ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ

KannadaprabhaNewsNetwork |  
Published : Nov 09, 2025, 03:45 AM IST
(ಫೋಟೊ 7ಬಿಕೆಟಿ6, ಸಾಮೂಹಿಕ ವಂದೇ ಮಾತರಂ ಗೀತೆ ಹಾಡಲಾಯಿತು.) | Kannada Prabha

ಸಾರಾಂಶ

ಬಾಗಲಕೋಟೆ ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಬಿಜೆಪಿ ಹಮ್ಮಿಕೊಂಡ ರಾಷ್ಟ್ರೀಯ ಗೀತೆ ವಂದೇ ಮಾತರಂ 150ರ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರತಿ ಭಾರತೀಯ ಕಣ ಕಣದಲ್ಲಿ ಸ್ವಾತಂತ್ರ್ಯದ ರಣಕಹಳೆ ಮೊಳಗಿಸಿದ ವಂದೇ ಮಾತರಂ ಗೀತೆ ಭಾರತದ ಏಕತೆಯ ಸಂಕೇತವಾಗಿದ್ದು, ಅದೊಂದು ಪ್ರೇರಣಾ ಶಕ್ತಿಯಾಗಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಬಿಜೆಪಿ ಹಮ್ಮಿಕೊಂಡ ರಾಷ್ಟ್ರೀಯ ಗೀತೆ ವಂದೇ ಮಾತರಂ 150ರ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, 1875ರಲ್ಲಿ ಬಕಿಮ್ ಚಂದ್ರ ಚಟರ್ಜಿ ಅವರು ವಂದೇ ಮಾತರಂ ಅನ್ನು ಪ್ರಕಟಿಸಿದಾಗ, ಕೆಲವರು ಕೇವಲ ಹಾಡು ಎಂದು ಭಾವಿಸಿದ್ದರು, ಆದರೆ ಅದು ಭಾರತದ ಸ್ವಾತಂತ್ರ್ಯ ಹೋರಾಟದ ಧ್ವನಿಯಾಗಿ ರಾಷ್ಟ್ರದಲ್ಲಿ ಏಕತೆ ಮೂಡಿಸಿತು ಎಂದು ಹೇಳಿದರು.

ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಮಾತನಾಡಿ, ವಂದೇ ಮಾತರಂ ಐಕ್ಯತೆಯ ಮಂತ್ರ, ಶಕ್ತಿ, ಸಂಕಲ್ಪ, ದೇಶ ಸುದೀರ್ಘ 90 ವರ್ಷಗಳ ಸ್ವಾತಂತ್ರ್ಯ ಹೋರಾಟದಿಂದ 1947ರಂದು ಸ್ವಾತಂತ್ರ್ಯ ಪಡೆಯಿತು. ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರಿಗೆ ಐಕ್ಯತೆಯ ದ್ವನಿಯಾಗಿ ಹೋರಾಟದ ಕಿಚ್ಚನ್ನು ತುಂಬುವ ಮೂಲಕ ಪ್ರೇರಣೆಯಾಗಿತ್ತು. ನಿಜವಾಗಲೂ ರಾಷ್ಟ್ರಗೀತೆ ಆಗಬೇಕಿದ್ದ ವಂದೇ ಮಾತರಂ ಕಾಂಗ್ರೆಸ್‌ ಮಾಡಿದ ತಪ್ಪಿನಿಂದಾಗಿ ರಾಷ್ಟ್ರಗೀತೆಯಾಗಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿ, ಭಾರತ ಮಾತೆಯನ್ನು ಗುಣಗಾನ ಮಾಡಿ ಭಾರತೀಯರಿಗೆ ಶಕ್ತಿ ತುಂಬಿ, ತಾಯಿ ಭಾರತಿಗೆ ಯಾವುದೇ ತ್ಯಾಗಕ್ಕೂ ಸಿದ್ಧ ಎಂಬ ತರುಣರ, ದೇಶಭಕ್ತರ ಪಡೆ, ರಣದೀರರ ಪಡೆ ಸಿದ್ಧಗೊಳಿಸಿ ಮಾಡಿದ ಶ್ರೇಯಸ್ಸು ವಂದೇ ಮಾತರಂ ಗೀತೆಗೆ ಸಲ್ಲುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಅವರು ಸ್ವದೇಶಿ ಪ್ರತಜ್ಞಾ ವೀಧಿ ಬೋಧಿಸಿದರು. ವೇದಿಕೆ ಮೇಲೆ ಮಾಜಿ ಶಾಸಲ ಎಂ.ಕೆ,. ಪಟ್ಟಣಶೇಟ್ಟಿ, ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ರಾಜು ರೇವಣಕರ, ಬಸವರಾಜ ಯಂಕಂಚಿ, ನಗರಮಂಡಲ ಅಧ್ಯಕ್ಷ ಬಸವರಾಜ ಹುನಗುಂದ,ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೋಣ್ಣೂರ ಇದ್ದರು.

ವಂದೇ ಮಾತರಂ ಸಮೂಹ ಕಂಪನ: ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಂಗೀತ ವಿಭಾಗದ ವಿದ್ಯಾರ್ಥಿಗಳಿಂದ ಸಾಮೂಹಿಕ ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಹಾಡಲಾಯಿತು.

ಲಕ್ಷ್ಮೀ ನಾರಾಯಣ ಕಾಸಟ್, ಜಿ.ಎನ್. ಪಾಟೀಲ, ಡಾ.ಎಂ.ಎಸ್. ದಡ್ಡೆನ್ನವರ, ಮಹೇಶ ಅಥಣಿ, ಗುರುಬಸವ ಸೂಳಿಬಾವಿ, ಮಹಾಂತೇಶ ಶೆಟ್ಟರ, ವೀರಣ್ಣ ಹಲಕುರ್ಕಿ, ನಗರಸಭೆ ಉಪಾಧ್ಯಕ್ಷೆ ಶೋಭಾ ರಾವ, ಜ್ಯೋತಿ ಭಜಂತ್ರಿ, ಶಶಿಕಲಾ ಮಜ್ಜಗಿ, ರೇಖಾ ಕಲಬುರಗಿ, ಸ್ಮೀತಾ ಪವಾರ, ಸೋಮಸಿಂಗ ಲಮಾಣಿ, ಕಲ್ಲಪ್ಪ ಭಗವತಿ, ರಾಜು ಮುದೇನೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.----ಕೋಟ್‌

ತ್ಯಾಗ ಬಲಿದಾನಗಳ ಹಾಗೂ ಸ್ವಾತಂತ್ರ್ಯ ಎಂಬ ಹೋರಾಟದ ಅರಿವು ಮುಖ್ಯವಾಗಿದೆ. ಭಾರತದ ಇತಿಹಾಸದಲ್ಲಿ ವಂದೇ ಮಾತರಂಗೆ ಅಗ್ರಸ್ಥಾನವಿದೆ, ಇದರಲ್ಲಿ ಭಾರತ ಮಾತೆಯ ವರ್ಣನೆ ಇದೆ. ಮುಂದಿನ ಪೀಳಿಗೆಗೆ ನಿಜವಾದ ಸ್ವತಂತ್ರ್ಯ ಹೋರಾಟದ ಇತಿಹಾಸ, ದೇಶದ ಪರಂಪರೆ ಸಂಸ್ಕೃತಿ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ.

ನಾರಾಯಣಸಾ ಭಾಂಡಗೆ ರಾಜ್ಯಸಭಾ ಸದಸ್ಯರು

PREV

Recommended Stories

10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ
ಲಕ್ಷ ದೀಪೋತ್ಸವದಲ್ಲಿ 1.5 ಲಕ್ಷ ಜನ ಸೇರುವ ನಿರೀಕ್ಷೆ