ಕೊಡಗು ಕಲಾವಿದರ ಸಂಘದ ಅಧ್ಯಕ್ಷ ವಾಂಚಿರ ವಿಠಲ ನಾಣಯ್ಯ

KannadaprabhaNewsNetwork |  
Published : Jul 22, 2026, 02:45 AM IST
ಕಲಾವಿದರ ಸಭೆ. | Kannada Prabha

ಸಾರಾಂಶ

ಕೊಡಗು ಕಲಾವಿದರ ಸಂಘದ ಸಾಮಾನ್ಯ ಸಭೆ ಮತ್ತು 2026-30ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ವಿರಾಜಪೇಟೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ಕಲಾವಿದ ವಾಂಚಿರ ವಿಠಲ್ ನಾಣಯ್ಯ ಆಯ್ಕೆಯಾದರು.

ಮಡಿಕೇರಿ: ಕೊಡಗು ಕಲಾವಿದರ ಸಂಘದ ಸಾಮಾನ್ಯ ಸಭೆ ಮತ್ತು 2026-30ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ವಿರಾಜಪೇಟೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ಕಲಾವಿದ ವಾಂಚಿರ ವಿಠಲ್ ನಾಣಯ್ಯ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಈರಮಂಡ ಹರಿಣಿ ವಿಜಯ್, ಕಾರ್ಯದರ್ಶಿಯಾಗಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಖಜಾಂಚಿಯಾಗಿ ಕಾಡ್ಯಮಡ ಸುಮನ್, ಸಹ ಕಾರ್ಯದರ್ಶಿಯಾಗಿ ಮಲ್ಲಮಾಡ ಶ್ಯಾಮಲ ಸುನಿಲ್, ನಿರ್ದೇಶಕರಾಗಿ ಸೋಮೆಯಂಡ ಎಸ್.ಬೆಳ್ಯಪ್ಪ, ಬಿದ್ದಂಡ ಉತ್ತಮ್ ಪೊನ್ನಪ್ಪ, ಕಾಳಮಂಡ ಜಗತ್, ಟಿ.ಡಿ.ಮೋಹನ್, ಚೇನಂಡ ಗಿರೀಶ್ ಪೂಣಚ್ಚ, ಪಟ್ಟಡ ಸಿ.ಧನು ರಂಜನ್ ಹಾಗೂ ಜಾದುಗಾರ್ ವಿಕ್ರಂ ಶೆಟ್ಟಿ ಆಯ್ಕೆಯಾದರು. ಸಂಚಾಲಕರಾಗಿ ನೆರವಂಡ ಉಮೇಶ್, ಸಲಹಾ ಸಮಿತಿಯ ನಿರ್ದೇಶಕರಾಗಿ ಅನಂತಶಯನ ಬಿ.ಜಿ. ಹಾಗೂ ಅವರೆಮಾಡಂಡ ಶರಣ್ ನೇಮಕಗೊಂಡರು.ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ವಾಂಚಿರ ವಿಠ್ಠಲ್ ನಾಣಯ್ಯ ಅವರು, ಸರ್ವ ಸದಸ್ಯರು ಹಾಗೂ ಕಲಾವಿದರ ಸಹಕಾರದೊಂದಿಗೆ ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸಿ, ಕಲಾವಿದರ ಹಿತಾಸಕ್ತಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಕಲ್ಪ ವ್ಯಕ್ತಪಡಿಸಿದರು.

ಉಪಾಧ್ಯಕ್ಷೆ ಹರಿಣಿ ವಿಜಯ್, ಕಾರ್ಯದರ್ಶಿ ರಶ್ಮಿ ಕಾರ್ಯಪ್ಪ, ನಿರ್ದೇಶಕರಾದ ಬೋಸ್ ಬೆಳ್ಳಿಯಪ್ಪ, ಅನಂತಶಯನ ಬಿ.ಜಿ, ನೆರವಂಡ ಉಮೇಶ್, ಉತ್ತಮ್, ಆಂಡಮಾಡ ಪವನ್, ಪ್ರಭಾ ನಾಣಯ್ಯ, ಸಂಕೇತ್ ಶಿವಪ್ಪ ಮಾತನಾಡಿದರು.

ಗಿಡಕ್ಕೆ ನೀರೆರೆಯುವ ಮೂಲಕ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಲಾಯಿತು. ಸಂಘದ ಸದಸ್ಯೆ ಹಿರಿಯ ಕಲಾವಿದೆ ತಾತಂಡ ಪ್ರಭಾ ನಾಣಯ್ಯ ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಸಾಮಾನ್ಯ ಸಭೆ: ವಿರಾಜಪೇಟೆಯ ಕೆ.ಕೆ. ಗ್ರೂಪ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಂಘದ ನಿರ್ಗಮಿತ ಸ್ಥಾಪಕ ಅಧ್ಯಕ್ಷ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯದರ್ಶಿ ಈರಮಂಡ ಹರಿಣಿ ವಿಜಯ್ ಅವರು 2021ರಿಂದ 2026ರವರೆಗೆ ಸಂಘವು ಕೈಗೊಂಡ ವಿವಿಧ ಚಟುವಟಿಕೆಗಳು ಹಾಗೂ ಲೆಕ್ಕಪತ್ರ ಮಂಡಿಸಿದರು.

ಸಂಘದ ಮಾಜಿ ಖಜಾಂಚಿ ಅಜ್ಜಮಕ್ಕಡ ವಿನು ಕುಶಾಲಪ್ಪ, ಹಿರಿಯ ಕಲಾವಿದೆ ಚೆರುವಾಳಂಡ ಸುಜಲ ನಾಣಯ್ಯ, ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ಕಲಾವಿದ ಸದಸ್ಯರು ಇದ್ದರು. ಚೆರುವಾಳಂಡ ಸುಜಲ ನಾಣಯ್ಯ ಪ್ರಾರ್ಥಿಸಿದರು, ಟಿ.ಡಿ.ಮೋಹನ್ ಸ್ವಾಗತಿಸಿದರು, ಜಾದುಗಾರ್ ವಿಕ್ರಂ ಶೆಟ್ಟಿ ನಿರೂಪಿಸಿದರು, ಮಲ್ಲಮಾಡ ಶ್ಯಾಮಲ ಸುನಿಲ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೆರ್ಣಂಕಿಲ ಕ್ಷೇತ್ರದ ಮಹಾರಥ, ಅಂಗಣ ಚಪ್ಪರಕ್ಕೆ ಮುಹೂರ್ತ
ದೆಹಲಿ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಖಂಡನೀಯ: ಮೊಳಹಳ್ಳಿ ದಿನೇಶ್ ಹೆಗ್ಡೆ