ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ವಕೀಲರಿಗೆ ರಕ್ಷಣೆಗೆ ಒತ್ತಾಯಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಕೀಲ ಎ.ಜಿ.ಸುಧಾಕರ್, ಅಖಿಲ ಭಾರತ ವಕೀಲರ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ವಕೀಲರ ಒಕ್ಕೂಟದ ಸಮಿತಿಯ ಆದೇಶದಂತೆ ವಕೀಲರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಹಸೀಲ್ದಾರ್ ಕಚೇರಿ ಮುಂದೆ ವಕೀಲರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾಗಿ ತಿಳಿಸಿದರು. ಸಂವಿಧಾನಬದ್ಧವಾಗಿ ವಕೀಲರಿಗೆ ರಕ್ಷಣೆ ನೀಡಲು ಪೊಲೀಸರು ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕೀಲರ ಸಂಘದ ಬೇಡಿಕೆ ರಾಜ್ಯ ಸರ್ಕಾರ ಎಲ್ಲಾ ವಕೀಲರಿಗೆ ಕಡ್ಡಾಯವಾಗಿ ವೈದ್ಯಕೀಯ, ವಿಮಾ ಸೌಲಭ್ಯಗಳನ್ನು ಒದಗಿಸಬೇಕು, ವಕೀಲರಿಗೆ ಟೋಲ್ ಶುಲ್ಕ ರಹಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು, ಮಹಿಳಾ ವಕೀಲರಿಗೆ ಶೇ.33 ರಷ್ಟು ಮೀಸಲಾತಿ ನೀಡಬೇಕು, ಪ.ಜಾ, ಪ.ಪಂ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ಮೀಸಲಾತಿ ಅನುಸಾರವಾಗಿ ಪ್ರಥಿತ್ಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ರವಿ ಮಾತನಾಡಿದರು. ನಂತರ ಪ್ರತಿಭಟನಕಾರರು ಶಿರಸ್ಥೇದಾರ್ ಮಂಜುನಾಥ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಇದಕ್ಕೂ ಮೊದಲು ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ವತಿಯಿಂದ ಗುಜರಾತಿನ ಅಲಹಾಬಾದ್‍ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಶದ್ಧಾಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಜಯಪ್ಪ, ಖಜಾಂಚಿ ಬಿಂಧುಕುಮಾರಿ, ಹಿರಿಯ ವಕೀಲರಾದ ಜೆ.ಎನ್.ನಂಜಪ್ಪ,ಕರುಣಾಸಾಗರರೆಡ್ಡಿ, ಸತ್ಯನಾರಾಯಣ್ ರಾವ್,ನರಸಿಂಹಮೂರ್ತಿ ವಕೀಲರಾದ ರಾಧಾಕೃಷ್ಣ, ಮಂಜುನಾಥ್, ಲಕ್ಷ್ಮಣ್‍ರೆಡ್ಡಿ, ಬಾಲುನಾಯಕ್ ಮತ್ತಿತರರು ಇದ್ದರು.