ವೈಭವದಿಂದ ನಡೆದ ವಳಗೆರೆಹಳ್ಳಿ ಶ್ರೀಶನೈಶ್ವರ ಸ್ವಾಮಿ ಬ್ರಹ್ಮರಥೋತ್ಸವ

KannadaprabhaNewsNetwork |  
Published : Mar 17, 2025, 12:30 AM IST
16ಕೆಎಂಎನ್ ಡಿ12 | Kannada Prabha

ಸಾರಾಂಶ

ದೇಗುಲದಲ್ಲಿ ಶುಕ್ರವಾರ ಪುಣ್ಯಾಹ ಗಣಪತಿ ಪೂಜೆ, ಕಲಸರಾಧನೆ, ನವಗ್ರಹ ಹೋಮ ಮಹಾ ಮಂಗಳಾರತಿ ಜರುಗಿತು. ಶನಿವಾರ ಸ್ವಾಮಿರವರಿಗೆ ಅಭಿಷೇಕ ಬೆಳ್ಳಿ ಕವಚದಾರಣೆ ಮತ್ತು ಸಾಯಂಕಾಲ ಗ್ರಾಮದ ಹೆಂಗೆಳೆಯರಿಂದ ಮೀಸಲು ನೀರು ತರುವುದು ರಾತ್ರಿ ಗಿಂಡಿ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ವಳಗೆರೆಹಳ್ಳಿ ಶ್ರೀಶನೈಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ವೈಭವದಿಂದ ಜರುಗಿತು.

ದೇಗುಲದಲ್ಲಿ ಶುಕ್ರವಾರ ಪುಣ್ಯಾಹ ಗಣಪತಿ ಪೂಜೆ, ಕಲಸರಾಧನೆ, ನವಗ್ರಹ ಹೋಮ ಮಹಾ ಮಂಗಳಾರತಿ ಜರುಗಿತು. ಶನಿವಾರ ಸ್ವಾಮಿರವರಿಗೆ ಅಭಿಷೇಕ ಬೆಳ್ಳಿ ಕವಚದಾರಣೆ ಮತ್ತು ಸಾಯಂಕಾಲ ಗ್ರಾಮದ ಹೆಂಗೆಳೆಯರಿಂದ ಮೀಸಲು ನೀರು ತರುವುದು ರಾತ್ರಿ ಗಿಂಡಿ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿದ್ಯುತ್ ದೀಪಾಲಂಕಾರಗಳಿಂದ ಅಲಂಕೃತಗೊಂಡ ಗ್ರಾಮದ ಬೀದಿಗಳಲ್ಲಿ ತಳಿರು ತೋರಣಗಳು ರಾರಾಜಿಸುತ್ತಿದ್ದವು. ಪ್ರಮುಖ ಬೀದಿಗಳಲ್ಲಿ ಸ್ವಾಮಿಯವರ ಬೆಳ್ಳಿ ರಥದ ಪಲ್ಲಕ್ಕಿ ಉತ್ಸವವು. ಮನೆಗಳಲ್ಲಿ ಪೂಜೆ ಸಲ್ಲಿಸಿದರು.

ಭಾನುವಾರ ಬೆಳಗ್ಗೆ ಬ್ರಹ್ಮ ರಥೋತ್ಸವ ಪೂಜಾ ಕುಣಿತ ವೀರಗಾಸೆ ಮತ್ತು ಜಾನಪದ ಕಲಾ ತಂಡಗಳ ಪ್ರದರ್ಶನ ಜರುಗಿತು.

ನಂತರ ನೆರೆದಿದ್ದ ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಅಕ್ಕಪಕ್ಕದ ಗ್ರಾಮಸ್ಥರು ಸೇರಿದಂತೆ ಸಾವಿರಾರು ಭಕ್ತರು ಸ್ವಾಮಿ ದರ್ಶನ ಪಡೆದು ಪುನೀತರಾದರು.

ಈ ವೇಳೆ ಪ್ರಧಾನ ಅರ್ಚಕ ವಿ.ಎಂ.ಶ್ರೀನಿವಾಸು ಪೂಜಾ ವಿಧಿ ವಿಧಾನ ಕೈಂಕರ್ಯಗಳನ್ನು ನೆರವೇರಿಸಿದರು.

ಶ್ರೀಪಟ್ಟಲದಮ್ಮನ ಈರಹಬ್ಬ, ಪೂಜಾ ಮಹೋತ್ಸವ

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸಮೀಪದ ತೊರೆಬೊಮ್ಮನಹಳ್ಳಿ ಗ್ರಾಮದೇವತೆ ಶ್ರೀಪಟ್ಟಲದಮ್ಮನ ಈರಹಬ್ಬ(ಪರ) ಹಾಗೂ ಪೂಜಾ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.

ಮಠದದೊಡ್ಡಿ ಗ್ರಾಮದ ಬಳಿಯ ಶ್ರೀಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮ ದೇವತೆಗಳಾದ ಶ್ರೀಪಟ್ಟಲದಮ್ಮ ಶ್ರೀಮಾರಮ್ಮ, ಶ್ರೀ ಲಕ್ಷ್ಮಿದೇವಿ ಹಾಗೂ ಹರಿಗೆಗಳ ಪೂಜಾ ಕೈಂಕರ್ಯ, ಹೂ, ಹೊಂಬಾಳೆ ಮೂಲಕ ತೊರೆಬೊಮ್ಮನಹಳ್ಳಿ ಗ್ರಾಮಕ್ಕೆ ಆಗಮಿಸಿ ಹರಿಗೆ ದೇವರ ಉತ್ಸವ ನಡೆಸಿ ಗ್ರಾಮ ದೇವತೆಗೆ ಮಹಾ ಮಂಗಳಾರತಿ ನಡೆಸಿದರು.

ಶನಿವಾರ- ಭಾನುವಾರ ಗ್ರಾಮ ದೇವತೆ ಶ್ರೀಪಟ್ಟಲದಮ್ಮ ಶ್ರೀಮಾರಮ್ಮ ಶ್ರೀಲಕ್ಷ್ಮಿದೇವಿ ದೇವಸ್ಥಾನದಲ್ಲಿ ಮಹಾ ಮಂಗಳಾರತಿ ನಡೆಸಿ ಈರಹಬ್ಬ (ಪರ)ಕ್ಕೆ ಚಾಲನೆ ನೀಡಿದರು. ಈ ವೇಳೆ ಸಾವಿರಾರು ಮಂದಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ಗ್ರಾಮ ದೇವತೆ ಶ್ರೀಪಟ್ಟಲದಮ್ಮ ದೇವಿ ಕೃಪೆಗೆ ಭಾಜನರಾದರು .

ಮಧ್ಯಾಹ್ನ ವೇಳೆಗೆ ದೇವಾಲಯದ ಆವರಣದಲ್ಲಿ ಅನ್ನಸಂತರ್ಪಣೆ (ಮಾಂಸಾಹಾರಿ) ನಡೆಸಿದರು. ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ