-ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನದೀಪ ಶಿಕ್ಷಕರ ಮಂಜೂರಾತಿ ಪತ್ರ ವಿತರಣೆ
------ಕನ್ನಡಪ್ರಭ ವಾರ್ತೆ ಹೊಸದುರ್ಗ:
ಮೌಲ್ಯಯುತ ಶಿಕ್ಷಣ ಮಕ್ಕಳಿಗೆ ಸಿಗದೇ ಮಾನವೀಯತೆಯ ಅರಿವು ಕಡಿಮೆಯಾಗುತ್ತಿದೆ ಎಂದು ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಶಿವಣ್ಣ ತಿಳಿಸಿದರು.ನಗರದ ಯೋಜನಾ ಕಛೇರಿ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನದೀಪ ಶಿಕ್ಷಕರ ಮಂಜೂರಾತಿ ಪತ್ರವನ್ನು ವಿತರಣೆ ಮಾಡಿ ಮಾತನಾಡಿ, ಶಾಲೆಯಲ್ಲಿಯೂ ಸಂಸೃತಿ, ಸಂಸ್ಕಾರ, ಗುರು ಹಿರಿಯರಿಗೆ ಗೌರವಿಸುವ ಆತ್ಮವಿಶ್ವಾಸ ಮಾಡಿಸುವ ಕೆಲಸ ಆಗಬೇಕಾಗಿದೆ. ಆಗ ಸಮಾಜದ ಕಡು ಬಡವರನ್ನು ಶಿಕ್ಷಣದಿಂದ ಮೇಲೆತ್ತಲು ಸಾಧ್ಯವಾಗುತ್ತದೆ ಎಂದರು
ರಾಜ್ಯದಲ್ಲಿ 1000 ಶಿಕ್ಷಕರ ನೇಮಕಾತಿ ಮಾಡಿದ್ದು, ಹೊಸದುರ್ಗ ತಾಲೂಕಿನಲ್ಲಿ 5 ಶಿಕ್ಷಕರ ಮಂಜೂರಾತಿ ಪತ್ರವನ್ನು ವಿತರಣೆ ಮಾಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ವೆಂಗಳಾಪುರ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಸಪ್ಪನಹಳ್ಳಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ದೊಡ್ಡಕಿಟ್ಟದಹಳ್ಳಿ, ಸರ್ಕಾರ ಹಿರಿಯ ಪ್ರಾಥಮಿಕ ಪಾಠಶಾಲೆ ಆರಳಹಳ್ಳಿ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆ ಕಗ್ಗಲಕಟ್ಟೆ ಈ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಮಾಡಿದ್ದು, ನವಂಬರ್ ತಿಂಗಳಿಂದ ಶಾಲೆಗಳಲ್ಲಿ ಕಲಿಕೆಯ ಹಿನ್ನೆಡೆ ಇರುವ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ಬೋಧನಾ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.ಮಂಜೂರಾತಿ ಪತ್ರ ಪಡೆದ ಕಸಪ್ಪನಹಳ್ಳಿ ಸರ್ಕಾರಿ ಶಾಲಾ ಶಿಕ್ಷಕಿ ಉಮಾದೇವಿ ಮಾತನಾಡಿ, ಉದ್ಯೋಗ ಇಲ್ಲದೆ ನಾನು ಮನೆಯಲ್ಲಿ ಕಷ್ಟ ಅನುಭವಿಸುತ್ತಿದ್ದೆ. ಧರ್ಮಸ್ಥಳ ಸಂಸ್ಥೆ ಈ ಒಂದು ಉದ್ಯೋಗ ಅವಕಾಶ ಕೊಟ್ಟಿದ್ದು, ನನ್ನ ಕುಟುಂಬವನ್ನು ಅರ್ಥಿಕವಾಗಿ ಮೇಲೆತ್ತಲು ಸಹಾಯಕವಾಗಿದೆ. ನಾನು ಪ್ರಮಾಣಿಕವಾಗಿ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಕಲಿಕೆಗೆ ಆದ್ಯತೆ ನೀಡುತ್ತೇನೆ ಎಂದು ಮನದಾಳದ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಛೇರಿ ಪ್ರಬಂದಕರು ಪ್ರತಿಭಾ, ಕಛೇರಿ ಸಹಾಯಕರಾದ ನವೀನ್, ಮಂಜುನಾಥ್, ಉಪಸ್ಥಿತರಿದ್ದರು. ಶ್ವೇತ , ಚಂದ್ರಿಕಾ , ರಂಘನಾಥ ಇದ್ದರು.------
ಫೋಟೋ: 26 hsd1:ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನದೀಪ ಶಿಕ್ಷಕರ ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಯಿತು.