ಪುಣೆಯಿಂದ ಬೆಳಗಾವಿ ಮೂಲಕ ಹುಬ್ಬಳ್ಳಿಯವರೆಗೆ ವಂದೇ ಭಾರತ್ ರೈಲಿನ ಸಂಚಾರಕ್ಕೆ ಸೆ.16 ರಂದು ಅಹ್ಮದಾಬಾದ್‌ನಿಂದ ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಪುಣೆಯಿಂದ ಬೆಳಗಾವಿ ಮೂಲಕ ಹುಬ್ಬಳ್ಳಿಯವರೆಗೆ ವಂದೇ ಭಾರತ್ ರೈಲಿನ ಸಂಚಾರಕ್ಕೆ ಸೆ.16 ರಂದು ಅಹ್ಮದಾಬಾದ್‌ನಿಂದ ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ. ಪುಣೆಯಿಂದ ಸಂಜೆ 4.15 ಕ್ಕೆ ಹೊರಟು ರಾತ್ರಿ 9ಕ್ಕೆ ಬೆಳಗಾವಿಗೆ ಆಗಮಿಸಲಿದೆ, ಹುಬ್ಬಳ್ಳಿಗೆ 8 ಗಂಟೆ 30 ನಿಮಿಷದ ಅವಧಿಯಲ್ಲಿ ಅಂದರೆ 10.45ಕ್ಕೆ ತಲುಪಲಿದೆ. ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಅಂದು ರಾತ್ರಿ 8ಕ್ಕೆ ಸಾಂಸ್ಕೃತಿಕ ಹಾಗೂ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆ.18ರಿಂದ ಹುಬ್ಬಳ್ಳಿಯಿಂದ ಹೊರಡಲಿರುವ ರೈಲು ವಾರದಲ್ಲಿ ಮೂರು ದಿನ (ಬುಧವಾರ, ಶುಕ್ರವಾರ ಹಾಗೂ ಭಾನುವಾರ) ಮತ್ತು ಪುಣೆಯಿಂದ (ಗುರುವಾರ, ಶನಿವಾರ ಮತ್ತು ಸೋಮವಾರ) ಸಂಚರಿಸಲಿದೆ. ಪ್ರಯಾಣಿಕರ ಸ್ಪಂದನೆ ಮತ್ತು ಜನದಟ್ಟಣೆ ಗಮನದಲ್ಲಿಟ್ಟು ಮುಂದೆ ರೈಲುನ್ನು ಪ್ರತಿದಿನ ಸಂಚರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.ರೈಲಿನ ಸಮಯ: ರೈಲು ಸಂ. 20669 ಬೆಳಗ್ಗೆ 5.00ಕ್ಕೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು 5.15ಕ್ಕೆ ಧಾರವಾಡ, 6.55ಕ್ಕೆ ಬೆಳಗಾವಿ, 9.15ಕ್ಕೆ ಮೀರಜ್, 9.30ಕ್ಕೆ ಸಾಂಗಲಿ, 10.35ಕ್ಕೆ ಸತಾರಾ ಹಾಗೂ 1.30ಕ್ಕೆ ಪುಣೆ ತಲುಪಲಿದೆ. ರೈಲು ಸಂ. 20670 ಮಧ್ಯಾಹ್ನ 2.15ಕ್ಕೆ ಪುಣೆಯಿಂದ ಹೊರಟು ಸಂಜೆ 4.08 ಕ್ಕೆ ಸತಾರಾ, 6.10ಕ್ಕೆ ಸಾಂಗಲಿ, 6.40ಕ್ಕೆ ಮೀರಜ್, ರಾತ್ರಿ 8.35ಕ್ಕೆ ಬೆಳಗಾವಿ, 10.20ಕ್ಕೆ ಧಾರವಾಡ ಹಾಗೂ 10.45ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ತಲುಪಲಿದೆ. ಪ್ರಯಾಣಿಕರು ಈ ರೈಲು ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.