ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ದಲಿತ ಸಂಘಟನೆ ಮುಖಂಡರು, ವೇದಮೂರ್ತಿ ಎಂಬ ವ್ಯಕ್ತಿ ಪದೇ ಪದೇ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ದಲಿತರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುತ್ತಿದ್ದಾನೆ. ಇದರ ಬಗ್ಗೆ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಪೊಲೀಸ್ ಇಲಾಖೆ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೇದಮೂರ್ತಿಯನ್ನು ಬಂಧಿಸುವ ತನಕ ಪೊಲೀಸ್ ಠಾಣೆಯಿಂದ ಹೊರ ಹೋಗುವುದಿಲ್ಲ ಎಂದು ದಲಿತ ಪರ ಸಂಘಟನೆಗಳು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ತಾಲೂಕು ದಲಿತ ಸಂಘಟನೆಗಳ ಮುಖಂಡರಾದ ಬಸ್ತಿ ರಂಗಪ್ಪ, ವಿಶ್ರಾಂತ ಪ್ರಾಂಶುಪಾಲ ರಾಜಯ್ಯ, ಸಿಂಧುಘಟ್ಟ ಸೋಮಸುಂದರ್, ಪುರಸಭಾ ಸದಸ್ಯ ಡಿ. ಪ್ರೇಮಕುಮಾರ್, ಜಿಲ್ಲಾ ಛಲವಾದಿ ಉಸ್ತುವಾರಿ ಮಾಂಬಳ್ಳಿ ಜಯರಾಮ್, ತಾಲೂಕು ಅಧ್ಯಕ್ಷ ಊಚನಹಳ್ಳಿ ನಟರಾಜ್, ಮುದುಗೆರೆ ಮಹೇಂದ್ರ, ಲಕ್ಷ್ಮೀಪುರ ರಂಗಸ್ವಾಮಿ, ಚೌಡೇನಹಳ್ಳಿ ದೇವರಾಜು, ಕೃಷ್ಣಪುರ ಗಿರೀಶ್, ಹರಿಹರಪುರ ನರಸಿಂಹ, ಪವಿಕುಮಾರ್, ಗಂಗಾಧರ್, ಬಂಡಿಹೋಳೆ ಕೃಷ್ಣಮೂರ್ತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.