ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈಲ್ವೆ ಓವರ್‌ಬ್ರಿಡ್ಜ್ ಸಮೀಪದ ಮರಾಠಾ ಮಂದಿರ ಕಾರ್ಯಾಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಸಮ್ಮೇಳನ ನಡೆಯಲಿದೆ. ವೈಶ್ಯ ಸಮಾಜದ ಏಕತೆ, ಪ್ರಗತಿ ಹಾಗೂ ಗೌರವ ಬಲಪಡಿಸುವ ಆಶಯದೊಂದಿಗೆ ನಡೆಯುವ ಸಮಾವೇಶದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಸಮಾಜದ ಎಲ್ಲ ಉಪಜಾತಿಗಳನ್ನು ಒಂದೇ ವೇದಿಕೆಗೆ ತಂದು ಪರಸ್ಪರ ಸಹಕಾರ ಹೆಚ್ಚಿಸುವುದು ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ. ವೈಶ್ಯ ಸಮಾಜದ ಪರಂಪರೆ ಮತ್ತು ಸಂಸ್ಕೃತಿ ಸಂರಕ್ಷಣೆ, ಯುವಜನರಲ್ಲಿ ಉದ್ಯಮಶೀಲತೆ ಉತ್ತೇಜನ, ಉದ್ಯಮಿಗಳಿಗೆ ಸಂಪರ್ಕ ಹಾಗೂ ಮಾರ್ಗದರ್ಶನ ಒದಗಿಸುವ ಕುರಿತು ಚರ್ಚಿಸಲಾಗುವುದು ಎಂದರು.ಶಿಕ್ಷಣ, ಆರೋಗ್ಯ ಸೇರಿದಂತೆ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸುವುದು, ಅಗತ್ಯವಿರುವವರಿಗೆ ನೆರವು ನೀಡುವುದು ಹಾಗೂ ಸಮಾಜದ ಸಮಸ್ಯೆಗಳಿಗೆ ಸಾಮೂಹಿಕವಾಗಿ ಪರಿಹಾರ ಕಂಡುಕೊಳ್ಳುವ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.ರಾಷ್ಟ್ರೀಯ ಅಧ್ಯಕ್ಷ ಶತ್ರುಘ್ನ ಶಹ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಅಗ್ರವಾಲ್, ಸಂರಕ್ಷಕ ವಿಜಯಕುಮಾರ ಗರ್ಗ್ (ನಿವೃತ್ತ ಐಪಿಎಸ್), ಕೋಶಾಧ್ಯಕ್ಷ ಜಯ ಕಿಶೋರ್ ಪ್ರಸಾದ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ. ವೈಶ್ಯವಾಣಿ, ಕನ್ನಡ ವೈಶ್ಯ, ಮಾಹೇಶ್ವರಿ, ಗುಜರಾತಿ ವೈಶ್ಯ, ಅಗ್ರವಾಲ್, ಆರ್ಯವೈಶ್ಯ ಹಾಗೂ ಸಿಂಧಿ ಸಮಾಜಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನಕ್ಕೆ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಂಘಟಕರು ಮನವಿ ಮಾಡಿದರು.ವೈಶ್ಯ ಸಮಾಜದ ಎಲ್ಲ ಉಪಜಾತಿಗಳನ್ನು ಒಂದೇ ವೇದಿಕೆಯಡಿ ತಂದು, ಪರಸ್ಪರ ಹೊಂದಾಣಿಕೆ ಮತ್ತು ಸಹಕಾರ ಹೆಚ್ಚಿಸುವುದು ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ. ವಿವಿಧ ಪ್ರದೇಶಗಳಲ್ಲಿ ಹರಡಿಕೊಂಡಿರುವ ಸಮುದಾಯದ ನಡುವಿನ ಅಂತರವನ್ನು ಕಡಿಮೆ ಮಾಡಿ, ಸಮಾಜದ ಭವಿಷ್ಯದ ಅಭಿವೃದ್ಧಿಗೆ ಸಾಮೂಹಿಕವಾಗಿ ಕಾರ್ಯಯೋಜನೆ ರೂಪಿಸುವ ಕುರಿತು ಚರ್ಚಿಸಲಾಗುವುದು ಎಂದರು.ವೈಶ್ಯ ಸಮಾಜದ ಸಾಮಾನ್ಯ ಪರಂಪರೆ ಹಾಗೂ ಸಂಸ್ಕೃತಿಯನ್ನು ಸಂರಕ್ಷಿಸಿ, ಅದರ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು. ಸಮಾಜದ ಯುವಜನರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಸಮ್ಮೇಳನದ ಮತ್ತೊಂದು ಪ್ರಮುಖ ಆಶಯವಾಗಿದೆ ಎಂದರು.ಯುವ ಉದ್ಯಮಿಗಳಿಗೆ ಅಗತ್ಯ ಮಾರ್ಗದರ್ಶನ, ಸಂಪರ್ಕ ಹಾಗೂ ಸಹಕಾರ ಒದಗಿಸುವುದು, ಪರಸ್ಪರ ಸಹಭಾಗಿತ್ವದ ಮೂಲಕ ಬಲಿಷ್ಠ ಉದ್ಯಮ ಜಾಲ ನಿರ್ಮಿಸುವುದು ಮತ್ತು ಹೊಸ ಉದ್ಯಮ ಆರಂಭಿಸಲು ಹಾಗೂ ಈಗಿರುವ ಉದ್ಯಮ ವಿಸ್ತರಿಸಲು ಪೂರಕ ವಾತಾವರಣ ಕಲ್ಪಿಸುವ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.ವೈಶ್ಯ ಸಮಾಜದ ಏಕತೆ, ಪ್ರಗತಿ ಮತ್ತು ಗೌರವ ಎಂಬ ಆಶಯದೊಂದಿಗೆ ನಡೆಯಲಿರುವ ಸಮ್ಮೇಳನವು ವಿವಿಧ ಉಪಜಾತಿಗಳು ಹಾಗೂ ಸಂಘಟನೆಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನವಾಗಿದೆ. ಸಮಾಜದ ಎಲ್ಲ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನ ಯಶಸ್ವಿಗೊಳಿಸುವಂತೆ ಸಂಘಟಕರು ಮನವಿ ಮಾಡಿದರು.ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ವೈಶ್ಯ ಗರಿಮಾ ಮಂಚ್ ಗೌರವ ಕಾರ್ಯದರ್ಶಿ ದತ್ತಾ ಕಣಬರ್ಗಿ, ಬೆಳಗಾವಿ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಮುಂದಡಾ, ಗೌರವ ಕಾರ್ಯದರ್ಶಿ ರಮೇಶ ಲದ್ದಡ್, ಡಾ.ಶ್ರೀಧರ ಶೆಟ್ಟಿ, ಸಂತೋಷ ವಡವಾ, ಪ್ರಮೋದ್ ಅಗರ್ವಾಲ್ ಸೇರಿದಂತೆ ವಿವಿಧ ಸಮಾಜಗಳ ಪ್ರಮುಖರು ಉಪಸ್ಥಿತರಿದ್ದರು.