ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಶ್ರೀ ವಾಸವಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಬೆಳವಣಿಗೆಯಿಂದ ಆರ್ಯವೈಶ್ಯ ಸಮಾಜದ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಶ್ರೀ ವಾಸವಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಿನಯ್ ಕುಮಾರ್ ತಿಳಿಸಿದ್ದಾರೆ.ಪಟ್ಟಣದ ಬಾಗೂರು ರಸ್ತೆಯಲ್ಲಿರುವ ಶ್ರೀ ವಾಸವಿ ಸಮುದಾಯ ಭವನದಲ್ಲಿ ೨೦೨೪ ಮತ್ತು ೨೫ನೇ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ ಶ್ರೀ ವಾಸವಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಬೆಳವಣಿಗೆಯಿಂದ ಆರ್ಯವೈಶ್ಯ ಸಮಾಜವನ್ನು ಬೆಳೆಸಿದಷ್ಟೇ ಸಹಕಾರಿಯಾಗುತ್ತದೆ. ಈ ಸಹಕಾರಿ ಸಂಘದಿಂದ ಆರ್ಯವೈಶ್ಯ ಸಮಾಜದವರಿಗೆ ಬಹಳಷ್ಟು ಉಪಯುಕ್ತತೆಯಲ್ಲಿ ಮುಂದಾಗಿದೆ. ಜೊತೆಯಲ್ಲಿ ನಮ್ಮ ಸಮಾಜದ ಒಳಿತಿಗಾಗಿ ಹಾಗೂ ಸಾರ್ವಜನಿಕರ ವ್ಯಕ್ತಿಗಳಿಗೂ ಕೂಡ ಸಹಾಯದ ಹಸ್ತವನ್ನು ನೀಡಲು ಮುಂದಾಗಿದೆ ಜೊತೆಯಲ್ಲಿ ಸಮಾಜಮುಖಿ ಸೇವೆಗಳಲ್ಲೂ ಕೂಡ ನಮ್ಮ ಸಹಕಾರಿ ಸಂಘವು ಮಹತ್ತರ ಕಾರ್ಯವನ್ನು ನಿರ್ವಹಿಸುತ್ತಾ ಬಂದಿದೆ. ಅದರಲ್ಲೂ ಈ ಬಾರಿ ನಮ್ಮ ಸಹಕಾರಿ ಸಂಘದಿಂದ ಬಂದಂತಹ ಲಾಭಾಂಶವನ್ನು ನಮ್ಮ ಸಮಾಜದ ದೇವಾಲಯವನ್ನು ನಿರ್ಮಾಣ ಮಾಡಲು ಕಾರ್ಯಕಾರಿ ಮಂಡಳಿ ನಿರ್ದೇಶಕರು ಮತ್ತು ಸದಸ್ಯರು ಒಪ್ಪಿಗೆ ಸೂಚಿಸಿರುವುದು ಸಂತೋಷದ ವಿಚಾರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ವಾಸವಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಗೌರವಾಧ್ಯಕ್ಷ ಆದಿಶೇಷ ಕುಮಾರ್ ಮಾತನಾಡಿ ಸಹಕಾರಿ ಸಂಘದ ಕಾನೂನುಗಳು ದಿನೇ ದಿನೇ ಬದಲಾವಣೆ ಆಗುತ್ತಾ ಬಂದಿವೆ. ಈ ಬದಲಾವಣೆಗೆ ಹಣ ಗುಣವಾಗಿ ನಮ್ಮ ಸಮಾಜದವರು ಮತ್ತು ನಮ್ಮ ಸಹಕಾರಿ ಸಂಘದ ಎಲ್ಲಾ ಸದಸ್ಯರು ಕೂಡ ಬದಲಾವಣೆಯನ್ನು ತಂದುಕೊಳ್ಳಬೇಕು. ಇಲ್ಲದೆ ಹೋದ ಪಕ್ಷದಲ್ಲಿ ಮುನ್ನೊಂದು ದಿನ ಬಹಳ ಸಂಕಟದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಹಾಗೂ ನಮ್ಮ ಸಹಕಾರಿ ಸಂಘದ ಲಾಭಾಂಶವೂ ದಿನೇ ದಿನೇ ಕಡಿಮೆಯಾಗುತ್ತಿದೆ. ಇದರಿಂದ ಮುಂದಿನ ಪರಿಸ್ಥಿತಿಯಲ್ಲಿ ಸಹಕಾರಿ ಸಂಘವು ಸೌಹಾರ್ದಯುತ ಸಹಕಾರಿ ಸಂಘವನ್ನು ಹೊರತುಪಡಿಸಿ ಬೇರೊಂದು ಸಹಕಾರಿ ಸಂಘವನ್ನು ತೆರೆಯಲು ಮುಂದಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ನಮ್ಮ ಸಮುದಾಯದವರ ಜನಸಂಖ್ಯೆಯು ಕೂಡ ತಾಲೂಕಿನಲ್ಲಿ ಕಡಿಮೆ ಇದೆ. ಆದರೆ ನಮ್ಮ ಉಚ್ಚಗೆ ಅನುಗುಣವಾಗಿ ನಾವು ನಮ್ಮ ಕಾರ್ಯಗಳಲ್ಲಿ ಹಿಂದೆ ಸರಿಯುವ ಪರಿಸ್ಥಿತಿ ಎಂದಿಗೂ ನಿರ್ಮಾಣವಾಗಿಲ್ಲ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ವಾಸವಿ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಬಾಬು ಮತ್ತು ಕಾರ್ಯದರ್ಶಿ ಮನೋಹರ್, ಶ್ರೀ ವಾಸವಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ದೀಪಾ ರಮೇಶ, ನಿರ್ದೇಶಕರುಗಳಾದ ಮಾಲಿನಿ, ಗಿರೀಶ್, ಡಿ ಶ್ರೀನಿವಾಸ್, ಸಿ ಆರ್ ಕೃಷ್ಣಪ್ರಸಾದ್, ಪ್ರತಿಭಾ, ಬಾಬು, ಸಿ ಎಸ್ ರವಿ, ಸಿ ಕೆ ಬಾಬು, ಸಿ ಭರತ್, ಸಿ ಜಿ ರಮೇಶ್, ಸಿ ಎಂ ನಾಗೇಂದ್ರ, ಸಿ ಎಂ ರಾಘವೇಂದ್ರ, ಸಿ ವಿ ನಾಗೇಂದ್ರ ಹಾಜರಿದ್ದರು.