-ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷ ಕೃಷ್ಣಪ್ಪಗೌಡ ಆಲ್ದಾಳ ಆಕ್ರೋಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಪರಿಶಿಷ್ಟ ಪಂಗಡದ ಜನಾಂಗಗಳಿಗೆ ಯಾವುದೇ ಅಭಿವೃದ್ಧಿ ಯೋಜನೆಗಳು ಸಮರ್ಪಕವಾಗಿ ಮುಟ್ಟುತ್ತಿಲ್ಲ ಎಂದು ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷ ಕೃಷ್ಣಪ್ಪಗೌಡ ಆಲ್ದಾಳ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸಮಾಜಕ್ಕೆ ಅನುದಾನ ನೀಡದಿರುವ ಕೊರತೆಯಿಂದ ಈ ಸಮಾಜಗಳು ತೀರಾ ಹಿಂದುಳಿಯಲು ಕಾರಣವಾಗಿದೆ. ಅಲ್ಲದೆ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರಗಳು ವಿತರಣೆಯೂ ಹೆಚ್ಚಾಗುತ್ತಿವೆ. ಕಳೆದ 3 ದಶಕಗಳಿಂದ ಹೋರಾಟ ಮಾಡಿದರು ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿವೆ ಎಂದು ಆರೋಪಿಸಿದರು.
ವಾಲ್ಮೀಕಿ ನಾಯಕ ಸಮಾಜದ ಉತ್ತರ ಕರ್ನಾಟಕ ಅಧ್ಯಕ್ಷ ಮಾರೆಪ್ಪ ನಾಯಕ ಮಗ್ದಂಪೂರ ಮಾತನಾಡಿ, ಯಾದಗಿರಿ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಭಗವಾನ ಶ್ರೀಮಹರ್ಷಿ ವಾಲ್ಮೀಕಿ ಪುತ್ತಳಿ ಸ್ಥಾಪನೆ ಸಂಬಂಧ ಸ್ಥಳದ ದಾಖಲೆಗಳ ಅರ್ಜಿಯನ್ನು ಇ-ಖಾತೆ ನೀಡುವಲ್ಲಿ ವಿಳಂಬ, ಪರಿಶಿಷ್ಟ ಪಂಗಡದ ಇಲಾಖೆಗೆ ಸಚಿವರನ್ನು ನೇಮಕ ಮಾಡದೆ ಇರುವುದು, ಬೆಂಗಳೂರಿನ ನಗರ ಪೋಲಿಸ್ ಆಯುಕ್ತರಾಗಿದ್ದ ದಯಾನಂದ್ ಐಪಿಎಸ್, ಅವರನ್ನು ಅಮಾನತ್ತು ಮಾಡಿರುವ ಘಟನೆ ಖಂಡನೀಯ ಎಂದರು.
ವಾಲ್ಮೀಕಿ ಸಮಾಜದ ಸಿದ್ದಲಿಂಗಪ್ಪ ನಾಯಕ, ಸಾಹೇಬಗೌಡ ಗೌಡಗೇರ. ಮರೆಪ್ಪ ಪ್ಯಾಟಿ. ದೊಡ್ಡಯ್ಯ ನಾಯಕ. ಹಣಮಂತ ನಾಯಕ ಖಾನಹಳ್ಳಿ. ಚಂದ್ರಕಾಂತ ಹತ್ತಿಕುಣಿ. ಶರಣಪ್ಪ ಜಾಕನಳ್ಳಿ ಮುಂತಾದವರಿದ್ದರು.
12ವೈಡಿಆರ್9: ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಯಾದಗಿರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.