ವಾಲ್ಮೀಕಿ ಜಗತ್ತಿನ ಮೊದಲ ಆದಿಕವಿ

KannadaprabhaNewsNetwork |  
Published : Oct 09, 2025, 02:00 AM IST
೮ಶಿರಾ೩: ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಮಾದೇನಹಳ್ಳಿಯಲ್ಲಿ ನಡೆದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಜಗತ್ತಿನ ನಾನಾ ದೇಶಗಳು ಉಗಮವಾಗುವುದಕ್ಕಿಂತ ಮುಂಚಿತವಾಗಿ ಭಾರತದಲ್ಲಿ ರಾಮಾಯಣ ಮಹಾಭಾರತದಂತಹ ಮೇರು ಗ್ರಂಥಗಳು ರಚನೆಯಾಗಿದ್ದವು ಎಂದು ಶ್ರೀ ಮುರಳಿ ಮೋಹನ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಶ್ರೀರಂಗಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿರಾ

ಜಗತ್ತಿನ ನಾನಾ ದೇಶಗಳು ಉಗಮವಾಗುವುದಕ್ಕಿಂತ ಮುಂಚಿತವಾಗಿ ಭಾರತದಲ್ಲಿ ರಾಮಾಯಣ ಮಹಾಭಾರತದಂತಹ ಮೇರು ಗ್ರಂಥಗಳು ರಚನೆಯಾಗಿದ್ದವು ಎಂದು ಶ್ರೀ ಮುರಳಿ ಮೋಹನ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಶ್ರೀರಂಗಪ್ಪ ತಿಳಿಸಿದರು.

ಅವರು ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಮಾದೇನಹಳ್ಳಿಯಲ್ಲಿ ನಡೆದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿ ಅಣ್ಣ ತಮ್ಮಂದಿರು ಹೇಗೆ ಇರಬೇಕು ಎಂಬುದಕ್ಕೆ ರಾಮ ಲಕ್ಷ್ಮಣರು ಸಾಕ್ಷಿ. ಆದರೆ ಯಾವ ರೀತಿ ಇರಬಾರದು ಎಂಬುದಕ್ಕೆ ವಾಲಿ-ಸುಗ್ರೀವರು ಸಾಕ್ಷಿಯಾದರು. ಧರ್ಮದ ಪರ ನಿಂತರೆ ಜಯ ಕಟ್ಟಿಟ್ಟ ಬುತ್ತಿ ಅಧರ್ಮ ಮಾಡುತ್ತಿರುವವರು ತಮ್ಮ ಸಹೋದರನೇ ಆದರೂ ಅದನ್ನು ವಿರೋಧಿಸುವುದು ನಮ್ಮ ಕರ್ತವ್ಯ ಎಂದು ಸಾರಿದವನು ವಿಭೀಷಣ. ರಾಮಾಯಣ ಮಹಾಕಾವ್ಯ ನಮಗೆ ಬದುಕಿನ ನೀತಿ ಪಾಠವನ್ನು ಹೇಳಿಕೊಡುತ್ತದೆ ಇಂತಹ ಗ್ರಂಥವನ್ನು ಮಹಾಕಾವ್ಯವನ್ನು ಸೊಗಸಾಗಿ ಚಿತ್ರಿಸಿಕೊಟ್ಟ ಮಹರ್ಷಿ ವಾಲ್ಮೀಕಿ ನಮ್ಮೆಲ್ಲರಿಗೂ ಆದರ್ಶಪ್ರಾಯ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರುಗಳಾದ ಗಿರೀಶ್, ತಾಯಿಮುದ್ದಮ್ಮ ರಂಗದಾಮಯ್ಯ,ಗ್ರಾ ಪಂ ಸದಸ್ಯ ರತ್ನಮ್ಮ ಲೋಕೇಶ್, ಮಂಜುನಾಥ್, ಗಿರೀಶ್, ತಿಮ್ಮರಾಜು, ಕುಮಾರ್, ಗುರುರಾಜ್,ಶಶಿ, ಎಂಟಿ ಗಿರೀಶ್, ರಂಗನಾಥ್,ರಘು, ವಾಲ್ಮೀಕಿ ಯುವಕ ಸಂಘದ ಸದಸ್ಯರು ಪದಾಧಿಕಾರಿಗಳು ಮಾದೇನಹಳ್ಳಿ ಹಾಗೂ ಅಕ್ಕ ಪಕ್ಕದ ಗ್ರಾಮಗಳ ಗ್ರಾಮಸ್ಥರು ಸಾರ್ವಜನಿಕರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಯೂಟದಲ್ಲಿ ಶುಚಿತ್ವಕ್ಕೆ ಆದ್ಯತೆ ಇರಲಿ: ಡಾ. ಈಶ್ವರ ಉಳ್ಳಾಗಡ್ಡಿ
ಶಿರಸಂಗಿ ಲಿಂಗರಾಜರ ಜೀವನ ಮಹಾಕಾವ್ಯಕ್ಕಿಂತಲೂ ಮಿಗಿಲು: ಡಾ. ವಿ.ಕೆ. ದ್ಯಾಮನಗೌಡ್ರ