ಶಂಕಿತ ಆರೋಪಿ ಜೊತೆ ವರ್ಷಿತಾ ಇರುವ ಪೋಟೋ ವೈರಲ್

KannadaprabhaNewsNetwork |  
Published : Aug 21, 2025, 01:00 AM IST
ಚಿತ್ರದುರ್ಗ ಮೂರನೇ ಪುಟದ  ಲೀಡ್  ಪೂರಕ44 | Kannada Prabha

ಸಾರಾಂಶ

ಚಿತ್ರದುರ್ಗ ವಿದ್ಯಾರ್ಥಿನಿ ವರ್ಷಿತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಟೋ ವೊಂದುವೈರಲ್ ಆಗಿದೆ.

ಚಿತ್ರದುರ್ಗ: ಚಿತ್ರದುರ್ಗ ವಿದ್ಯಾರ್ಥಿನಿ ವರ್ಷಿತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಟೋ ವೊಂದುವೈರಲ್ ಆಗಿದೆ. ಶಂಕಿತ ಆರೋಪಿ ಚೇತನ್, ವರ್ಷಿತಾ ಜತೆಗಿರುವ ಫೋಟೋ ಇದಾಗಿದ್ದು ಪಾರ್ಕ್‌ನಲ್ಲಿ ಇಬ್ಬರೂ ಜೊತೆಗೆ ನಿಂತಿದ್ದಾರೆ. ವರ್ಷಿತಾ ಕೈಬೆರಳಿಡಿದು ಚೇತನ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ. ಇಬ್ಬರ ಮೊಗದಲ್ಲಿ ನಗುವಿದೆ.

ಪೋಟೋ ಬಗೆಗೆ ಚಿತ್ರದುರ್ಗದಲ್ಲಿ ವ್ಯಾಪಕ ಚರ್ಚೆಗಳಾಗುತ್ತಿವೆ. ಸಂಜೆಯಾದರೂ ವರ್ಷಿತಾಳ ಶವದ ಮರಣೋತ್ತರ ಪರೀಕ್ಷೆ ಆಗಿರಲಿಲ್ಲ. ಶವಾಗಾರದ ಸುತ್ತ ಮೃತಳ ಬಂಧುಗಳು ಆಗಮಿಸಿದ್ದರು.ಈ ಬಗ್ಗೆ ಮಾತನಾಡಿದ ಎಸ್ಪಿ ರಂಜಿತ್ ಕುಮಾರ್ ಬಂಗಾರು, ಪೋಸ್ಟ್ ಮಾರ್ಟಮ್ ರಿಪೋರ್ಟ್ ಬರುವ ತನಕ ಏನೂ ಹೇಳಲಿಕ್ಕಾಗದು. ಓರ್ವನ ವಶಕ್ಕೆ ಪಡೆದು ವಿಚಾರಣ ನಡೆಸಲಾಗುತ್ತಿದೆ ಎಂದಷ್ಟೇ ಹೇಳಿದರು. 

ಆಗಸ್ಟ್ 14ರಂದು ಹಾಸ್ಟೆಲ್‌ನಿಂದ ಹೋದವಳು ನಾಪತ್ತೆಯಾಗಿದ್ದಾಳೆ. ಟೂರಿಸ್ಟ್ ಒಬ್ಬರು ಹೈವೇ ಬಳಿ ನೇಚರ್ ಕಾಲ್‌ಗೆ ಹೋದಾಗ ಶವಪತ್ತೆ ಆಗಿದೆ. ಹೈವೇ ಬಳಿಯ ಖಾಸಗಿ ಹೋಟೆಲ್ ಸಿಬ್ಬಂದಿಗೆ ಮಾಹಿತಿ ನೀಡಿ ತೆರಳಿದ್ದರು. ಪ್ರಕರಣದ ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಡ್ರಗ್ಸ್‌ ಆರ್ಭಟಕ್ಕೆ ಮದ್ಯ ಮಾರಾಟವೇ ಕುಸಿತ!
24,300 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅಸ್ತು : ಸಿದ್ದರಾಮಯ್ಯ