ಕನ್ನಡಪ್ರಭ ವಾರ್ತೆ ಆಲೂರು
ನೌಕರ ಸಂಘದ ನಿರ್ದೇಶಕರ ಸ್ಥಾನಕ್ಕೆ ಎಲ್ಲಾ ಇಲಾಖೆಯಿಂದ ಅವಿರೋಧ ಆಯ್ಕೆಯಾದರೆ, ಶಿಕ್ಷಣ ಇಲಾಖೆ ಎಲ್ಲಿ ತೀವ್ರ ಪೈಪೋಟಿ ಏರ್ಪಟ್ಟು ಚುನಾವಣೆ ನಡೆದ ಪರಿಣಾಮ ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದರು.
ಶನಿವಾರ ನಡೆದ ಅಧ್ಯಕ್ಷರ ಸ್ಥಾನ ಚುನಾವಣೆಯಲ್ಲೂ ಸಹ ಸ್ಪರ್ಧಿಸಿದ್ದ ಅಧ್ಯಕ್ಷರಾಗಿ ವರದರಾಜು ಆಯ್ಕೆಯಾದರು. ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅನಿಲ್ 22 ಮತಗಳಿಸಿ ಆಯ್ಕೆಯಾದರೆ ಪ್ರತಿಸ್ಪರ್ಧಿ ರಂಗಸ್ವಾಮಿ 8 ಮತ ಗಳಿಸಿ ಪರಾಜಿತರಾದರು. ರಾಜ್ಯ ಪರಿಷತ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಂಜುನಾಥ್ 18 ಮತ ಗಳಿಸಿ ಜಯಶೀಲರಾದರೆ ಕುಮಾರ್ 12 ಮತ ಗಳಿಸಿ ಪರಾಭವಗೊಂಡರು.ಕಳೆದ ಹಲವು ದಿನಗಳಿಂದ ತೀವ್ರ ತೀವ್ರ ಕುತೂಹಲ ಕೆರಳಿಸಿದ್ದ ಸಂಘದ ಅಧ್ಯಕ್ಷರ ಚುನಾವಣೆಗೆ ಎರಡು ತಂಡಗಳು ನಿರ್ಮಾಣಗೊಂಡು ವರದರಾಜು ತಂಡ ಒಂದಾದರೆ ಮತ್ತೊಂದು ತಂಡ ರವಿ ಅವರದಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟು ಕಳೆದ ಹಲವು ದಿನಗಳಿಂದ ತೆರೆಮರೆಯಲ್ಲಿ ಎರಡು ತಂಡಗಳಿಂದ ಕಸರತ್ತು ನಡೆದಿತ್ತು. ಇದರಲ್ಲಿ ಪ್ರಮುಖವಾಗಿ ಜಾತಿ, ಒಳಜಾತಿಯ ಜೊತೆಗೆ ರಾಜಕೀಯವು ಸಹ ಮಿಶ್ರಣಗೊಂಡು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ವರದರಾಜರ ತಂಡ ಜಯಶೀಲರಾಗಿ ತಾಲೂಕು ನೌಕರರ ಸಂಘದ ಅಧಿಕಾರ ಚುಕ್ಕಾಣಿ ಹಿಡಿಯಿತು.