- ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿಗೆ ಸಮುದಾಯದ ಮುಖಂಡರ ಮನವಿ
ಅಭಿಮಾನಿಯನ್ನು ಧಾರುಣವಾಗಿ ಹತ್ಯೆಗೈದಿರುವ ನಟ ದರ್ಶನ್ ಹಾಗೂ ಅವರ ಸ್ನೇಹಿತರ ವಿರುದ್ಧ ಕಠಿಣ ಕಾನೂನುಕ್ರಮ ಕೈಗೊಂಡು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಮುಖಂಡರು ಆಗ್ರಹಿಸಿದ್ದಾರೆ.
ಈ ಸಂಬಂದ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಪಿ.ಚಂದ್ರಮೌಳಿ, ಸಿನಿಮಾ ಶೈಲಿಯಲ್ಲಿ ಅಭಿಮಾನಿ ರೇಣುಕಸ್ವಾಮಿಯನ್ನು ಬರ್ಬರವಾಗಿ ಕೊಲೆಗೈದಿರುವುದು ದಿಗ್ಬ್ರಮೆ ಮೂಡಿಸಿದೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ನಟ ದರ್ಶನ್ ಈ ರೀತಿ ಪೈಶಾಚಿಕ ಕೃತ್ಯವೆಸಗಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ತಿಳಿಸಿದರು.
ತೂಗದೀಪ ಶ್ರೀನಿವಾಸ್ ಅವರು ಸಿನಿಮಾದಲ್ಲಿ ಖಳನಾಯಕರು. ವೈಯಕ್ತಿಕ ಬದುಕಿನಲ್ಲಿ ಬಹಳಷ್ಟು ಉನ್ನತ ವ್ಯಕ್ತಿಯಾಗಿದ್ದರು. ಅವರ ಮಗ ದರ್ಶನ್ ಸಿನಿಮಾದಲ್ಲಿ ನಾಯಕ ನಟರಂತೆ ಗುರುತಿಸಿಕೊಂಡು ವೈಯಕ್ತಿ ವಾಗಿ ಖಳನಟರಾಗಿ ತನ್ನದೇ ಅಭಿಮಾನಿಯನ್ನು ಹೀನಾಯವಾಗಿ ಕೊಲೆಗೈದಿರುವುದು ನಾಚಿಕೆ ಗೇಡಿನ ಸಂಗತಿ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಹಾಸಭಾ ನಿರ್ದೇಶಕ ನಿಶಾಂತ್, ಮುಖಂಡರಾದ ವೀರಭದ್ರಯ್ಯ, ಎ.ಎಸ್.ಎಸ್. ಆರಾಧ್ಯ, ಓಂಕಾರಸ್ವಾಮಿ, ಎಚ್.ಎನ್.ನಟರಾಜ್, ಈಶ್ವರಪ್ಪ, ಉಮೇಶ್, ಕಾಂತರಾಜ್, ಅಶೋಕ್ ಕುಮಾರ್, ಸುರೇಶ್, ಸಿ.ಆರ್.ಅಶೋಕ್, ಪಂಚಾಕ್ಷರಿ ಹಾಜರಿದ್ದರು.
ನಟ ದರ್ಶನ್ ಹಾಗೂ ಅವರ ಸ್ನೇಹಿತರ ವಿರುದ್ಧ ಕಠಿಣ ಕಾನೂನುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ