ವಾಲ್ಮೀಕಿ ಆದರ್ಶ ಮೌಲ್ಯಗಳು ಸಮಾಜಕ್ಕೆ ಸತ್ವಯುತ ಸಂದೇಶಗಳು: ಎಂ.ಕೆ.ಸೋಮಶೇಖರ್

KannadaprabhaNewsNetwork |  
Published : Oct 18, 2024, 12:06 AM IST
45 | Kannada Prabha

ಸಾರಾಂಶ

ಪ್ರತಿಯೊಬ್ಬರಲ್ಲೂ ಅಗಾಧವಾದ ಜ್ಞಾನ, ಶಕ್ತಿ ಇರುತ್ತದೆ. ಅದೇ ರೀತಿ ವಾಲ್ಮಿಕಿ ಮಹರ್ಷಿಗಳಲ್ಲೂ ಉದಾತ್ತ ಚಿಂತನೆಗಳು, ಸಾಮಾಜಿಕ ಅರಿವು, ವೈಜ್ಞಾನಿಕ ಮನೋಭಾವ ಇದ್ದುದ್ದರಿಂದಲೇ ಜಗದೆತ್ತರಕ್ಕೆ ವಿಸ್ತಾರಗೊಂಡಿದ್ದಾರೆ. ರಾಮಾಯಣ ಸದ್ಗುಣಗಳು ಮತ್ತು ಜ್ಞಾನವನ್ನು ಪ್ರಶಂಶಿಸುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಮಹರ್ಷಿ ವಾಲ್ಮೀಕಿರವರ ಆದರ್ಶ ಮೌಲ್ಯಗಳು ಸಮಾಜಕ್ಕೆ ಸತ್ವಯುತ ಸಂದೇಶಗಳು ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಮಾತನಾಡಿದ ಅವರು, ವಾಲ್ಮೀಕಿ ಭಾರತ ಕಂಡಂತಹ ಒಬ್ಬ ಮಹಾನ್ ಸಂಸ್ಕೃತ ಕವಿ. ಮೊದಲ ಕಾವ್ಯ ರಚಿಸಿದ ಆದಿ ಕವಿ. ರಾಮಾಯಣದ ಮೂಲಕ ಸಾಮಾಜಿಕ ಕ್ರಾಂತಿಯನ್ನು ಪ್ರಾರಂಭಿಸಿ ಯಾವುದೇ ಪ್ರಚಾರವಿಲ್ಲದೇ ಸಾಮಾಜಿಕ ಸಾಮರಸ್ಯ ಮತ್ತು ದಲಿತರ ಉನ್ನತಿಗಾಗಿ ಶ್ರಮಿಸಿದ್ದಂತಹ ಮೇರು ವ್ಯಕ್ತಿತ್ವ ಎಂದರು.

ಪ್ರತಿಯೊಬ್ಬರಲ್ಲೂ ಅಗಾಧವಾದ ಜ್ಞಾನ, ಶಕ್ತಿ ಇರುತ್ತದೆ. ಅದೇ ರೀತಿ ವಾಲ್ಮಿಕಿ ಮಹರ್ಷಿಗಳಲ್ಲೂ ಉದಾತ್ತ ಚಿಂತನೆಗಳು, ಸಾಮಾಜಿಕ ಅರಿವು, ವೈಜ್ಞಾನಿಕ ಮನೋಭಾವ ಇದ್ದುದ್ದರಿಂದಲೇ ಜಗದೆತ್ತರಕ್ಕೆ ವಿಸ್ತಾರಗೊಂಡಿದ್ದಾರೆ. ರಾಮಾಯಣ ಸದ್ಗುಣಗಳು ಮತ್ತು ಜ್ಞಾನವನ್ನು ಪ್ರಶಂಶಿಸುತ್ತಾರೆ. ಸೌಹಾರ್ಧತೆ ಎಂಬುದು ಭಾರತೀಯರ ಸಂಸ್ಕೃತಿ ಅದು ಭಾರತೀಯರ ಹೃದಯದಲ್ಲಿ ಯಾವಾಗಲೂ ಅಂತರ್ಗತವಾಗಿರುತ್ತದೆ ಎಂಬುದನ್ನು ರಾಮಾಯಣದ ಮೂಲಕ ವಾಲ್ಮೀಕಿ ಸಮಾಜಕ್ಕೆ ತಿಳಿಸಿದ್ದಾರೆ ಎಂದು ಅವರು ಹೇಳಿದರು.

ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯವೂ ನಮಗೆ ಯಾವಾಗಲೂ ಸ್ಫೂರ್ತಿಯ ಮೂಲವಾಗಿ ಉಳಿಯುತ್ತದೆ. ಅದರ ಆಧಾರದ ಮೇಲೆ ನಾವು ಶ್ರೇಷ್ಠ ಮತ್ತು ವೈಭವಯುತ ಸಮಾಜವನ್ನು ರಚಿಸಬಹುದು. ರಾಮಾಯಣ ಮಹಾಕಾವ್ಯ ಕೇವಲ ರಾಮನ ಸ್ತುತಿಯನ್ನು ಮಾತ್ರ ತಿಳಿಸುವುದಿಲ್ಲ. ಅದು ವಿಶ್ವಕ್ಕೆ ಭಾರತೀಯ ಸಂಸ್ಕೃತಿಯ ಹಿರಿಮೆಯ ಮೊದಲ ಸಂದೇಶವಾಗಿದೆ. ರಾಮಾಯಣ ಮಹಾಕಾವ್ಯದ ಮೂಲಕ ವಾಲ್ಮೀಕಿ ಅವರು ಭಾರತೀಯರ ಪ್ರತೀ ಮನೆ ಮನಗಳಲ್ಲಿ ಪರಿಚಿತರಾಗಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ. ಸೋಮಶೇಖರ್, ಶ್ರೀಧರ್, ಮುಖಂಡರಾದ ವಿಜಯ್ ಕುಮಾರ್, ಕೃಷ್ಣ, ರವಿಶಂಕರ್, ಜೋಗಿ ಮಹೇಶ್, ಮಂಜುನಾಥ್, ಶಂಕರ್, ವೀಣಾ, ಲೀಲಾ ಪಂಪಾಪತಿ, ಮಹ್ಮದ್ ಫಾರೂಕ್, ರವಿಶಂಕರ್, ವಿನಯ್ ಕುಮಾರ್, ಮಹದೇವೇಗೌಡ, ವೆಂಕಟೇಶ್, ನಾಸೀರ್, ಕಲೀಂ ಷರೀಫ್, ಶಾದಿಖ್ ಉಲ್ಲಾ ರೆಹಮಾನ್, ಆರ್.ಎಚ್. ಕುಮಾರ್, ಹರೀಶ್, ಮಧುರಾಜ್, ಭಾಗ್ಯ ಚಂದ್ರಶೇಖರ್, ರಾಘವೇಂದ್ರ, ಸಂತೋಷ್, ಅರುಣ್ ಗಂಗಾಧರ್, ಪುಟ್ಟಸ್ವಾಮಿ, ಚಿಕ್ಕಲಿಂಗು, ಮಹೇಶ್, ಧನಂಜಯ, ರಾಕೇಶ್ , ರವೀಶ್ ಮೊದಲಾದವರು ಇದ್ದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ