ವೀರಶೈವ ಬ್ಯಾಂಕ್ ಗೆ 83 ಲಕ್ಷ ರು. ಲಾಭ

KannadaprabhaNewsNetwork |  
Published : Jul 22, 2024, 01:17 AM IST
ಚಿತ್ರದುರ್ಗ ಪೋಟೋ ಸುದ್ದಿ 111  | Kannada Prabha

ಸಾರಾಂಶ

Veerashaiva bank is profit 83 lakh Rs: achievement fince sector

-ವಾರ್ಷಿಕ ಮಹಾ ಸಭೆಯಲ್ಲಿ ಅಧ್ಯಕ್ಷ ಪಟೇಲ್ ಶಿವಕುಮಾರ್ ಮಾಹಿತಿ

-------

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ನಗರದ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 2023-24ನೇ ಸಾಲಿಗೆ 83,03,755 ರು ನಿವ್ವಳ ಲಾಭ ಪಡೆದಿದೆ ಎಂದು ಅಧ್ಯಕ್ಷ ಪಟೇಲ್ ಶಿವಕುಮಾರ್ ತಿಳಿಸಿದರು.

ನಗರದ ಪಂಚಚಾರ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 23ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಸೊಸೈಟಿಯು 1734 ಸದಸ್ಯರನ್ನು ಹೊಂದಿದ್ದು, 79.46 ಲಕ್ಷ ರು ಷೇರು ಬಂಡವಾಳ, 13.50 ಕೋಟಿ ರು. ಠೇವಣಿ ಹೊಂದಿದ್ದು, 5.68 ಕೋಟಿ ರು. ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡಲಾಗಿದೆ. 20.51 ಕೋಟಿ ರು. ದುಡಿವ ಬಂಡವಾಳ ಹೊಂದಿದ್ದು,12.36 ಕೋಟಿ ರು. ಸಾಲ ಮತ್ತು ಮುಂಗಡವಾಗಿ ನೀಡಲಾಗಿದೆ ಎಂದರು.

ಸೊಸೈಟಿಯಲ್ಲಿ ಗ್ರಾಹಕರು ಈ ಸಾಲಿನಲ್ಲಿ 59 ಲಕ್ಷ ರು.ಠೇವಣಿಯಾಗಿ ಇರಿಸಿದ್ದಾರೆ. ಸೊಸೈಟಿಯಲ್ಲಿ ಭದ್ರತಾ ಕಪಾಟು, ಚಿನ್ನಾಭರಣದ ಮೇಲೆ ಸಾಲ, ಉಳಿತಾಯ ಖಾತೆ, ಠೇವಣಿ, ಸಾಲ ವಸೂಲಾತಿ ಸಹಾ ಮುಂದಿದೆ. 2015-16ರಿಂದಲೂ ಸೊಸೈಟಿಯು ಆಡಿಟ್‍ನಲ್ಲಿ ಎ ವರ್ಗ ಪಡೆದಿದ್ದು, ತನ್ನ ಷೇರುದಾರರಿಗೆ ಅಂದಿನಿಂದಲೂ ಶೇ.20 ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ. ನಗರದ ಬಿವಿಕೆ ಬಡಾವಣೆಯಲ್ಲಿ ಸೊಸೈಟಿಯ ನಿವೇಶನ ಇದ್ದು ಕಟ್ಟಡ ನಿರ್ಮಾಣದ ಬಗ್ಗೆ ಆಡಳಿತ ಮಂಡಳಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುನಲ್ಲಿ ಶೇ.80ಕ್ಕಿಂತ ಹೆಚ್ಚಿಗೆ ಅಂಕ ಪಡೆದ ಸೊಸೈಟಿಯ ಷೇರುದಾರರ ಮಕ್ಕಳನ್ನು ಸನ್ಮಾನಿಸಲಾಯಿತು. ಕಳೆದ ಒಂದು ವರ್ಷದಲ್ಲಿ ನಿಧನರಾದ ಸೊಸೈಟಿಯ ಷೇರುದಾರರಿಗೆ ಮೌನ ಆಚರಿಸಿ ಸಂತಾಪ ಸೂಚಿಸಲಾಯಿತು. ಸೊಸೈಟಿಯ ನಿರ್ದೇಶಕರಾದ ಆರ್ ಶೈಲಜಾ ಪ್ರಾರ್ಥಿಸಿದರೆ, ಉಪಾಧ್ಯಕ್ಷ ಜಿ.ಟಿ.ಸುರೇಶ್ ಸ್ವಾಗತಿಸಿದರು, ವ್ಯವಸ್ಥಾಪಕ ಕುಸುಮ ಜವಳಿ ಕಾರ್ಯಕ್ರಮ ನಿರೂಪಿಸಿದರು.ನಿರ್ದೇಶಕರಾದ ಎಸ್.ಪರಮೇಶ್ವರಪ್ಪ, ಎಸ್.ವಿ.ನಾಗರಾಜ್, ಎಸ್.ಷಣ್ಮುಖಪ್ಪ, ಬಿ.ಎಂ.ಕರಿಬಸವಯ್ಯ, ಸಿ.ಚಂದ್ರಪ್ಪ, ಜಯಶ್ರೀ ಇದ್ದರು.

--------------

ಪೋಟೋ: ಚಿತ್ರದುರ್ಗದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ವೀರಶೈವ ಕ್ರೆಡಿಟ್ ಕೋ ಆಪರೇಟಿವ ಸೊಸೈಟಿ ಸರ್ವ ಸದಸ್ಯರ ಸಭೆಯನ್ನು ಅಧ್ಯಕ್ಷ ಪಟೇಲ್ ಶಿವಕುಮಾರ್ ಉದ್ಘಾಟಿಸಿದರು.-----

ಪೋಟೋ: 21 ಸಿಟಿಡಿ 9

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ