ಗದಗ: ಗದುಗಿನ ನಾಲ್ವಾಡಗಲ್ಲಿಯ ಕಾಮರತಿ ಉತ್ಸವಕ್ಕೆ ಇದೀಗ ಶತಮಾನೋತ್ಸವದ ಸಂಭ್ರಮ, ತನ್ನಿಮಿತ್ತ ಮಾ. 14ರಿಂದ 18ರ ವರೆಗೆ ಹಲವಾರು ವೈವಿಧ್ಯಮಯ ಕಾರ್ಯಗಳನ್ನು ಹಮ್ಮಿಕೊಳ್ಳಲು ಉತ್ಸವ ಸಮಿತಿ ನಿರ್ಧರಿಸಿದೆ. ಅಂಗನವಾಡಿ ಶಾಲೆಯ ಪ್ರಾಂಗಣದಲ್ಲಿ ಭಾನುವಾರ ಜರುಗಿದ ನಾಲ್ವಾಡ ಓಣಿಯ ಗುರುಹಿರಿಯರ, ಯುವಕರ ಉಪಸ್ಥಿತಿಯಲ್ಲಿ ಉತ್ಸವ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಮಾ. 14ರಂದು ಸಂಜೆ 6.30ಕ್ಕೆ ಉತ್ಸವದ ಸಭಾ ಮಂಟಪದಲ್ಲಿ ಶತಮಾನೋತ್ಸವದ ಸಂಭ್ರಮಕ್ಕಾಗಿ ಒಂದು ಸಾವಿರ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ರೂಪಿಸಲಾಗಿದೆ. ಮಾ. 15ರಂದು ಸಂಜೆ 6.30ಕ್ಕೆ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಾ. 16ರಂದು ಸಂಜೆ 6.30ಕ್ಕೆ 100 ವರ್ಷಗಳ ಕಾಲ ನಿರಂತರವಾಗಿ ಕಾಮರತಿ ಉತ್ಸವವನ್ನು ಯಶಸ್ವಿಯಾಗಿ ನಡೆಸಿಕೊಂಡ ಬಂದಿರುವ ಸಮಿತಿಯ ಹಿರಿಯರನ್ನು ಗೌರವಿಸುವ ಕಾರ್ಯಕ್ರಮ ಜರುಗಲಿದೆ.ಮಾ. 18ರಂದು ಮುಂಜಾನೆ 10.30ಕ್ಕೆ ಧಾರವಾಡದ ಹೆಸರಾಂತ ಜಗ್ಗಲಗಿಯ ಮೇಳದೊಂದಿಗೆ ಬೃಹತ್ ಮೆರವಣಿಗೆ ಜರುಗಲಿದೆ.
ಸಭೆಯಲ್ಲಿ ಉಪಸ್ಥಿತರಿದ್ದ ನಾಲ್ವಾಡಗಲ್ಲಿಯ ಹಿರಿಯರಾದ ಶಿವಯ್ಯ ಭದ್ರಕಾಳಮ್ಮನಮಠ, ವೀರಪ್ಪ ಲಕ್ಕುಂಡಿ, ಚನ್ನವೀರಪ್ಪ ಟೆಂಗಿನಕಾಯಿ, ವಿ.ಕೆ. ಮಟ್ಟಿ, ಶಿವಪ್ಪ ಪಟ್ಟಣಶೆಟ್ಟಿ, ಅಂದಪ್ಪ ಜಿನಗಾ, ಶ್ರೀಶೈಲಪ್ಪ ಅಣ್ಣಿಗೇರಿ, ಚಂಬಣ್ಣ ಚನ್ನವೀರಶೆಟ್ಟರ, ವಿಶ್ವನಾಥ ಟೆಂಗಿನಕಾಯಿ, ಸಿದ್ಧಪ್ಪ ಹರ್ತಿ, ಬಸಣ್ಣ ಹರ್ತಿ, ಬಸಣ್ಣ ಗೌಡ್ರ, ವಿರೂಪಾಕ್ಷಪ್ಪ ಅಣ್ಣಿಗೇರಿ ಅವರು ನಾಲ್ವಾಡಗಲ್ಲಿಯಲ್ಲಿ ಕಾಮರತಿ ಉತ್ಸವ ಆಚರಿಸಿಕೊಂಡು ಬಂದ ಪರಂಪರೆಯನ್ನು ವಿವರಿಸಿ ಯುವಕರು ಒಗ್ಗಟ್ಟಿನೊಂದಿಗೆ, ಯಾವುದೇ ತಂಟೆ ತಕರಾರು ಬರದಂತೆ ಶಾಂತಿ-ಸಮಾಧಾನದಿಂದ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಸಲಹೆ ನೀಡಿದರು.ವಿರೂಪಾಕ್ಷಪ್ಪ ಅಣ್ಣಿಗೇರಿ, ಅಪ್ಪುರಾಜ ಭದ್ರಕಾಳಮ್ಮನಮಠ, ಶಿವಯೋಗಿ ಟೆಂಗಿನಕಾಯಿ, ಬಸವರಾಜ ಜಿನಗಾ, ಪ್ರಕಾಶ ಬೇಂದ್ರೆ, ಮಂಜುನಾಥ ಲಕ್ಕುಂಡಿ, ಬಸವರಾಜ ಅಣ್ಣಿಗೇರಿ, ರಾಜಣ್ಣ ಹುಳ್ಳಿಗೌಡ್ರ, ಅಮಿತ್ ಲಕ್ಕುಂಡಿ, ಶಶಿ ಹಾಗೂ ರವಿ ಅಣ್ಣಿಗೇರಿ, ನವೀನ ಲಕ್ಕುಂಡಿ, ಸಲೀಂ ಪಠಾಣ, ಕಾರ್ತಿಕ ಲಕ್ಕುಂಡಿ, ಕಾರ್ತಿಕ ಪರ್ವತಗೌಡ್ರ, ಪುರದಪ್ಪ ಅಣ್ಣಿಗೇರ, ಮಂಜುನಾಥ ನಾಲ್ವಾಡ, ಶಿವು ಅಣ್ಣಿಗೇರಿ, ಮಹೇಶ ಜಿನಗಾ, ಸೋಮು ಅಣ್ಣಿಗೇರಿ, ಈರಣ್ಣ ಚವಡಿ, ನಾಗು ಅಣ್ಣಿಗೇರಿ ಮುಂತಾದ ಯುವಕರೆಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಕಾರ್ಯಗಳನ್ನು ಹಂಚಿಕೊಂಡು ಶಿಸ್ತಿನಿಂದ ಕೆಲಸ ಮಾಡಬೇಕು ಎಂದು ಹಿರಿಯರು ಮಾರ್ಗದರ್ಶನ ಮಾಡಿದರು.