ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ನೀಡಿ

KannadaprabhaNewsNetwork |  
Published : Apr 24, 2026, 01:30 AM IST
18 | Kannada Prabha

ಸಾರಾಂಶ

ಮೋರಿಗಳನ್ನು ಸ್ವಚ್ಛಗೊಳಿಸಬೇಕು, ಸಾರ್ವಜನಿಕ ಶೌಚಾಲಯ ಸ್ವಚ್ಛಗೊಳಿಸಬೇಕು, ಶುದ್ಧ ಕುಡಿಯುವ ನೀರಿನ ಘಟಕ ಓಪನ್ ಮಾಡುತ್ತಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಮೈಸೂರುವರುಣ ಕ್ಷೇತ್ರದಲ್ಲಿರುವ ಗ್ರಾಪಂ ಪಿಡಿಓಗಳು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಹಾಗೂ ಸ್ವಚ್ಛತೆ ಬಗ್ಗೆ ಎಚ್ಚರ ವಹಿಸುವುದರೊಂದಿಗೆ ಗ್ರಾಮಸ್ಥರು ನಮ್ಮ ಬಳಿ ದೂರು ತರದಂತೆ ನೋಡಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು.ವರುಣ ಕ್ಷೇತ್ರದ ಚಿಕ್ಕೇಗೌಡನಹುಂಡಿ, ಹಡಜನ, ದೇವಲಾಪುರ, ಕುಂಬ್ರಳ್ಳಿ, ರಾಯನಹುಂಡಿ ಗ್ರಾಮಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಆಗಮಿಸಿದಾಗ ಚಿಕ್ಕೇಗೌಡನಹುಂಡಿಯಲ್ಲಿ ಸ್ಮಶಾನಕ್ಕೆ ಜಾಗಬೇಕು, ಸಾರ್ವಜನಿಕ ಕಾರ್ಯಕ್ರಮ ಮಾಡಲು ಜಾಗಬೇಕು, ಪೋಡ್ ಆಗಬೇಕು, ಮೋರಿಗಳನ್ನು ಸ್ವಚ್ಛಗೊಳಿಸಬೇಕು, ಸಾರ್ವಜನಿಕ ಶೌಚಾಲಯ ಸ್ವಚ್ಛಗೊಳಿಸಬೇಕು, ಶುದ್ಧ ಕುಡಿಯುವ ನೀರಿನ ಘಟಕ ಓಪನ್ ಮಾಡುತ್ತಿಲ್ಲ ಎಂದರು. ಹಡಜನ ಗ್ರಾಮದಲ್ಲಿ ಸ್ಮಶಾನ ಅಭಿವೃದ್ಧಿಯಾಗಬೇಕು, ಹೈಮಾಸ್ಕ್ ಲೈಟ್ ಹಾಕಬೇಕು, ಸ್ಟ್ರೀಟ್‌ಲೈಟ್ ಹಾಕಬೇಕು, ದೇವಸ್ಥಾನಗಳ ಅಭಿವೃದ್ಧಿ ಪಡಿಸಬೇಕು. ಕಾಂಕ್ರೀಟ್ ರಸ್ತೆ, ಚರಂಡಿ ಆಗಬೇಕು, ಪ್ರೌಢಶಾಲೆ ಹಾಗೂ ಆರೋಗ್ಯ ಕೇಂದ್ರ ಮಂಜೂರು ಮಾಡಿಕೊಡಬೇಕು, ಲೈಟ್‌ಕಂಬಗಳನ್ನು ಹಾಕಬೇಕು, ಸುಮಾರು 50 ಜನರಿಗೆ ಗೃಹಲಕ್ಷ್ಮಿ ಬರುತ್ತಿಲ್ಲ. ಕರೆಂಟ್‌ ಬಿಲ್ ಸಾವಿರಾರು ರು. ಬರುತ್ತಿದೆ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಡಾ. ಯತೀಂದ್ರರವರು ಪಿಡಿಓ ಗಳು ಸಣ್ಣಪುಟ್ಟ ಸಮಸ್ಯೆಗಳನ್ನು ಜನರು ನಮ್ಮ ಬಳಿ ಕೇಳದಂತೆ ನಿಮ್ಮ ಮಟ್ಟದಲ್ಲಿಯೇ ಪರಿಹರಿಸಬೇಕು. ಗ್ರಾಮಸ್ಥರು ಹೇಳಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಹಂತ ಹಂತವಾಗಿ ಮಾಡಿಕೊಡುತ್ತೇವೆ. ಮುಂದಿನ ಸಭೆಗಳಲ್ಲಿ ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಅಧಿಕಾರಿಗಳೆಲ್ಲರೂ ಬರಬೇಕು ಎಂದರು.ಇಓ ಕೃಷ್ಣ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಾಯನಹುಂಡಿ ರವಿ, ನಿಂಗೇಗೌಡ, ನಂಜಪ್ಪ, ಮಣಿಯಯ್ಯ, ಮನೋಜ್, ಚೆನ್ನಾಜಮ್ಮ, ರವಿ, ಪ್ರದೀಪ್‌ ಕುಮಾರ್, ಮಹೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲಿಗ್ರಾಮ, ಕೆ.ಆರ್‌. ನಗರ ತಾಲೂಕಿಗೆ ಶೇ. 92.13 ಫಲಿತಾಂಶ
ಕುಡಿಯುವ ನೀರಿನ ಸಮಸ್ಯೆಗೆ ಅಗತ್ಯ ಕ್ರಮ ವಹಿಸಿ