ಟಿಎಂಸಿ ದುರಾಡಳಿತ ಕೊನೆ: ವೇದವ್ಯಾಸ್ ಕಾಮತ್

KannadaprabhaNewsNetwork |  
Published : May 07, 2026, 03:15 AM IST
ವೇದವ್ಯಾಸ ಕಾಮತ್ | Kannada Prabha

ಸಾರಾಂಶ

ಅಸ್ಸಾಂ, ಪುದುಚೇರಿ ಜೊತೆಗೆ ವಿಶೇಷವಾಗಿ ಪಶ್ಚಿ ಬಂಗಾಳದಲ್ಲಿ ಬಿಜೆಪಿ ಚರಿತ್ರೆಯಲ್ಲಿ ದಾಖಲಾಗುವಂತಹ ಅದ್ಭುತ ಗೆಲುವು ಸಾಧಿಸಿದ್ದು ಟಿಎಂಸಿಯ ದುರಾಡಳಿತ ಕೊನೆಗೊಂಡಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹರ್ಷ ವ್ಯಕ್ತಪಡಿಸಿದ್ದಾರೆ.

ಮಂಗಳೂರು: ಅಸ್ಸಾಂ, ಪುದುಚೇರಿ ಜೊತೆಗೆ ವಿಶೇಷವಾಗಿ ಪಶ್ಚಿ ಬಂಗಾಳದಲ್ಲಿ ಬಿಜೆಪಿ ಚರಿತ್ರೆಯಲ್ಲಿ ದಾಖಲಾಗುವಂತಹ ಅದ್ಭುತ ಗೆಲುವು ಸಾಧಿಸಿದ್ದು ಟಿಎಂಸಿಯ ದುರಾಡಳಿತ ಕೊನೆಗೊಂಡಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹರ್ಷ ವ್ಯಕ್ತಪಡಿಸಿದ್ದಾರೆ.ಟಿಎಂಸಿ ಹಾಗೂ ಕಮ್ಯುನಿಸ್ಟ್ ಎಂಬ ಒಂದೇ ನಾಣ್ಯದ ಎರಡು ಮುಖಗಳು ಬಂಗಾಳದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಮಾರಣಹೋಮ, ಮಿತಿ ಮೀರಿದ ಓಲೈಕೆ, ದೇಶದ ಭದ್ರತೆಗೆ ಸವಾಲು ಇವೆಲ್ಲವೂ ಬಿಜೆಪಿ ಗೆಲುವಿನಿಂದ ಅಂತ್ಯಗೊಂಡಿದೆ. ಭಾರತೀಯ ಜನಸಂಘದ ಸಂಸ್ಥಾಪಕರಾಗಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿ ನಾಡಿನಲ್ಲಿ ಕಮಲ ಅರಳಿರುವುದು ಇಡೀ ದೇಶದ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತಂದಿದೆ. ಈ ಅಭೂತಪೂರ್ವ ಜಯಕ್ಕೆ ಕಾರಣೀಭೂತರಾದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ನರೇಂದ್ರ ಮೋದಿ, ಅಮಿತ್ ಶಾ, ಸುವೆಂದು ಅಧಿಕಾರಿ ಸಹಿತ ಎಲ್ಲಾ ಬಿಜೆಪಿ ಪ್ರಮುಖರು, ಕಾರ್ಯಕರ್ತರು, ವಿಶೇಷವಾಗಿ ಬಂಗಾಳದ ಜನತೆ ಯಾವುದೇ ಭಯವಿಲ್ಲದೇ ಮತದಾನ ನಡೆಸಲು ಅವಕಾಶ ಮಾಡಿಕೊಟ್ಟ ಭದ್ರತಾ ಪಡೆಗಳಿಗೆ ವಿಶೇಷ ಅಭಿನಂದನೆಗಳು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹75 ಕೋಟಿಯ 12 ಬಿಡಿಎ ಸೈಟ್‌ ಕಬಳಿಕೆ: ಪಾಲಿಕೆ ಮಾಜಿ ಸದಸ್ಯರ ವಿರುದ್ಧ ದೂರು
ಕೆಂಪೇಗೌಡ ಜಯಂತಿಯಂದು ಎಸ್.ಎಂ. ಕೃಷ್ಣ ರಸ್ತೆ ದಶಪಥ ರಸ್ತೆ ಸಂಚಾರಕ್ಕೆ ಮುಕ್ತ