ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜೆ.ಎನ್. ಸುಬ್ರಹ್ಮಣ್ಯ ಮಾತನಾಡಿ, ಐದು ದಿನಗಳ ನಿರಂತರ ಮಧ್ಯಸ್ಥಗಾರರ ತರಬೇತಿ ಯಶಸ್ವಿಗೊಂಡಿದ್ದು, ಕಕ್ಷಿದಾರರು ಮಧ್ಯಸ್ಥಿಕೆ ಮತ್ತು ಮಧ್ಯಸ್ಥಿಕೆ ಕೇಂದ್ರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಮಧ್ಯಸ್ಥಿಕೆಯಲ್ಲಿ ತಲುಪುವ ಇತ್ಯರ್ಥವು ಕಾನೂನಿನಲ್ಲಿ ಮಾನ್ಯವಾಗಿರುತ್ತದೆ ಮತ್ತು ಬದ್ಧವಾಗಿರುತ್ತದೆ. ಕೌಟುಂಬಿಕ ಕಲಹ, ಸಿವಿಲ್ ವ್ಯಾಜ್ಯರ ಚೆಕ್ ಬೌನ್ಸ್ ಪ್ರಕರಣ ಸೇರಿದಂತೆ ಇತರೆ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು ಎಂದರು,
ಮಧ್ಯಸ್ಥಿಕೆ ತರಬೇತುದಾರರಾದ ಗೀತಾದೇವಿ ಮಾತನಾಡಿ, ಸುಮಾರು ಐವತ್ತು ನೂತನ ಮಧ್ಯಸ್ಥ ಗಾರರು ಮಂಡ್ಯ, ರಾಮನಗರ ಮತ್ತು ಹಾಸನ ಜಿಲ್ಲೆಯಿಂದ ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ಎಲ್ಲರೂ ಉತ್ಸಾಹದಿಂದ ಭಾಗವಹಿಸಿದ್ದರು. ನಿರಂತರವಾಗಿ ಮಧ್ಯಸ್ಥಿಕೆ ಸೇವೆಯನ್ನು ಮುಂದುವರಿಸುವಂತೆ ಮನವಿ ಮಾಡಿದರು.ಹಿರಿಯ ವಕೀಲ ಎಂ.ಗುರುಪ್ರಸಾದ್ ಮಾತನಾಡಿ, ಐದು ದಿವಸ 40 ಗಂಟೆಗಳ ಕಾಲ ನಿರಂತರವಾಗಿ ಪಕ್ಷಗಾರರ ಸಮಸ್ಯೆ ಮತ್ತು ವಾಸ್ತವಾಂಶವನ್ನು ಅರಿಯುವುದು. ಅವರಿಗೆ ಅನುಕೂಲವಾಗುವಂತೆ ವ್ಯಾಜ್ಯಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವುದು. ಯಾರ ಮನಸ್ಸಿಗೂ ನೋವಾಗದ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸುವುದು ಮಧ್ಯಸ್ಥಗಾರರ ಉದ್ದೇಶವಾಗಿದೆ. ಉತ್ತಮ ಮಧ್ಯಸ್ಥ ಗಾರರು ನಮ್ಮಗಳಿಗೆ ಮಧ್ಯಸ್ಥಿಕೆಯ ಅರಿವು ಮತ್ತು ತರಬೇತಿ ನೀಡಿದ್ದು ಇದು ಅತ್ಯಂತ ಸಹಕಾರಿಯಾಗಿದೆ ಎಂದರು ಎಲ್ಲಾ ವಕೀಲರು ತರಬೇತಿಯಲ್ಲಿ ಭಾಗವಹಿಸಿ ಸಹಕರಿಸಿದ್ದಾರೆ ಎಂದರು.