರ್ವಿಸ್ ಕ್ಲಿನಿಕ್‌ಗೆ ದಿಶಾ ಮತ್ತು ಪಬ್ಲಿಕೇಶನ್ ಕಮಿಟಿ ಕಾರ್ಯದರ್ಶಿಯಾಗಿ ವೈಷ್ಣವಿ ಆಯ್ಕೆಯಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರವಾರದಲ್ಲಿ ನಾಳೆ ರಾಷ್ಟ್ರಪತಿ ಮುರ್ಮು ಸಬ್‌ಮರೀನ್‌ ಯಾನ
ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ