ರಂಗಕಲೆಯಲ್ಲಿ ಅಪಾರ ಜ್ಞಾನ ಹೊಂದಿದವರು ವೈಕುಂಠ ಹೆಬ್ಬಾರರು: ಡಾ.ರಾಘವೇಂದ್ರ ಹೆಬ್ಬಾರ್

KannadaprabhaNewsNetwork |  
Published : Jan 14, 2025, 01:00 AM IST
ಶ್ರೀ ವೈಕುಂಠ ಪ್ರಶಸ್ತಿಯನ್ನು ಸಂಗೀತದ ಪರಿವ್ರಾಜಕರಾದ ಚನ್ನಪ್ಪ ಹೊಸರಿಟ್ಟಿ, ದುರ್ಗೇಶ ಮುದ್ದಿನಕೊಪ್ಪ, ಶಂಕರ ಕುಮಾರ ಕಟ್ಟಿಮನೆಯವರಿಗೆ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಯಕ್ಷಗಾನ ಕಲಾರಂಗದ ಸದಾನಂದ ರಂಗ ಮಂಟಪದಲ್ಲಿ ರಂಗಭೂಮಿ ಕಲಾವಿದರು, ನಿರ್ದೇಶಕರು, ಯಕ್ಷಗಾನ ಕಲಾಕೇಂದ್ರದ ನಿಕಟಪೂರ್ವ ಅಧ್ಯಕ್ಷ ದಿ.ವೈಕುಂಠ ಹೆಬ್ಬಾರ್ ಸಂಸ್ಮರಣಾ ಕಾರ್ಯಕ್ರಮ ಆಯೋಜಿಸಿತು.

ಕನ್ನಡಪ್ರಭ ವಾರ್ತೆ ಹಂಗಾರಕಟ್ಟೆ

ವಿದ್ಯಾರ್ಥಿ ಜೀವನದಲ್ಲೇ ಸಾಂಸ್ಕೃತಿಕ ವಿಚಾರದಲ್ಲಿ ಅಪಾರವಾಗಿ ಅನುಭವ ಹೊಂದಿರುವವರು ಶ್ರೀ ವೈಕುಂಠ ಹೆಬ್ಬಾರರು. ನಾಟಕ, ಯಕ್ಷಗಾನ, ಸಂಗೀತ ಮುಂತಾದ ಕಲೆಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದವರು. ಎಲೆ ಮರೆಯ ಕಾಯಿಯಂತೆ ಹಿಂದೆ ನಿಂತು ಶ್ರೇಷ್ಠ ಕಲಾವಿದರನ್ನು ಕುಂದಾಪುರಕ್ಕೆ ಕರೆಸಿ ಸಂಗೀತದ ಔತಣವನ್ನು ಆಸಕ್ತರಿಗೆ ಉಣಬಡಿಸಿದವರು ಎಂದು ಕುಂದಾಪುರದ ಹಿರಿಯ ವೈದ್ಯ ಡಾ.ರಾಘವೇಂದ್ರ ಹೆಬ್ಬಾರ್ ಹೇಳಿದರು.ಅವರು ಇತ್ತೀಚಿಗೆ ಯಕ್ಷಗಾನ ಕಲಾರಂಗದ ಸದಾನಂದ ರಂಗ ಮಂಟಪದಲ್ಲಿ ಆಯೋಜಿಸಿದ್ದ ರಂಗಭೂಮಿ ಕಲಾವಿದರು, ನಿರ್ದೇಶಕರು, ಯಕ್ಷಗಾನ ಕಲಾಕೇಂದ್ರದ ನಿಕಟಪೂರ್ವ ಅಧ್ಯಕ್ಷ ದಿ.ವೈಕುಂಠ ಹೆಬ್ಬಾರ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀ ವೈಕುಂಠ ಪ್ರಶಸ್ತಿಯನ್ನು ಸಂಗೀತದ ಪರಿವ್ರಾಜಕರಾದ ಚನ್ನಪ್ಪ ಹೊಸರಿಟ್ಟಿ, ದುರ್ಗೇಶ ಮುದ್ದಿನಕೊಪ್ಪ, ಶಂಕರ ಕುಮಾರ ಕಟ್ಟಿಮನೆಯವರಿಗೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಒಎನ್‌ಜಿಸಿಯ ನಿವೃತ್ತ ಅಧಿಕಾರಿ ನಾರಾಯಣ ಆಚಾರ್, ಸಾಲಿಗ್ರಾಮ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಅನಂತ ಪದ್ಮನಾಭ ಐತಾಳ, ಹೆಬ್ಬಾರ್ ಕುಟುಂಬದ ನರಸಿಂಹ ಹೆಬ್ಬಾರ್, ಡಾ.ಆದರ್ಶ ಹೆಬ್ಬಾರ್ ಇದ್ದರು.

ಡಾ.ಆದರ್ಶ ಹೆಬ್ಬಾರ್ ಸ್ವಾಗತಿಸಿದರು. ರಾಮಚಂದ್ರ ಐತಾಳ ಕಾರ್ಯಕ್ರಮ ನಿರ್ವಹಿಸಿದರು. ಮೇಘಶ್ಯಾಮ ಹೆಬ್ಬಾರ ಕೃತಜ್ಞತೆ ಸಲ್ಲಿಸಿದರು. ನಂತರ ಕೃಷ್ಣಾರ್ಜುನ ಕಾಳಗ ತಾಳಮದ್ದಲೆ ಪ್ರದರ್ಶಿಸಲ್ಪಟ್ಟಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ