ಪೊಲೀಸ್ ಅಧಿಕಾರಿಗಳ ಶೌರ್ಯ ಸಾಹಸದಿಂದ ವೀರಪ್ಪನ್ ಹತ: ಮಲೆಮಹದೇಶ್ವರ ಬೆಟ್ಟದ ಇನ್ಸ್‌ಪೆಕ್ಟರ್ ಜಗದೀಶ್

KannadaprabhaNewsNetwork | Published : Oct 22, 2024 12:12 AM

ಸಾರಾಂಶ

ಹಿರಿಯ ಪೊಲೀಸ್ ಅಧಿಕಾರಿಗಳ ಶೌರ್ಯ ಸಾಹಸದಿಂದ ವೀರಪ್ಪನ್ ಹತನಾಗಿದ್ದಾನೆ ಎಂದು ಮಲೆಮಹದೇಶ್ವರ ಬೆಟ್ಟದ ಇನ್ಸ್‌ಪೆಕ್ಟರ್ ಜಗದೀಶ್ ತಿಳಿಸಿದರು. ಹನೂರಿನಲ್ಲಿ ಪೊಲೀಸ್‌ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹನೂರು

ಹಿರಿಯ ಪೊಲೀಸ್ ಅಧಿಕಾರಿಗಳ ಶೌರ್ಯ ಸಾಹಸದಿಂದ ವೀರಪ್ಪನ್ ಹತನಾಗಿದ್ದಾನೆ ಎಂದು ಮಲೆಮಹದೇಶ್ವರ ಬೆಟ್ಟದ ಇನ್ಸ್‌ಪೆಕ್ಟರ್ ಜಗದೀಶ್ ತಿಳಿಸಿದರು.

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಗೋಪಿನಾಥನ್ ಮಾರ್ಗ ಮಧ್ಯ ಸಿಗುವ ಕರಿ ಕಲ್ಲು ಗುಡ್ಡ ಅರಣ್ಯ ಪ್ರದೇಶದ ಬಳಿ 1990ರಲ್ಲಿ ನಾಲ್ವರು ವೀರಪ್ಪನ್ ಕಾರ್ಯಾಚರಣೆ ವೇಳೆ ಹುತಾತ್ಮರಾದ ಪೊಲೀಸ್ ಅಧಿಕಾರಿಗಳಾದ ದಿನೇಶ್, ರಾಮಲಿಂಗಪ್ಪ, ಚಂದಪ್ಪ, ಜನಾರ್ಧನ್ ವೀರಪ್ಪನ್ ಸಂಚಿಗೆ ಬಲಿಯಾದ ಸ್ಮಾರಕದ ಬಳಿ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಹುತಾತ್ಮ ಪೊಲೀಸ್ ಅಧಿಕಾರಿಗಳಿಗೆ ನಮನ ಸಲ್ಲಿಸಿ ಮಾತನಾಡಿದರು.ಕಾಡುಗಳ್ಳ ವೀರಪ್ಪನ್ ಸಂಚಿನಿಂದ 1990ರಲ್ಲಿ ಹತರಾದ ಪೊಲೀಸ್ ಸಿಬ್ಬಂದಿ ಸ್ಮರಣಾರ್ಥ ಪೊಲೀಸ್ ಇಲಾಖೆ ಸ್ಮಾರಕ ನಿರ್ಮಾಣ ಮಾಡಿದೆ. ಇಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹುತಾತ್ಮ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಿಣ್ಯಂ ಅರಣ್ಯ ಪ್ರದೇಶದಲ್ಲಿ ಗುಂಡಿನ ಕಾಳಗದಿಂದ ವೀರಪ್ಪನ್ ದಾಳಿಯಲ್ಲಿ ಹುತಾತ್ಮರಾದ ಸ್ಥಳದಲ್ಲಿ ನಿರ್ಮಾಣವಾಗಿರುವ ಸ್ಮಾರಕದ ಬಳಿ ಪೊಲೀಸ್ ಇಲಾಖೆ ವತಿಯಿಂದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಲಿಂಗರಾಜು ಹಾಗೂ ಬೈರಪ್ಪ ಅವರ ನೇತೃತ್ವದಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ ಆಯೋಜಿಸಲಾಗಿತ್ತು. ಜೊತೆಗೆ ರಾಮಪುರ ಪೊಲೀಸ್ ಠಾಣಾ ಮೇಲೆ ಸಹ ವೀರಪ್ಪನ್ ದಾಳಿ ನಡೆಸಿ ಹಲವಾರು ಪೊಲೀಸರನ್ನು ಗುಂಡಿನ ದಾಳಿಗೆ ಒಳಗಾದ ಪೊಲೀಸರ ಹುತಾತ್ಮಸ್ಥಳವಾದ ಠಾಣಾ ಮುಂಭಾಗ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆಯಲ್ಲಿ ರಾಮಪುರ ಮುಖ್ಯಪೇದೆ ಸಿದ್ದೇಶ್ ಹಾಗೂ ರಘು ರಂಗಸ್ವಾಮಿ ಪೊಲೀಸ್ ಪೇದೆಗಳಾದ ಪರಶುರಾಮ್, ಪವರ್ ದಿನೇಶ್ ಇನ್ನಿತರರು ಉಪಸ್ಥಿತರಿದ್ದರು.

Share this article