ವರುಣಾರ್ಭಟ: 8 ಮನೆ ಕುಸಿತ, ಮೂರು ಮೇಕೆ ಸಾವು

KannadaprabhaNewsNetwork |  
Published : Oct 18, 2024, 12:10 AM IST
ಫೋಟೋ 17ಪಿವಿಡಿ6ತಾಲೂಕಿನ ಗುಜ್ಜನಡು ಹಾಗೂ ಸಾಸಲಕುಂಟೆ ಗ್ರಾಮದಲ್ಲಿ ಮನೆಗಳ ಕುಸಿತವಾಗಿದೆ.ಫೋಟೋ 17ಪಿವಿಡಿ7ತಾಲೂಕಿನ ವದನಕಲ್ಲು ಗ್ರಾಮದಲ್ಲಿ ಸಣ್ಣೀರಪ್ಪ ಎನ್ನುವರಿಗೆ ಸೇರಿದ್ದ ಮೂರು ಮೇಕೆ ಸಾವನ್ನಪ್ಪಿವೆ. | Kannada Prabha

ಸಾರಾಂಶ

ಇತ್ತೀಚಿಗೆ ಸುರಿದ ಮಳೆಯ ಪರಿಣಾಮ ತಾಲೂಕಿನಧ್ಯಂತ ಎಂಟು ಮನೆ ಕುಸಿತಗೊಂಡಿದ್ದು, ದೊಡ್ಡಿಯಲ್ಲಿದ್ದ ಮೂರು ಮೇಕೆ ಸಾವನ್ನಪ್ಪಿವೆ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ಇತ್ತೀಚಿಗೆ ಸುರಿದ ಮಳೆಯ ಪರಿಣಾಮ ತಾಲೂಕಿನಧ್ಯಂತ ಎಂಟು ಮನೆ ಕುಸಿತಗೊಂಡಿದ್ದು, ದೊಡ್ಡಿಯಲ್ಲಿದ್ದ ಮೂರು ಮೇಕೆ ಸಾವನ್ನಪ್ಪಿವೆ ಘಟನೆ ನಡೆದಿದೆ.ಕಳೆದ ನಾಲ್ಕುದಿನಗಳಿಂದ ಜಡಿ ಮಳೆ ಸುರಿಯುತ್ತಿದ್ದು ಫಸಲಿಗೆ ಬಂದ ಶೇಂಗಾ, ಟಮೋಟೋ ಹತ್ತಿ ಇತರೆ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು, ರಾತ್ರಿಯಿಡಿ ಸುರಿದ ಮಳೆಯ ಅರ್ಭಟಕ್ಕೆ ಹಳ್ಳಕೊಳ್ಳಗಳಲ್ಲಿ ಬಾರಿ ಪ್ರಮಾಣದ ನೀರು ಹರಿದು ಕೆರೆಕುಂಟೆಗಳಿಗೆ ನೀರು ಸಂಗ್ರಹವಾಗಿದೆ. ತಾಲೂಕಿನ ಸಿಂಗರೆಡ್ಡಿಹಳ್ಳಿ ಗ್ರಾಮದಲ್ಲಿ 1 ಹಾಗೂ ಸಾಸಲಕುಂಟೆ ಗ್ರಾಮದಲ್ಲಿ 2, ಗಂಗಸಾಗರ 1, ಗುಜ್ಜನಡು 1, ಕ್ಯಾತಗನಕೆರೆ 1 ಹಾಗೂ ರಂಗಸಮುದ್ರ ಮತ್ತು ಬೆಳ್ಳಿಬಟ್ಟಲು ಗ್ರಾಮದಲ್ಲಿ ತಲಾ ಒಂದು ಮನೆ ಸೇರಿ ಒಟ್ಟು 8 ಮನೆ ಕುಸಿದು ನೆಲಸಮಗೊಂಡಿವೆ.

ಮುನ್ಸೂಚನೆ ಹಿನ್ನೆಲೆ ಮನೆಯಿಂದ ಹೊರಬಂದಿದ್ದ ಕಾರಣ ಮನೆಯಲ್ಲಿನ ಯಾರಿಗೂ ಪ್ರಾಣಹಾನಿಯಾಗಿಲ್ಲ. ಇನ್ನೂ ತಾಲೂಕಿನ ವದನಕಲ್ಲು ಗ್ರಾಮದ ಸಣ್ಣೀರಪ್ಪರಿಗೆ ಸೇರಿದ್ದ 3 ಮೇಕೆಗಳು ಮಳೆಗೆ ನೆನೆದು ಸಾವನ್ನಪ್ಪಿವೆ. ಕಂದಾಯ ಇಲಾಖೆ ಹಾಗೂ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಘಟನೆಯ ಗ್ರಾಮಗಳಿಗೆ ತೆರಳಿ ಸಂತ್ರಸ್ಥ ಕುಟುಂಬ ಸದಸ್ಯರಿಗೆ ಸಂತ್ವಾನ ಹೇಳಿದರು. ಗುರುವಾರ ಸಹ ಜಡಿ ಮಳೆಯ ಪ್ರಭಾವ ಮುಂದುವರಿದಿದ್ದು ರಸ್ತೆ ಮನೆ, ಜನನಿಬಿಡ ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿ ಕೆಸರುಗದ್ದೆಯಲ್ಲಿ ಒಡಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆಯ ಪರಿಣಾಮ ಹೊರಹೋಗಲು ಸಾಧ್ಯವಾಗದೇ ತಾಲೂಕಿನದ್ಯಂತ ಹಸು ಎಮ್ಮೆ ಹಾಗೂ ಕುರಿ ಮೇಕೆ ಇತರೆ ಜಾನುವಾರುಗಳಿಗೆ ಮೇವಿನ ಕೊರತೆ ಸೃಷ್ಟಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ