ಮುಂಡರಗಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು- ಗದಗ, ತಾಲೂಕು ಶರಣ ಸಾಹಿತ್ಯ ಪರಿಷತ್ತು, ಮಹಿಳಾ ಕದಳಿ ವೇದಿಕೆ ಮುಂಡರಗಿ ಆಶ್ರಯದಲ್ಲಿ ಮುಂಡರಗಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಸೇವಾದೀಕ್ಷಾ ಸಮಾರಂಭ ಜೂ. 18ರಂದು ಸಂಜೆ 4.30ಕ್ಕೆ ಪಟ್ಟಣದ ಅನ್ನದಾನೀಶ್ವರ ಶಿಲಾ ಮಂಟಪದಲ್ಲಿ ಜರುಗಲಿದೆ. ವರ್ಷಪೂರ್ತಿ ತಾಲೂಕು ಶಸಾಪದಿಂದ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ತಾಲೂಕು ಶಸಾಪ ಗೌರವಾಧ್ಯಕ್ಷ ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ ಹೇಳಿದರು.ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕು ನಿಯೋಜಿತ ಶಸಾಪ ಅಧ್ಯಕ್ಷ ವೀರಪ್ಪ ಮಡಿವಾಳರ ಮಾತನಾಡಿ, ಜೂ. 18ರಂದು ಸಂಜೆ 4.30ಕ್ಕೆ ಜರುಗುವ ಸೇವಾ ದೀಕ್ಷಾ ಕಾರ್ಯಕ್ರಮದಲ್ಲಿ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಧ್ಯಕ್ಷ ಡಾ. ಸಂತೋಷ ಹಿರೇಮಠ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಶಸಾಪ ಅಧ್ಯಕ್ಷ ಕೆ.ಎ. ಬಳಿಗಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷ ಸುಧಾ ಹುಚ್ಚಣ್ಣವರ, ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷ ಸೀತಾ ಬಸಾಪೂರ, ನಿಯೋಜಿತ ಅಧ್ಯಕ್ಷ ವೀರಪ್ಪ ಮಡಿವಾಳರ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶೋಭಾ ಮೇಟಿ, ಕಾಶೀನಾಥ ಶಿರಬಡಗಿ, ಎಂ.ಜಿ. ಗಚ್ಚಣ್ಣವರ, ಎಸ್.ಆರ್. ಬಸಾಪೂರ, ಎಸ್.ಎಸ್. ಗಡ್ಡದ, ವಿ.ಜೆ. ಹಿರೇಮಠ, ಗಿರೀಶಗೌಡ ಪಾಟೀಲ, ಬಸವರಾಜ ಹೆಬ್ಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.